30th May 2025
ಕರ್ನಾಟಕದಲ್ಲೂ ದೆಹಲಿ ಪಂಜಾಬ್ ಮಾದರಿ ಆಡಳಿತ ತರಲಾಗುವುದೆಂದು ಆಮ್ ಆದ್ಮ ಪಾರ್ಟಿ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹೇಳಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಮಾದರಿ ಆಡಳಿತವನ್ನು ಇಲ್ಲಿ ತರುತ್ತೇವೆ ಕರ್ನಾಟಕದ ಐದಾರು ಜಿಲ್ಲೆ ಹಲವಾರು ತಾಲೂಕುಗಳಲ್ಲಿ ಪ್ರವಾಸ ಮಾಡಿದ್ದೇವೆ ರಸ್ತೆಗಳು ಸರಿ ಇಲ್ಲ, ನೀರಿನ ಕೊರತೆ ಇದೆ ರೈತರ ಸಮಸ್ಯೆಗಳಿವೆ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಭ್ರಷ್ಟಾಚಾರ, ನಿರ್ಲಕ್ಷತೆಯಾಗಿದೆ. ರಾಜಕಾರಣಿಗಳಾಗಲಿ ಸರ್ಕಾರಿ ನೌಕರರಾಗಲಿ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿಲ್ಲ.ದೆಹಲಿ ಹಾಗೂ ಪಂಜಾಬ್ದಲ್ಲೂ ಇದೇ ರೀತಿ ವ್ಯವಸ್ಥೆ ಇತ್ತು ಅದನ್ನು ನಾವು ಸರಿಪಡಿಸಿದ್ದೇವೆ. ಪಂಜಾಬದಲ್ಲಿ ಮಾದಕ ದ್ರವ್ಯದ ಹಾವಳಿಯನ್ನು ಶೂನ್ಯ ಸ್ಥಿತಿಗೆ ತಂದಿದ್ದೇವೆ. ಸ್ವಚ್ಛ ಆಡಳಿತವನ್ನು ಕೊಡುವುದಕ್ಕಾಗಿ ನಾವು ಬರುವ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತೇವೆ. ಒಂದು ನಯ್ಯಾ ಪೈಸೆಯನ್ನೂ ಖರ್ಚು ಮಾಡದೆ ಯಾರಿಗೂ ಕೊಡದೆ ನಾವು ಪಂಜಾಬ್ ಮತ್ತು ದೆಹಲಿಯಲ್ಲಿ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದೇವೆ. ಕರ್ನಾಟಕದಲ್ಲೂ ನಾವು ಆಮ್ ಅಮ್ಮ ಪಾರ್ಟಿಯಿಂದ ಸ್ಪರ್ಧಿಸಿ ಗೆದ್ದು ಭ್ರಷ್ಟಾಚಾರ ರಹಿತ ಉತ್ತಮ ಆಡಳಿತವನ್ನು ತರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ಹಾಲಗಿ ಗೌಡ, ಜಗದೀಶ್ ಕದಮ್ ವಿಜಯ ಪಾಟೀಲ್ ಸೇರಿದಂತೆ ಇತರರು ಇದ್ದರು.
18th May 2025
ಬಿಜಗರಣಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ… ಬೆಳಗಾವಿ : ಬಿಜಗರಣಿ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ನಿಂತರೆ ಒಂದು ದಿನ ಸಾಲುವುದಿಲ್ಲ. ಪ್ರತಿಯೊಬ್ಬರು ಅವರ ಜೀವನ ಚರಿತ್ರೆಯನ್ನು ಓದಬೇಕು. ಅವರ ಸಾಧನೆಯನ್ನು ತಿಳಿದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಿಜಗರಣಿ ಗ್ರಾಮದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ಮೂರ್ತಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಚಿವರು, ಇಂದಿನ ಯುವಕರು ಅಂಬೇಡ್ಕರ್ ಅವರ ಆದರ್ಶವನ್ನು ಇಟ್ಟುಕೊಂಡು ಓದಬೇಕು, ಬೆಳೆಯಬೇಕು, ಜೀವಿಸಬೇಕು. ಇದೇ ಅವರಿಗೆ ನಿಜವಾಗಿ ನಾವು ನೀಡಬಹುದಾದ ಕೊಡುಗೆ ಎಂದರು.
ಲಕ್ಷ್ಮೀ ತಾಯಿ ಪೌಂಡೇಷನ್ ವತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿರುವ ಮಹನೀಯರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಕ್ಷೇತ್ರದಲ್ಲಿ ಅನೇಕ ಮಹನೀಯರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಬದುಕು, ತತ್ವ, ಆದರ್ಶಗಳು ನಮ್ಮೆಲ್ಲರ ಪಾಲಿಗೆ ಮಾರ್ಗದರ್ಶನ ವಾಗಿವೆ. ಸಮಾನತೆ ಮತ್ತು ಪ್ರಗತಿಯ ಕನಸು ಕಂಡ ಮೇರು ನಾಯಕ ಅವರು. ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿದೀಪ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ, ಎಂದಿಗೂ ಯುವಜನತೆಗೆ ಸ್ಫೂರ್ತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ಸಂದರ್ಭದಲ್ಲಿ ಯುವರಾಜ್ ಕದಂ, ಮಾವಳ್ಳಿ ಶಂಕರ್, ಸಿದ್ದಪ್ಪ ಕಾಂಬಳೆ, ಮನೋಹರ್ ಬೆಳಗಾಂವ್ಕರ್, ಸಂತೋಷ ಕಾಂಬಳೆ, ಸುತಾರಿ ಜಾಧವ್, ಮಹೇಶ ಕೋಲಕಾರ್, ನಿಂಗಪ್ಪ ಜಾಧವ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ನಾಯ್ಕ್, ನಾಮದೇವ್ ಮೊರೆ, ಯಲ್ಲಪ್ಪ ಬೆಳಗಾಂವ್ಕರ್, ಬಾಳು ದೇಸೂರಕರ್, ತೆರಸೆ ಕುಟುಂಬದವರು ಸೇರಿದಂತೆ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.*****
15th April 2025
ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ
ಬದಿಯ ಸ್ಥಳಾವಕಾಶಕ್ಕೆ ಕ್ರಮ
ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ.
ಬೆಳಗಾವಿ. ೧೫- ದೇವಸ್ಥಾನದ ಬಳಿಯ ಖುಲ್ಲಾ ಜಾಗೆ ವ್ರದ್ಧರು, ಮಹಿಳೆಯರು, ಮಕ್ಕಳಿಗೆ ವಿಹಾರಕ್ಕೆ ಜಾತ್ರೆ,ಉತ್ಸವಗಳಿಗೆ ಸೂಕ್ತವಾಗಿದ್ದು,
ಅಗತ್ಯ ಕ್ರಮ ಕೈಗೊಳ್ಳುವದಾಗಿ ರಾಜ್ಯ ಲೋಕೋಪಯೋಗಿ ಹಾಗೂ ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಅವರು ಸೋಮವಾರ ಬೆಳಗಾವಿ ರಾಮತೀರ್ಥನಗರದಲ್ಲಿ ಜೀರ್ಣೋದ್ಧಾರಗೊಂಡು, ಹೊಸ ವಿನ್ಯಾಸ ದಲ್ಲಿ ರೂಪುಗೊಂಡಿರುವ ಭಕ್ತರಾಕರ್ಷಣೆಯ ಕೇಂದ್ರವೆನಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟು, ಗದ್ದುಗೆಯ ಆಶೀರ್ವಾದ ಪಡೆದು , ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ, ದೇವಸ್ಥಾನದ ನೂತನ ಫಲಕ ಅನಾವರಣಗೊಳಿಸಿ , ಅಗತ್ಯ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ ಮನವಿ ಸ್ವೀಕರಿಸಿ , ರಹವಾಸಿಗಳನ್ನುದ್ದೇಶಿಸಿ ಮಾತನಾಡಿದರು. ರಾಮತೀರ್ಥನಗರದ ಜನರ ಪ್ರೀತಿಯ ಕರೆಗೆ ಧನ್ಯವಾದಗಳು, ಶ್ರೀ ದುರ್ಗಾ ಮಹಿಳಾ ಮಂಡಳ ಮತ್ತು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಕೋರಿಕೊಂಡ ಮನವಿಗೆ ಸ್ಪಂದಿಸಿ ಅಭಿಮಾನದಿಂದ ಮಾತನಾಡಿದರು. ನಿಮ್ಮಮನವಿಯಲ್ಲಿಯ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಮಂಜೂರು ಮಾಡಲು ಆದೇಶಿಸುವದಾಗಿ ಹೇಳಿದರು. ಜನರ ಆಶಯಗಳನ್ನು ಈಡೇರಿಸುವದೇ ಸರ್ಕಾರದ ಕಾರ್ಯ.ಎಂದರಲ್ಲದೆ, ಸನ್ಮಾನಕ್ಕೆ ಧನ್ಯವಾದ ಹೇಳಿದರು.
ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿ, ಮಾತನಾಡಿ , ಸಚಿವ ಸತೀಶ ಜಾರಕಿಹೊಳಿ ನಮ್ಮವರು. ಅವರಲ್ಲಿಯ ದೂರದ್ರಷ್ಟಿ, ಯಾರಿಗೂ ನಿಲುಕದು. ಅವರೊಬ್ಬ ಕರ್ನಾಟಕದ ಮಹಾನ್ ಶಕ್ತಿ ಅಂಥವರು ನಮ್ಮ ಕರೆ ಮನ್ನಿಸಿ ದೇವಸ್ಥಾನಕ್ಕೆ ಬಂದಿದ್ದು ಈ. ರಾಮತೀರ್ಥನಗರ ಮತ್ತು ಈ ಸ್ಥಳದ ಪುಣ್ಯ. ಸತೀಶ ಅವರ ಯೋಚನೆಗಳು , ಮತ್ತು ಯೋಜನೆಗಳು ಅಸಂಖ್ಯಾತ ವಿದ್ಯಾವಂತರ ಬದುಕಿಗೆ ಕೈಗನ್ನಡಿಯಾಗಿವೆ. ಎಲ್ಲ ಕ್ಷೇತ್ರಗಳಲ್ಲೂ ಅವರು ವಿಜಯಶೀಲರೆನಿಸುವದಕ್ಕೆ ಅವರಲ್ಲಿಯ ವಿಶಾಲ ಹೃದಯವಂತಿಕೆ ಸಾಕ್ಷಿಯಾಗಿದೆ ಎಂದರಲ್ಲದೆ ಸನ್ಮಾನ ಸ್ವೀಕರಿಸಿದ್ದಕೆ ಸಂಘದ ಪರ ಧನ್ಯವಾದ ಹೇಳಿದರಲ್ಲದೆ, ಉಪಸ್ತಿತರಿದ್ದ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಎಸ್ ಜಿ ಕಲ್ಯಾಣಿ, ಮನೋಹರ ಕಾಜಗಾರ, ಎಸ್ ಎಲ್ ಸನದಿ, ಜಿ ಎಸ್ ಪಾಟೀಲ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಡಿ ಎಮ್ ಟೊಣ್ಣೆ , ಮಲ್ಹಾರ ದಿಕ್ಷಿತ್, ದುಂಡಪ್ಪಾ ಉಳ್ಳೇಗಡ್ಡಿ, ರೌದ್ರ ಗೌಡ ಜುಟ್ಟನ್ನವರ, ಪ್ರಹ್ಲಾದ ಹೊಳೆಯಾಚಿ, ಶಿವಾನಂದ ಕಾಗತೀಕರ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಆನಂದ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಹಿರೇಮಠ, ಜಿ ಐ ದಳವಾಯಿ, ಎನ್ ಬಿ ಹಣ್ಣಿಕೇರಿ , ಡಾ ಬಿ ಸಿ ಚವ್ಹಾಣ, ಸೇರಿದಂತೆ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಪ್ರೇಮಾ ಬಾಗೇವಾಡಿ ಸುನೀತಾ ಕೆರೂರ ಕಾವ್ಯಾ ಚಿಟಗಿ, ಮಹಾದೇವಿ ಕಮತ್, ಲತಾ ಕಾಜಗಾರ, ಉಮಾ ಖಾನವಾಡೆ, ಮಹಾನಂದಾ ಹಿರೇಮಠ, ವಿದ್ಯಾ ಮೆಳವಂಕಿ, ಸುಮಾ ಕದಮ್, ಮಹಾದೇವಿ ಮೂಲಿಮನಿ, ತೋಂಟಾಪೂರ, ಲಕ್ಷ್ಮೀ ಮಜಲಟ್ಟಿ, ಭಂಡಾರಿ ಸೇರಿದಂತೆ ಸ್ನೇಹ ಸಮಾಜ ಸೇವಾ ಸಂಘದ ಸದಸ್ಯರು, ರಹವಾಸಿಗಳು, ಮಹಿಳೆಯರು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ
15th April 2025
ಸಂವಿಧಾನ ಶಿಲ್ಪಿಗಳಾದ ಡಾ ಬಿ ಆರ್ ಅಂಬೇಡ್ಕರ್ ಅವರು 1925 ರಲ್ಲಿ ನಿಪ್ಪಾಣಿಗೆ ಭೇಟಿ ನೀಡಿದ್ದರು. ಅದು ಅಂತಿಂಥ ಭೇಟಿಯಲ್ಲ, ಬದಲಿಗೆ ಅಂದಿನ ಮುಂಬೈ-ಕರ್ನಾಟಕ ಭಾಗದಲ್ಲಿ ದಲಿತರ ಸಬಲೀಕರಣಕ್ಕೆ ನಾಂದಿ ಹಾಡಿ, ಅದನ್ನು ಗಮನಾರ್ಹವಾಗಿ ಸಾಧಿಸಲು ನಾಂದಿ ಹಾಡಿದಂತಹ ಭೇಟಿ. ಈ ವೇಳೆ ಬಾಬಾಸಾಹೇಬರು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದ ‘ಬಹಿಷ್ಕೃತ ಹಿತಕಾರಣಿ ಸಭಾ’ದ ಸಮಾವೇಶವನ್ನು ಏರ್ಪಡಿಸಿದರು.
ದಲಿತರ ಸಬಲೀಕರಣಕ್ಕಾಗಿ ಸಾಮಾಜಿಕ ಸುಧಾರಣಾ ಆಂದೋಲನಗಳಿಗೆ ಉತ್ತೇಜನ ನೀಡುವುದು ಇದರ ಹಿಂದಿದ್ದ ಉದ್ದೇಶವಾಗಿತ್ತು. ಇದರ ಭಾಗವಾಗಿ ದಲಿತರಿಗೆ ಸಿಗಬೇಕಾದ ಗುಣಮಟ್ಟದ ಶಿಕ್ಷಣ, ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯ ಅಗತ್ಯ, ದಮನಿತ ವರ್ಗಗಳ ಪ್ರಯೋಜನಕ್ಕೆ ವಿಶೇಷ ಗ್ರಂಥಾಲಯ, ಸಮುದಾಯ ಕೇಂದ್ರ, ಅಧ್ಯಯನ ಕೇಂದ್ರ, ಕೃಷಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಕೋರ್ಸ್ಗಳನ್ನು ಆರಂಭಿಸಬೇಕಾದ ಜರೂರು, ದಲಿತರಿಗೆ ಸಂಬಂಧಿಸಿದ ವಿಚಾರ ಮತ್ತು ಸಮಸ್ಯೆಗಳ ನಿವಾರಣೆಗೆ ತ್ವರಿತ ಸ್ಪಂದನೆ ವಿಚಾರಗಳನ್ನು ಇಲ್ಲಿ ಚರ್ಚಿಸಲಾಯಿತು. ಸ್ವತಃ ಬಾಬಾಸಾಹೇಬರೇ ಈ ಸಮಾವೇಶದ ಅಧ್ಯಕ್ಷತೆಯನ್ನೂ ವಹಿಸಿದ್ದರು.
ಈ ಸಮಾವೇಶದ ಸಮಯದಲ್ಲೇ ನಿಪ್ಪಾಣಿಯಲ್ಲಿ ದಲಿತರಿಗೆಂದೇ ಹುಟ್ಟಿಕೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಅವರು, ಅಸ್ಪೃಶ್ಯರ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನೂ ವಿತರಿಸಿದರು. ಅಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಸುಶಿಕ್ಷಿತರಾಗಿ, ಆಂದೋಲನ ಮಾಡಿ, ಸಂಘಟಿಸಿ ಎನ್ನುವಂತಹ ಘೋಷಣೆಯನ್ನು ಮಾಡಿದ್ದರು. ಈ ಭೇಟಿಯ ನೂರು ವರ್ಷಗಳ ನೆನಪನ್ನು ಅಜರಾಮರವನ್ನಾಗಿಸುವ ನಿಟ್ಟಿನಲ್ಲಿ 3.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂಬೇಡ್ಕರ್ ಜೀವಿಸಿದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಅಭಿವೃದ್ದಿಪಡಿಸುವುದಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಘೋಷಿಸಿದರು.
ದೇಶದ ಗಮನ ಸೆಳೆಯುವಂತಹ ಅಂಬೇಡ್ಕರ್ ಮ್ಯೂಸಿಯಂ, ಕ್ರಾಂತಿ ಸ್ತಂಭ, ಬೌದ್ದ ಸ್ತೂಪ, ಅಂಬೇಡ್ಕರ್ ಭವನ, ಬಡ ದಲಿತ ಮಕ್ಕಳಿಗೆ ಹಾಸ್ಟೆಲ್, ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ವನ್ನು ಇಲ್ಲಿ ಅಭಿವೃದ್ದಿಪಡಿಸಲಾಗುವುದು. ಇದಕ್ಕಾಗಿ ರಾಜ್ಯ ಸರಕಾರದಿಂದ ಒಂದು ಕೋಟಿ, ಶಾಸಕರ ನಿಧಿಯಿಂದ ಒಂದು ಕೋಟಿ ಹಾಗೂ ಜೊಲ್ಲೆ ಗ್ರೂಪ್ ನಿಂದ ಒಂದು ಕೋಟಿ ಹಣವನ್ನು ನಿಗದಿಪಡಿಸಲಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಆಗಮಿಸಿದ್ದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಅದನ್ನು ಯಾವತ್ತು ಶಾಶ್ವತವಾಗಿ ನೆನಪಿಡುವ ಕಾರ್ಯಕ್ರಮವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ ಎಂದು ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.
11th March 2025
ಸರ್ಕಾರದ ಯೋಜನೆಗಳ ಯಶಸ್ಸಿಗೆ
ಪ್ರಾಮಾಣಿಕತೆ ಅತ್ಯವಶ್ಯ.
ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಅಂಕಲಗಿ ೧೧- ಗುತ್ತಿಗೆದಾರರು ಪಡೆದ ಗುತ್ತಿಗೆ ಕಾಮಗಾರಿಗಳು ಸಾರ್ವಜನಿಕರ ಹಿತಕ್ಕೆ ಪೂರಕವಾಗಿರಬೇಕು. ಸರ್ಕಾರದ ಯೋಜನೆ ಗಳ ಯಶಸ್ಸಿಗೆ ನಮ್ಮಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ಗೋಕಾಕ ಯುವ ನಾಯಕ ಅಮರನಾಥ್ ಜಾರಕೀಹೊಳಿ ಹೇಳಿದರು. ಅವರು ಮಂಗಳವಾರ ಸಮೀಪದ ಮುಸಲ್ಮಾರಿ ಮಲ್ಲಾಪುರ ದಲ್ಲಿ ೧ ಕೋಟಿ ಅನುದಾನದಲ್ಲಿ ಮಂಜೂರಿಯಾದ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆಯ ವೈಭವ ಮತ್ತಷ್ಟು ಹೆಚ್ಚಲಿ , ಜನರಲ್ಲಿ ಪ್ರೀತಿ ಪ್ರೇಮಗಳ ಸಂಗಮವಾಗಿ ಸಂತಸದಲ್ಲಿ ನಲಿದಾಡುವಂತಾಗಲಿ ಎಂದು ಶುಭ ಹಾರೈಸಿದರಲ್ಲದೆ, ಜಾತ್ರೆ ನಂತರದ ದಿನಗಳಲ್ಲಿ ಉಳಿದ ಮತ್ತಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವದಾಗಿ ಹೇಳಿದರಲ್ಲದೆ, ಕರೆದು ಸನ್ಮಾನಿಸಿದ ಗ್ರಾಮದ ಜಾತ್ರಾ ಕಮಿಟಿಯ ಹಿರಿಯರಿಗೆ, ಧುರೀಣರಿಗೆ ಧನ್ಯವಾದ ಹೇಳಿದರು.
ಗ್ರಾಮದ ಧುರೀಣ, ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಸರ್ವರನ್ನು ಸ್ವಾಗತಿಸಿ, ಮಾತನಾಡಿ ನೆಚ್ಚಿನ ಶಾಸಕರಾದ ರಮೇಶ ಜಾರಕಿಹೊಳಿ ಅವರು ನಾಡಿನಲ್ಲಿ ಅತ್ಯಾವಶ್ಯಕವಾದ ರಸ್ತೆ, ಕುಡಿಯುವ ನೀರು, ಆಸ್ಪತ್ರೆಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವ್ರದ್ಧಿಗೆ ಹೆಗಲು ಕೊಟ್ಟವರಾಗಿದ್ದು, ಸದ್ಯ ಅಧಿವೇಶನದಲ್ಲಿದ್ದುದರಿಂದಾಗಿ ಅವರಿಗೆ ಬರಲಾಗಿಲ್ಲ ಎಂದರಲ್ಲದೆ, ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ ಮತ್ತು ಕೆ ಜೆ ಎಸ್ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ ಅವರನ್ನು ಗ್ರಾಮದ ಪರ ಸನ್ಮಾನಿಸಿ ಅಭಿನಂದಿಸಿದರಲ್ಲದೆ, ವಂದಿಸಿದರು.
ಈ ಸಂದರ್ಭದಲ್ಲಿ ಕುಂದರನಾಡ ಶಿಕ್ಷಣ ಸಂಘದ ಕಾರ್ಯದರ್ಶಿ ಭೀಮಗೌಡಾ ಪೊಲೀಸಗೌಡರ, ಅಡಿವೆಪ್ಪಾ ಮಳಗಲಿ, ನಿತಿನಚಂದ್ರ ಕರಗುಪ್ಪಿಕರ, ಪಿ ಡಿ ಓ ಸುನಿಲ್ ನಾಯಕ್, ಇಂಜನೀಯರ್ ಶಿವಲಿಂಗ, ಗಂಗಪ್ಪ ಅಂಗಡಿ, ಗಂಗಾಧರ ಪಾಟೀಲ, ಮಾರುತಿ ನಾರಿ, ಚಂದ್ರಪ್ಪ ಗಸ್ತಿ, ದುಂಡಪ್ಪಾ ನಾಯಿಕ್, ಗೂಳಪ್ಪಾ ಹಡಗಿನಾಳ, ಬಸಲಿಂಗಪ್ಪಾ ಗುಡದವರ, ಮುದಕಪ್ಪಾ ಹಾಲವ್ವಗೋಳ, ಬಸ ಲಿಂಗಪ್ಪ ದಡ್ಡಿ, ಅಸದ್ ಪಾಟೀಲ, ವಿರುಪಾಕ್ಷಿ ಅಂಗಡಿ , ಬಸಪ್ಪಾ ಗುಡದವರ, ರಾಜು ಇರಪನ್ನಗೋಳ ಬಾಳಪ್ಪ ನಾಯ್ಕ, ಗೋಪಾಲ ಬೊಂಬ್ರಿ ಅಮರನಾಥ ಜಾರಕೀಹೊಳಿ ಅವರನ್ನು ಗ್ರಾಮದ ಪರ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮತ್ತು ನಾಡಿನ ಅಭಿಮಾನಿಗಳು, ಜಾತ್ರಾ ಕಮಿಟಿಯು ಸದಸ್ಯರು ಉಪಸ್ತಿತರಿದ್ದರು.
11th March 2025
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ.
ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಬೆಳಗಾವಿ. ೧೦, ಬೆಳಗಾವಿ ಸುಪ್ರಸಿದ್ಧ ರಾಮತೀರ್ಥ ನಗರದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನಕ್ಕೆ ಕೊಳವೆ ಬಾವಿ ಕಲ್ಪಿಸಿದ ದಾನಿ ಶ್ರುತಿ ಪಾರ್ಕ್ ನಿವಾಸಿ, ಉದ್ಯಮಿ, ದಯಾನಂದ ಬಾಪು ಪಾಟೀಲ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಹೇಳಿದರು. ಅವರು ಸೋಮವಾರ ರಾಮತೀರ್ಥನಗರದಲ್ಲಿಯ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಅಂಗಳದಲ್ಲಿ ಕೊಳವೆ ಬಾವಿ ಕೊರೆಯುವ ಮಷಿನಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸ್ವಾರ್ಥದಿಂದ ಸಮಾಜ ಸೇವೆ ಮರೆಯಾಗುತ್ತಿದ್ದು ದುರದ್ರಷ್ಟಕರ ಸಂಗತಿಯಾಗಿದ್ದು, ಸಮಾಜಕ್ಕೆನಮ್ಮಸೇವೆ ಸಂದಾಗ ಮಾತ್ರ ಅದು ದೇವರು ಮೆಚ್ಚುವ ಕಾರ್ಯವಾಗುವದು. ಇಂಥಹ ಅಪರೂಪದ ಕಾರ್ಯಕ್ಕೆ ಮುಂದಾಗಿರುವ ಈ ಮಂದಿರದ ಕಮಿಟಿ ಮತ್ತು ಸ್ನೇಹ ಸಮಾಜ ಸೇವಾ ಸಂಘದ ಕಾರ್ಯ ಅತ್ಯಂತ ಶ್ಲ್ಯಾಘನೀಯ ವಾಗಿದೆ ಎಂದರು.
ಸಂಘದ ಅದ್ಯಕ್ಷ ಸುರೇಶ ಉರಬಿನಟ್ಟಿ ಪ್ರತಿಕ್ರಿಯಿಸಿ ಮುಂಬರುವ ಎಪ್ರಿಲ್ ೧೨ನೇ ತಾರೀಖಿನಂದು ಸಂಜೆ ಸೇರುವ ಸುಮಾರು ೫ ಸಾವಿರಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಶುಭ ಸಂದರ್ಭಕ್ಕೆ ಅಂಕಲಗಿ ಹಾಗೂ ಕಾರಂಜಿ ಶ್ರೀ ಗಳು, ಸಂಸದರು, ಶಾಸಕರು, ವಿಧಾನ ಪರಿಷತ ಸದಸ್ಯರು , ಧುರೀಣರು ಚಾಲನೆ ನೀಡಲು ಆಗಮಿಸಲಿದ್ದು ಎಲ್ಲರೂ ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಬೇಕೆಂದರಲ್ಲದೆ, ದೇವಸ್ಥಾನದ ಅಭಿವ್ರದ್ಧಿಗೆ ಸಹಕಾರ ನೀಡಿದ ಎಲ್ಲ ಮಹನೀಯರು ಅಭಿನಂದನಾರ್ಹರು. ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ನಮ್ಮ ಸಂಘಟನೆಯ ಪ್ರೀತಿ ಗೆದ್ದವರಾಗಿದ್ದಾರಲ್ಲದೆ, ದೊಡ್ಡ ಶಕ್ತಿಯಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಮನೋಹರ ಕಾಜಗಾರ , ಕಾರ್ಯದರ್ಶಿ ಮಂಜುನಾಥ ಪಾಟೀಲ, ಸದಸ್ಯರಾದ ಮಹೇಶ ಚಿಟಗಿ, ಕ್ರಷ್ಣಾ ಪಾಟೀಲ, ಮಲ್ಲಪ್ಪ ದಂಡಿನವರ, ಶಿವಾನಂದ ಮಠಪತಿ, ಮಹೇಶ ಬಾಗೇವಾಡಿ, ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಸಿದ್ದಬಸಯ್ಯಾ ಹಿರೇಮಠ ಸೇರಿದಂತೆ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ
3rd March 2025
ಕುಡಿವ ನೀರಿಗಾಗಿ ರಹವಾಸಿಗಳಿಂದ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾವಲಗಟ್ಟಿ ಗೆ ಮನವಿ. ಬೆಳಗಾವಿ. ೨೪- ಬೆಳಗಾವಿ ರಾಮತೀರ್ಥನಗರ ರಹವಾಸಿಗಳಿಗೆ ಕುಡಿಯುವ ನೀರಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದು, ಜನರ ನೋವಿಗೆ ಸ್ಪಂದಿಸುವಂತೆ ಒತ್ತಾಯಿಸಿ ಸೋಮವಾರ ರಾಮತೀರ್ಥನಗರ ಕುಂದರನಾಡ ರಹವಾಸಿಗಳ ಸಂಘ ಸ್ನೇಹ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಂದರನಾಡ ರಹವಾಸಿಗಳ ಸಂಘ ದ ಅದ್ಯಕ್ಷರು ಮತ್ತು ಮಾಜಿ ಮಹಾಪೌರರಾದ ಎನ್ ಬಿ ನಿರ್ವಾಣಿ, ನಮಗೆ ಕಳೆದ ೧೦ ದಿನಗಳಿಂದ ಕುಡಿಯುವ ನೀರಿಲ್ಲದೆ ತೀವ್ರ ಸಂಕಷ್ಟ ದಲ್ಲಿದ್ದೇವೆ.
ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಅಧಿಕಾರಿಗಳನ್ನೊಳಗೊಂಡು ಶಾಸಕರು, ಸಚಿವರಲ್ಲಿ ವಿನಂತಿಸಿದ್ದು,
ನಮ್ಮ ನೀರಿನ ಭವನೆ ತಪ್ಪಿಲ್ಲ. ಎಂದರಲ್ಲದೆ, ನಾನು ನಗರದ ಮಹಾಪೌರನಿದ್ದಾಗ ನೀರು ಪೂರೈಕೆಯಲ್ಲಿ ತೊಂದರೆಯಾದಾಗ ಸಂಕಷ್ಟ ಪ್ರದೇಶದಲ್ಲಿ ಗಾಡಿಗಳ ಮೂಲಕ ಕುಡಿವ ನೀರು ಕೊಟ್ಟಿದ್ದೆ. ಈಗಿನ ನಮ್ಮ ತೊಂದರೆಗೆ ಸೂಕ್ತ ಕ್ರಮ ಜರುಗಿಸಿ ನಿಯಮಿತವಾಗಿ ನೀರು ಸರಬರಾಜು ಗೊಳ್ಳದಿದ್ದರೆ ಖಾಲಿ ಕೊಡಗಳೊಂದಿಗೆ.ಮಹಿಳೆಯರು ಸಮೇತ ಬೀದಿಗಿಳಿಯುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಮನವಿಗೆ ಸ್ಪಂದಿಸಿದ ವಿನಯ ನಾವಲಗಟ್ಟಿ ಮಾನ್ಯ ಉಸ್ತುವಾರಿ ಸಚಿವರಿಗೆ ಮನವಿಯ ತೀವ್ರತೆ ಕುರಿತು ವಿವರಿಸಿ ಸದ್ಯ ಸಮರ್ಪಕ ನೀರು ಸರಬರಾಜು ಆಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದರಲ್ಲದೆ ನಾನೂ ಅದೇ ಬಡಾವಣೆಯ ನಿವಾಸಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ, ಉಪಾಧ್ಯಕ್ಷ ಎಸ್ ಜಿ ಕಲ್ಯಾಣಿ, ಖಜಾಂಚಿ ಮನೋಹರ ಕಾಜಗಾರ ಸದಸ್ಯರಾದ
ಬಸವರಾಜ ಗೌಡಪ್ಪಗೋಳ, ಜಿ ಐ ದಳವಾಯಿ ಸೇರಿದಂತೆ ರಹವಾಸಿಗಳು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ
4th February 2025
ಪ್ರಸಕ್ತ ಅವಧಿಗೆ
ಬಿಜೆಪಿ ಮಂಡಳ ಅಧ್ಯಕ್ಷರಾಗಿ ರಾಜೇಂದ್ರ ಗೌಡಪ್ಪಗೋಳ ಪುನರ್ ನೇಮಕ
ಅಂಕಲಗಿ. ೦೩- ಗೋಕಾಕ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷರಾಗಿ ಸಮೀಪದ ಎಸ್ ಎ ಮಲ್ಲಾಪುರ ಗ್ರಾಮದ ರಾಜೇಂದ್ರ ಗೌಡಪ್ಪಗೋಳ ಪನ ರ್ ನೇಮಕ ಗೊಂಡಿದ್ದಾರೆ.. ಈ ನೇಮಕವನ್ನು ರಾಜ್ಯ ಮತ್ತು ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡರುಗಳು ಮತ್ತು ಪಕ್ಷದ ಚುನಾವಣಾಧಿಕಾರಿಗಳು ಖಚಿತ ಪಡಿಸಿ ಅಧಿಕ್ರತ ಆದೇಶ ಹೊರಡಿಸಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ನಿರ್ದೇಶನದಂತೆ ಈ ಪುನರ್ ನೇಮಕ ಪ್ರಕ್ರಿಯೆ ಜರುಗಿದ್ದು, ರಾಜೇಂದ್ರ ಗೌಡಪ್ಪಗೋಳ ಅವರು ಈ ಮೊದಲು ಸಹ ಗೋಕಾಕ ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷರಾಗಿ ಅತ್ತ್ಯುತ್ತಮ ಕಾರ್ಯ ನಿರ್ವಹಿಸಿ ಬಿಜೆಪಿ ಪಕ್ಷದ ಬಲವರ್ಧನೆಗೆ ಗ್ರಾಮೀಣ ವಲಯದಲ್ಲಿ ಶ್ರಮಿಸಿ ಕಾರ್ಯಕರ್ತರನ್ನು ಸಂಘಟಿಸಿ ಶಿಸ್ತಿನ ಶಿಪಾಯಿಯೆನಿಸಿದ್ದ ಕಾರಣ ಮತ್ತೆ ಇವರಿಗೆ ಅದ್ಯಕ್ಷ ಪಟ್ಟಒದಗಿ ಬಂದಿದ್ದು ಇವರ ಈ ಅಧಿಕಾರವಧಿಯು ಮುಂದಿನ ಮೂರು ವರ್ಷದ ವರೆಗೆ ಇರುವದು.. ಇವರ ಈ ಮರು ನೇಮಕದಿಂದ ಗೋಕಾಕ ಹಾಗು ಕುಂದರನಾಡ ಬಿಜೆಪಿ ವಲಯದಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ..
ಸುರೇಶ ಉರಬಿನಹಟ್ಟಿ
29th January 2025
ಇವತ್ತು ಬೆಳಗಾವಿ ನಗರದ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು
*ಸರ್ವಾನುಮತದಿಂದ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಸುಭಾಷ್ ಪಾಟೀಲ್ ಮರು ಆಯ್ಕೆ*
ಸರ್ವಾನುಮತದಿಂದ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ಸುಭಾಷ್ ಪಾಟೀಲ್ ಅವರ ಹೆಸರನ್ನು ಘೋಷಣೆ ಮಾಡಿ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಚುನಾವಣಾಧಿಕಾರಿ ರಾಜಶೇಖರ್ ಶೀಲವಂತ ಅವರು ಮಾತನಾಡಿ ಭಾರತೀಯ ಜನತಾ ಪಾರ್ಟಿ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆ ಮತ್ತು ವಿಶ್ವಾಸವನ್ನು ಇಟ್ಟ ಪಕ್ಷವಾಗಿದೆ ಗ್ರಾಮಾಂತರ ಜಿಲ್ಲೆಯಲ್ಲಿ
ಒಟ್ಟು 2115 ಚುನಾವಣಾ ಬೂತ್ ಗಳು , 418 ಪಕ್ಷದ ಶಕ್ತಿ ಕೇಂದ್ರಗಳು , 66 ಮಹಾಶಕ್ತಿ ಕೇಂದ್ರಗಳು ಜಿಲ್ಲೆಯಲ್ಲಿ 2115 ಬೂತ್ ಗಳಲ್ಲಿ ಬೂತ್ ಸಮಿತಿಗಳನ್ನು ರಚನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರತಿಶತ ನೂರರಷ್ಟು ಪಕ್ಷದ ಬೂತ್ ಸಮಿತಿ ರಚನೆ ಮಾಡಿದ ಪ್ರಪ್ರಥಮ ಜಿಲ್ಲೆಯಾಗಿದೆ. ಕಳೆದ ಹಲವು ದಿನಗಳ ಹಿಂದೆ ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ಜಿಲ್ಲಾಧ್ಯಕ್ಷರ ಆಯ್ಕೆ ಬಗ್ಗೆ ಪ್ರಕ್ರಿಯೆಗಳ ಬಗ್ಗೆ ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು ನಂತರ ಜಿಲ್ಲೆಯ ವ್ಯಾಪ್ತಿಗೆ ಬರುವ ಒಂಬತ್ತು ಸಂಘಟನಾತ್ಮಕ ಮಂಡಲಗಳ ಅಧ್ಯಕ್ಷರುಗಳ ಸರ್ವಾನು ಮತದಿಂದ ಅಧ್ಯಕ್ಷರ ಘೋಷಣೆ ಮಾಡಲಾಯಿತು ನಂತರ ಸುಭಾಷ್ ಪಾಟೀಲ್ ಅವರನ್ನು ಸರ್ವಾನುಮತದಿಂದ ಮೂರು ವರ್ಷಗಳ ಅವಧಿಗೆ ಬೆಳಗಾವಿ ಗ್ರಾಮಾಂತರ ಜಿಲ್ಲೆಗೆ ಭಾರತೀಯ ಜನತಾ ಪಾರ್ಟಿ ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸುತ್ತಿದ್ದೇನೆ ಎಂದು ಹೇಳಿದರು. ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಷ್ ಪಾಟೀಲ್ ಅವರು ಮಾತನಾಡಿ ಕಳೆದ ಒಂದು ವರ್ಷಗಳ ಅವಧಿಗೆ ನಾನು ಜಿಲ್ಲಾಧ್ಯಕ್ಷನಾಗಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮವಹಿಸಿ ದ್ದೇನೆ ಮತ್ತೆ ಈಗ ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಮತ್ತೆ ಮೂರು ವರ್ಷಗಳ ಅವಧಿ ವರೆಗೆ ಜಿಲ್ಲೆಯ ಎಲ್ಲ ಮತಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಇದಕ್ಕೆ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು, ಮುಖಂಡರ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ವಿಶ್ವನಾಥ್ ಪಾಟೀಲ್, ಅರವಿಂದ ಪಾಟೀಲ, ರಾಷ್ಟ್ರೀಯ ಓ.ಬಿ.ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಚುನಾವಣಾ ಸಹ ಸಂಚಾಲಕ ಈರಣ್ಣ ಚಂದರಗಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಶ್ರೀ ದೇಸಾಯಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿಧ್ಧನಗೌಡ್ರ, ರಾಜ್ಯ ಸಾಮಾಜಿಕ ಜಾಲತಾಣ ಸದಸ್ಯ ನಿತಿನ್ ಚೌಗಲೆ,ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಯಲ್ಲೇಶ್ ಕೊಲಕಾರ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು
29th January 2025
ಸಾಮಾಜಿಕ ಬದ್ಧತೆ ಕಾಪಾಡಲು ನಂಬಿಕೆ ಮತ್ತು ಪ್ರೀತಿಯ ಹೊಕ್ಕುಳಬಳ್ಳಿಯನ್ನು ಬಲಪಡಿಸುವುದು ಮುಖ್ಯ: ಎಪಿಎಂಸಿ ಅಧ್ಯಕ್ಷ ನಿಂಗಪ್ಪ ಜಾಧವ*
*ಜಿಲ್ಲಾ ಆಸ್ಪತ್ರೆಯಲ್ಲಿ ಅಖಿಲ ಭಾರತ ಪ್ರಗತಿಶೀಲ ಎಲ್ಗಾರ್ ಸಾಮಾಜಿಕ ಸಾಹಿತ್ಯ ಪರಿಷತ್ತಿನ ವಿವಿಧೋದ್ದೇಶ ಸಂಸ್ಥೆ ಮತ್ತು ದೀಪಜ್ಯೋತಿ ಫೌಂಡೇಶನ್ ಹಣ್ಣು ಮತ್ತು ತಿಂಡಿ ವಿತರಣೆ*
ಬೆಳಗಾವಿ, ದಿನಾಂಕ 29 ಜನವರಿ 2025 : ಸಮಾಜಕ್ಕೆ ನಾವು ಯಾವ ಮನೋಭಾವನೆಯನ್ನು ಸಲ್ಲಿಸುತ್ತೇವೆಯೋ ಅದೇ ಮನೋಭಾವದಿಂದ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನಾಗಿ ಬದುಕುವ ಪ್ರವೃತ್ತಿಯನ್ನು ಸರಿದೂಗಿಸಲು ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು ಸಮಾಜಕ್ಕೆ ಏನಾದರೂ ಋಣಿಯಾಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿ ನಡೆಯುವಾಗ ನಮಗೆ ತಿಳಿದೋ ತಿಳಿಯದೆಯೋ ಅನೇಕ ಹಿರಿಯ ಗೆಳೆಯರ ಒಡನಾಟದಿಂದ ಲಾಭವಾಗುತ್ತದೆ. ನಾವು ಅವರೊಂದಿಗೆ ಬಲವಾದ ನಂಬಿಕೆ ಮತ್ತು ಪ್ರೀತಿಯ ಬಂಧವನ್ನು ಹೊಂದಿದ್ದೇವೆ. ಅಂತಹವರಿಂದ ಜೀವನದಲ್ಲಿ ನಮಗೆ ಅಮೂಲ್ಯವಾದ ಮಾರ್ಗದರ್ಶನ ಸಿಗುತ್ತದೆ. ಅಂತಹ ನಿಪುಣ ವ್ಯಕ್ತಿತ್ವದ ಮೂಲಕ ಬೆಳಗಾವಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ಮೂಲಕ ಎಲ್ಲ ವಿಭಾಗಗಳೂ ತಮ್ಮ ಕಾರ್ಯಸಾಧನೆಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ, ರೋಗಿಗಳು ಸರಿಯಾದ ಚಿಕಿತ್ಸೆಯಿಂದ ಹೇಗೆ ಪ್ರಯೋಜನ ಪಡೆಯಬಹುದು ಮತ್ತು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಅವರ ಆರೋಗ್ಯಕ್ಕೆ ಹೇಗೆ ಪ್ರಯೋಜನವಾಗಬಹುದು ಎಂಬುದನ್ನು ನೋಡಲು ವೈದ್ಯರು ಪ್ರಯತ್ನಿಸುತ್ತಾರೆ ಇದು ಗಡಿಯಾರದ ಸುತ್ತ ಕೆಲಸ ಮಾಡುತ್ತಿದೆ ಮತ್ತು ನಾವು ಗಂಭೀರವಾಗಿ ಗಮನಿಸಬೇಕು ಮತ್ತು ಅವುಗಳನ್ನು ಮುಂದುವರಿಸಬೇಕು. ಅವರ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹ ನೀಡಲು ಸಮಾಜ ಮುಂದೆ ಬಂದು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಕೆಲಸ ಮಾಡಲು ಪ್ರಯತ್ನಿಸಬೇಕು. * ಈ ಸಮರ್ಥನೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಜಾಧವ್ ಮಾಡಿದ್ದಾರೆ
ಅಖಿಲ ಭಾರತೀಯ ಪ್ರಗತಿಶೀಲ ಎಲ್ಗಾರ್ ಸಾಮಾಜಿಕ ಸಾಹಿತ್ಯ ಪರಿಷತ್ತು ವಿವಿಧೋದ್ದೇಶ ಸಂಸ್ಥೆ ಬೆಳಗಾವಿ ಕರ್ನಾಟಕ ಹಾಗೂ ದೀಪಜ್ಯೋತಿ ಫೌಂಡೇಶನ್ ಬೆಳಗಾವಿ ಇವರ ಸಹಯೋಗದಲ್ಲಿ ನರೇಗಾ ಕಾರ್ಯಕರ್ತೆ ಯಮಕನಮರಡಿ ಟೆಂಪೋ ಅಪಘಾತ ರೋಗಿಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಉಭಯ ಸಂಘಟನೆಗಳ ವತಿಯಿಂದ ಹಣ್ಣು ಹಂಪಲು ನೀಡಿ ಆರೋಗ್ಯ ವಿಚಾರಿಸಿದರು. ಮಂಗಳವಾರ 29 ಜನವರಿ 2025 ರಂದು ಬೆಳಗಾವಿಯ ಬೀಮ್ಸ್ ಸಿವಿಲ್ ಆಸ್ಪತ್ರೆಯಲ್ಲಿ ರೋಗಿಗಳನ್ನು ವಿಚಾರಣೆ ನಡೆಸಲಾಯಿತು. ಅವರ ಆರೋಗ್ಯ ಉತ್ತಮವಾಗಲೆಂದು ಬೆಳಗಾವಿ ಜಿಲ್ಲೆಯ ಪರವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ನೀಡುವ ಮೂಲಕ ಎರಡೂ ಸಂಸ್ಥೆಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಜಾಧವ ವಹಿಸಿದ್ದರು. ಸ್ವಾಗತ ಮಂಡಳಿ ಅಧ್ಯಕ್ಷ ಶ್ರೀಧರ ಪಾಟೀಲ ಇದ್ದರು. ಸಮಾಜ ಸೇವಕ ಮಾರುತಿ ಬಡಿಗೇರ್ ಪರಿಚಯಿಸಿದರು. ಪ್ರಥಮೇಶ ಸಾವಂತ್ ಪರಿಚಯಿಸಿದರು. ವೇದಿಕೆಯಲ್ಲಿ ದೀಪಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷೆ ಜ್ಯೋತಿ ಗವಿ, ಸಮಾಜ ಸೇವಕ ಕವಿ ಪ್ರೊ.ನೀಲೇಶ ಶಿಂಧೆ, ಕಾರ್ಯದರ್ಶಿ ಕವಿತಾ ಸೋನವಾಲ್ಕರ್, ಕಲಕಂಬ ಗ್ರಾ.ಪಂ ಸದಸ್ಯ ಮಂಜುನಾಥ ಕಾಂಬಳೆ, ದಲಿತ ಸಮಾಜದ ಅಧ್ಯಕ್ಷ ಹರೀಶ್ ಮೇತ್ರಿ, ಮಾಜಿ ಕಾರ್ಪೊರೇಟರ್ ಅನಿಲ್ ಪಾಟೀಲ್ ವಿಚಾರ ಮಂಡಿಸಿದರು. ಶೋಭಾ ಲೋಹರ, ಮಾರುತಿ ಲೋಹರ, ಗಜಾನನ ಮಾದರ, ಡಾ.ಗಜಾನನ ವರ್ಪೆ, ಅಷ್ಟೆ ಗ್ರಾ.ಪಂ.ಅಧ್ಯಕ್ಷ ಬಾಳು ಕುರಬಾರ, ಚಂದ್ರಕಾಂತ ಭೈರತಕರ, ವಿನಾಯಕ ಲೋಹರ, ತಾಲೂಕಾ ಪಂಚಾಯತ ಮಾಜಿ ಸದಸ್ಯ ಕಮಲಮನೋಳಕರ, ಸುಧೀರ ಲೋಹರ, ನಾರಾಯಣ ಪಾಟೀಲ, ಸಾಗರ್ ಗುಂಜಿಕರ, ಪ್ರಾ. ವಿಶಾಲ ಕರಂಬಾಳ್ಕರ್, ಪ್ರೊ. ಶಶಿಕಾಂತ ಧಾಮನೇಕರ, ಬೆಳಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ ಹಡಗಲ್, ಜಿಲ್ಲಾ ಸರ್ಜನ್ ವೈದ್ಯ ವಿಠ್ಠಲ್ ಶಿಂಧೆ, ವೈದ್ಯಕೀಯ ದ್ವಿತೀಯ ಡಾ. ಈರಣ್ಣ ಪಲ್ಲದ್, ಅಧೀಕ್ಷಕ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸುಧಾಕರ ಎಸ್. , ಡಾ.ಗಿರೀಶ್ ದಂಡಗಿ, ಡಾ. ಸಂದೀಪ್ ರೆಡ್ಡಿ, ಡಾ. ಸಂಜಯ ಕರ್ಪೂರ್, ಡಾ. ಸುಧೀರ್ ಭಟ್, ಭೀಮ್ಸ್ ನಿರ್ದೇಶಕ ಡಾ. ಅಶೋಕ್ ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ನೌಕರರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ವೈದ್ಯರು, ಗ್ರಾಮಸ್ಥರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುವ ಸಂದರ್ಭದಲ್ಲಿ ನಿಂಗಪ್ಪ ಜಾಧವ, ಶ್ರೀಧರ ಪಾಟೀಲ, ಜ್ಯೋತಿ ಗವಿ, ಪ್ರೊ.ನೀಲೇಶ ಶಿಂಧೆ, ಮಾರುತಿ ಬಡಿಗೇರ್, ಹರೀಶ್ ಮೇತ್ರಿ, ಮಂಜುನಾಥ ಕಾಂಬಳೆ, ಪ್ರಥಮೇಶ ಸಾವಂತ, ಗಜಾನನ ಮಾದರ, ಚಂದ್ರಕಾಂತ ಭೈರತಕರ ಮತ್ತಿತರರು.