6th October 2024

ಹುಕ್ಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಡಿ ಬಿ ಹೆಬ್ಬಾಳಿ ಸರಕಾರಿ ಪ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಗಡಿ ಭಾಗದ ಕನ್ನಡ ಸ್ಥಿತಿ ಗತಿ ಕುರಿತು ಅತಿಥಿಯಾಗಿ ಭಾಗವಹಿಸಿದ ಶ್ರೀ ಅಜಯ ಉದೊಸಿ ಮಾತನಾಡಿ ಗಡಿ ಭಾಗದ ಕನ್ನಡಿಗರು ಮೊದಲಿನಿಂದಲೂ ಅನ್ಯ ಭಾಷಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ ಕಿಡಿಗೆಡಿಗಳಿಂದ ಸಂಬಧ ಹಾಳಾಗುತ್ತಿದೆ ಗಡಿ ಭಾಗದ ಕನ್ನಡ ಶಾಲೆಗಳಿಗೆ ಸರಕಾರ ವಿಶೇಷ ಪ್ಯಾಕೇಜ್ ದಯಪಾಲಿಸಲಿ ಗಡಿ ಭಾಗದ ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಸಮಾರಂಭದಲ್ಲಿ ಪ್ರಾಚಾರ್ಯ ಶ್ರೀ ಎನ ಎಮ್ ಮಗದುಮ್ಮ ಹುಕ್ಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ್ ಅವಲಕ್ಕಿ ಪ್ರಾಸ್ತಾವಿಕ ಭಾಷಣ ಮಾಡಿದರು ಹಾಗು ಯಮಕನಮರಡಿಯ ಕಸಾಪ ವಲಯದ ಅಧ್ಯಕ್ಷ ಬಿ ಬಿ ಅಕ್ಕತಂಗೆರಹಾಳಸರ ಮತ್ತು ಶ್ರೀ ಗೋಪಾಲ ಚಿಪನಿ ಶ್ರೀ ಎ ಎಮ್ ಕರ್ನಾಚಿ ಶ್ರೀ ನಿಜಲಿಂಗಯ್ಯಾ ಹಾಲದೇವರಮಠ ಉಪಸ್ಧಿತರಿದ್ದರು ಈ ಸಂದರ್ಭದಲ್ಲಿ ಕ ಸಾ ಪ ಘಟಕದ ಪರವಾಗಿ ಯಮಕನಮರಡಿ ವಲಯದ ಉದಯೊನ್ಮುಖ ಸಾಹಿತಿ ಕಾದಂಬರಿಕಾರ ಶ್ರೀ ಪ್ರಸಾದ್ ಕುಲಕರ್ಣಿ(ಸೂರ್ಯಸಖ)ಇವರನ್ನು ಮತ್ತು ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳುಹಾಜರಿದ್ದರು ಕನ್ನಡ ಉಪನ್ಯಾಸಕಿ ವಿಜಯಲಕ್ಷ್ಮಿ ಮಿರ್ಜೆ ಮೇಡಮ್ ಕಾರ್ಯಕ್ರಮ ನಿರೂಪಣೆ ವಿದ್ಯಾರ್ಥಿನಿ ಕುಮಾರಿ ಸುವರ್ಣ ವಂದಸಿದರು

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ