೧೦೧ನೇ ವಾರ್ಷಿಕ ಮಹಾಸಭೆ
ಬೈಲಹೊಂಗಲ: ದಿನಾಂಕ ೦೬.೦೯.೨೦೨೬ ರಂದು ಬೈಲಹೊಂಗಲ ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕಿನ ೧೦೧ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಶ್ರೀ ಬಿ. ಬಿ. ಗಣಾಚಾರಿ ಕಲ್ಯಾಣ ಮಂಟಪ, ಮುರಗೋಡ ರಸ್ತೆ, ಬೈಲಹೊಂಗಲ ಜರುಗಿತು.
೧೯೨೫ ರಿಂದ ಬ್ಯಾಂಕಿAಗ್ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಪ್ರತಿಷ್ಟಿತ ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ ಲಿ., ೨೦೨೫-೨೬ನೇ ಸಾಲಿನಲ್ಲಿ ಒಟ್ಟು ೧೧.೦೨ ಕೋಟಿ ರೂ. ಲಾಭ ಗಳಿಸಿದ್ದು, ೨.೧೮ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷರಾದ ಡಾ. ಬಿ. ಎಚ್. ಮೆಟಗುಡ್ಡ ಹೇಳಿದರು. ''ಬ್ಯಾಂಕಿನ ಒಟ್ಟು ವ್ಯವಹಾರ ೮೧೦ ಕೋಟಿ ರೂ. ಆಗಿದ್ದು, ಸಾಲ ವಿತರಣೆ ಮತ್ತು ವಸೂಲಾತಿ ಎಲ್ಲವೂ 'ಅ' ವರ್ಗದಲ್ಲಿದೆ, ೯ ಶಾಖೆ ಪ್ರಗತಿಯಲ್ಲಿವೆ'' ಎಂದರು. ೧೧.೪೧ ಕೋಟಿ ರೂ. ಶೇರು ಬಂಡವಾಳ, ೪೬೨.೫೯ ಕೋಟಿ ರೂ. ಠೇವು ಹೊಂದಿದೆ. ೫ ಲಕ್ಷ ರೂ. ವರೆಗಿನ ಠೇವಿಗೆ ವಿಮೆ ರಕ್ಷಣೆ ಒದಗಿಸಲಾಗಿದೆ. ೩೪೭.೧೧ ಕೋಟಿ ರೂ. ಸಾಲ ವಿತರಿಸಲಾಗಿದೆ,'' ಎಂದು ತಿಳಿಸಿದರು.
ಶ್ರೀ ಗುರುಪುತ್ರಪ್ಪ ಮಲ್ಲೂರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀ ಸುರೇಶ ಗೀರನವರ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಶ್ರೀ ಜಗದೀಶ ಮೆಟಗುಡ್ಡ, ಕೆ.ಎಲ್.ಇ ನಿರ್ದೇಶಕ ಶ್ರೀ ವಿಜಯ ಮೆಟಗುಡ್ಡ, ಕೆಎಲ್ಇ ಮಾಜಿ ನಿರ್ದೇಶಕ ಶ್ರೀ ಎಸ್. ಸಿ. ಮೆಟಗುಡ್ಡ ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಶ್ರೀ ಮಲ್ಲಪ್ಪ ಬೋಳಣ್ಣವರ, ನಿರ್ದೇಶಕರಾದ ಶ್ರೀ ಬಾಬು ಪತ್ತೆಣ್ಣವರ, ಶ್ರೀ ಅನಿಲ ಮೆಟಗುಡ್ಡ, ಶ್ರೀ ರಾಜಶೇಖರ ಮೆಟಗುಡ್ಡ, ಶ್ರೀ ಮಹಾಂತೇಶ ಮೆಟಗುಡ್ಡ, ಶ್ರೀ ಚನ್ನಬಸಪ್ಪ ಹೊಂಡದಕಟ್ಟಿ, ಶ್ರೀ ಬಸವರಾಜ ಸಾಲಿಮಠ, ಶ್ರೀ ಗುರು ಮೆಟಗುಡ್ಡ, ಶ್ರೀ ಚೆನ್ನಪ್ಪ ಹೊಸೂರ, ಶ್ರೀ ವಿಶ್ವನಾಥ ಮೆಟಗುಡ್ಡ, ಶ್ರೀ ಬಸವರಾಜ ಮಡಿವಾಳರ, ಶ್ರೀ ಅಶೋಕ ಮೆಟಗುಡ್ಡ, ಶ್ರೀ ಶ್ರೀಶೈಲ ಮೆಟಗುಡ್ಡ, ಶ್ರೀಮತಿ ರಾಜಶ್ರೀ ಬಿಳ್ಳೂರ, ಶ್ರೀಮತಿ ಕವಿತಾ ಹೊಸೂರ, ಶ್ರೀ ಮಹ್ಮದರಫೀಕ್ ನಾಯಿಕ, ಶ್ರೀ ವಿಜಯಕುಮಾರ ಬೆಳವಡಿ, ಶ್ರೀ ಬಸವರಾಜ ಬೆಟಗೇರಿ, ಶ್ರೀ ಶಿವಾನಂದ ಭಾವಿಹಾಳ ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಕ್ಕೆ, ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ಅರ್ಬನ್ ಬ್ಯಾಂಕ್ ನಿರ್ದೇಶಕ ಮಹಾಂತೇಶ ಮೆಟಗುಡ್ಡ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಶ್ರೀ ರಾಘವೇಂದ್ರ ನುಚ್ಚಿ ನಿರೂಪಿಸಿದರು. ನಿರ್ದೇಶಕ ಶ್ರೀ ಎಸ್.ಜಿ. ಬೂದಯ್ಯನವರಮಠ ವಂದಿಸಿದರು.







