ಬೆಳಗಾವಿ : ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿಗೊಳ್ಳುತ್ತದೆ. ಪಾಠದ ಜತೆಗೆ ಕ್ರೀಡೆಗೂ ಅಷ್ಟೇ ಆದ್ಯತೆ ನೀಡಬೇಕಿದೆ ಎಂದು ಬೈಲಹೊಂಗಲ ನೂತನ ದೈಹಿಕ ಶಿಕ್ಷಣ ಪರವಿಕ್ಷಕ ಈಶ್ವರ ಕಡಾಡಿ ಹೇಳಿದರು. ಬೃಲಹೊಂಗಲ ನಗರದ ಹಳೆ ಪ್ರೇರಣಾ ಶಾಲೆಯಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ಆಯೋಜಿಸಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಯೋಗ ಕುಸ್ತಿ ಚದುರಂದ ಕ್ರೀಡಾಕೂಟದ ಸಮಾರಂಭದಲ್ಲಿ ಮಾತನಾಡಿದರು ಅವರು, ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗವಹಿಸಿರುವುದೇ ಅತಿ ಮುಖ್ಯ ಎಂದರು. ತಾಲೂಕು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ, ಶಿಕ್ಷಕರ ಸಂಘಗಳ ಪದಾಧಿಕಾರಿ ಮತ್ತು ದೈಹಿಕ ಶಿಕ್ಷಕರು ಸೇರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೋಟ ಯಶಸ್ವಿಗೊಳಿಸಿದರು ಎಂದು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಸ್ಪರ್ಧೆ ಬಳಿಕ ನಾನಾ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಫೋಟೋ ಶಿರ್ಷಕೆ : ಬೈಲಹೊಂಗಲ ತಾಲೂಕಾ ಮಟ್ಟದ ಕ್ರೀಡಾಕೋಟಕ್ಕೆ ಭಾಗವಹಸಿದ್ದ ಕ್ರೀಡಾಪಟ್ಟುಗಳು







