

4th August 2026

ಬೆಳಗಾವಿ :
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಆಗಸ್ಟ್ 24 ಮತ್ತು 25ರಂದು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಣ್ಣಿಕೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ( ಸಿಆರ್ಪಿ ) ಎಸ್. ಎಸ್. ಪಾಟೀಲ ತಿಳಿಸಿದರು.
ಅವರು ಮಂಗಳವಾರ ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಆಗಸ್ಟ್ 24ರಂದು ಅಥ್ಲೆಟಿಕ್ಸ್ (ಮೇಲಾಟಗಳು) ಸ್ಪರ್ಧೆಗಳು ಹಾಗೂ ಆಗಸ್ಟ್ 25ರಂದು ಗುಂಪು ಆಟಗಳ ಸ್ಪರ್ಧೆಗಳು ನಡೆಯಲಿವೆ. ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಶಿಕ್ಷಕರು ಸಮನ್ವಯದಿಂದ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಅಥ್ಲೆಟಿಕ್ಸ್ ಹಾಗೂ ಗುಂಪು ಆಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಹೆಸರನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕ ಪೂರ್ವ ನೋಂದಣಿ ಮಾಡಿಸಬೇಕು. ಅಲ್ಲದೆ, ಆಗಸ್ಟ್ 17ರೊಳಗೆ ಕ್ಲಸ್ಟರ್ನ ಎಲ್ಲಾ ಕ್ರೀಡಾಪಟುಗಳ ಪಟ್ಟಿಯನ್ನು ಹಣ್ಣಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹಣ್ಣಿಕೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾಂತೇಶ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ವಿ. ಸಿ. ಅಡಕಿ, ಬಿ. ಎಂ. ಕಡೋಲಕರ ಹಾಗೂ ಪಿ. ಎಂ. ಜೋರಾಪುರ ಮಾತನಾಡಿದರು. ಎಸ್. ಬಿ. ಲಠ್ಠೆ ಸ್ವಾಗತಿಸಿದರು.
ಸಭೆಯಲ್ಲಿ ಆರ್. ಬಿ. ಮಲ್ಲೂರ, ಪ್ರಕಾಶ ನಾಯ್ಕರ, ಬಿ. ಎಲ್. ಇಂಚಲ, ಎಂ. ವಿ. ಪಾಟೀಲ, ಓ. ಎಸ್. ಚಿಕ್ಕಲದೀನಿ ಆರ್. ಎಫ್. ಪಾಟೀಲ ಸೇರಿದಂತೆ ಹಣ್ಣಿಕೇರಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರ *ಫೋಟೋ ಶಿರ್ಷಕ್*:.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಬಾಭವನದಲ್ಲಿ ನಡೆದ ದೈಹಿಕ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಹಣ್ಣಿಕೇರಿ ಸಿಆರ್ಪಿ ಎಸ.ಎಸ್. ಪಾಟೀಲ ಅವರು ಮಾತನಾಡಿದರು.

ಹಿಟ್ನಾಳ್ ಗೆ ಕೈತಪ್ಪಿದ ಸಚಿವ ಸ್ಥಾನ: ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ರಾಜೀನಾಮೆ- ಕೆಲವು ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ

ಮಹಿಳೆಯರ ಸಾಹಿತ್ಯ, ಸಾಂಸ್ಕೃತಿಕ, ಬೌದ್ಧಿಕ ಕೊಡುಗೆ ಗುರುತಿಸುವಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಮಹತ್ವದ್ದು*

ಬರ ಪರಿಸ್ಥಿತಿ ಅಧ್ಯಯನಕ್ಕೆ ಉಸ್ತುವಾರಿ ಸಚಿವರ ನೇಮಕ- ಕೊಪ್ಪಳ ಜಿಲ್ಲೆಗೆ ತಂಗಡಗಿ: ಗದಗ ಜಿಲ್ಲೆಗೆ ರಾಯರೆಡ್ಡಿಗೆ ಉಸ್ತುವಾರಿ

ಪಿಎಸ್ ಐರಿಂದ ಡ್ಯಾಂನ ಮಣ್ಣು ಅಕ್ರಮ ಸಾಗಾಣೆ- ಎಂಎಲ್ ಸಿ ಹೇಮಲತಾ ನಾಯಕರಿಂದ ಅಕ್ರಮ ಬಯಲು-ಕ್ರಮಕ್ಕೆ ಎಸ್ ಪಿಗೆ ಸೂಚನೆ