ಬೆಳಗಾವಿ : ಬೈಲಹೊಂಗಲ ನಗರದ ಹಳೆ ಪ್ರೇರಣಾ ಶಾಲೆಯಲ್ಲಿ ಶುಕ್ರವಾರ ನಡೆದ ತಾಲೂಕಾ ಮಟ್ಟದ 14 ವಯೋಮಾನದ ಬಾಲಕರ ಕುಸ್ತಿ ಸ್ಪರ್ಧೆಯಲ್ಲಿ ಹಣ್ಣಿಕೇರಿ ಹಿರಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಕು ಸಿದ್ದನಾಯಿಕ ಶೇಖರ ಭಾಂವಿ ಇವನು 41 ಕೆ.ಜಿ ತೂಕದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.
ವಿದ್ಯಾರ್ಥಿ ಸಾಧನೆಗೆ ಬೈಲಹೊಂಗಲ ಬಿಇಓ ಎ.ಎನ್.ಪ್ಯಾಟಿ. ಶಿಕ್ಷಣ ಇಲಾಖೆ ಅಧಿಕಾರಿಕಳು. ಬೈಲಹೊಂಗಲ ದೈಹಿಕ ಶಿಕ್ಷಣ ಪರವಿಕ್ಷಕರಾದ ಈಶ್ವರ ಕಡಾಡಿ ಹಣ್ಣಿಕೇರಿ ಶಾಲೆಯ ಪ್ರಧಾನಗುರು, ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಹಣ್ಣಿಕೇರಿ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಸಿದ್ದನಾಯಿಕ ಭಾವಿ ವಿದ್ಯಾರ್ಥಿಗೆ ಹಿರಿಯ ಶಿಕ್ಷಕ ಬಿ.ಎಮ್.ಕಡೋಲಕರ ಇವರು ಮಾರ್ಗದರ್ಶನ ನೀಡಿದ್ದಾರೆ.







