10th October 2024

*✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕*
🪷 *ಧಾರ್ಮಿಕ ವಿಚಾರ*🪷
*👧, ಮಹಾಗೌರಿ,👧*
*01,🌼ನವರಾತ್ರಿಯ ಎಂಟನೇ ದಿನ🌼*
ಅಕ್ಟೋಬರ್ 10ರ ಗುರುವಾರ ಅಷ್ಟಮಿಯಂದು *ಮಹಾಗೌರಿ* ಯ ಆರಾಧನಾ ದಿನ. ದುರ್ಗಾಪೂಜೆಯ ಎಂಟನೆಯ ದಿನವನ್ನು ದುರ್ಗಾಷ್ಟಮಿಯೆಂದು ಕರೆಯಲಾಗುತ್ತದೆ. ವಿಶೇಷ ಮಹಾ ಅಷ್ಟಮಿಯ ದಿನವಾದ ಈ ದಿನ ಮಹಾಸನಾ, ಷೋಡಶೋಪಚಾರ ಪೂಜೆಯನ್ನೂಮಾಡಲಾಗು
ತ್ತದೆ. *ಗುರು* ಗ್ರಹವನ್ನು ಪ್ರತಿನಿಧಿಸುವ ಈ ದೇವಿ ಕಷ್ಟ ನಿವಾರಣೆ ಮಾಡುತ್ತಾಳೆ. ಮಹಾ ಅಷ್ಟಮಿಯಂದು ಕೆಲವೆಡೆ ಕುಮಾರಿ {ಕನ್ನಿಕಾ ಪೂಜೆ} ಪೂಜೆಯನ್ನೂಮಾಡಲಾಗುತ್ತದೆ, ಮಹಾನೈವೇದ್ಯಕ್ಕೆ *ಕಡಲೆಬೇಳೆ- ಅಕ್ಕಿ ಹಾಕಿದ ಪಾಯಸ* ಮಾಡಬಹುದು
*02,🌼ನವರಾತ್ರಿಯ ಒಂಭತ್ತನೇ ದಿನ🌼*
ಅಕ್ಟೋಬರ್ 11ರ ಶುಕ್ರವಾರ ಮತ್ತು ಗಂಗಾನವಮಿಯಂದು *🌼ಸಿದ್ಧಿಧಾತ್ರಿ-ಯನ್ನು ಪೂಜಿಸಲಾಗುತ್ತದೆ-ಕೇತು🌼* ಗ್ರಹವನ್ನು ಪ್ರತಿನಿಧಿಸುವ ದೇವಿ ಜ್ಞಾನ ಮತ್ತು ಆಧ್ಯಾತ್ಮಿಕಜೀವನ ನೀಡುತ್ತಾಳೆ. ಆಯುಧ ಪೂಜಾ ದಿನ ಇಂದೇ ಆಗಿದೆ {ಮಹಾಭಾರತ ಕಾಲದಲ್ಲಿ ಪಾಂಡವರು ತಮ್ಮವನವಾಸದ ಸಂದರ್ಭತಮ್ಮಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟ ನಂತರ ಆಶ್ವಯುಜ ನವಮಿಯಂದು ಶಸ್ತ್ರಾಸ್ತ್ರಗಳನ್ನುತೆಗೆದುಪೂಜಿಸಿವಿಜಯ ದಶಮಿಯಂದು ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು} ಮಹಾನೈವೇದ್ಯಕ್ಕೆ,ಪಾನಕ ಕೋಸಂಬರಿ,ಮಾಡಬಹುದು
ಆಶ್ವಯುಜ ಮಾಸದ ಮಹಾನವಮಿಯ ಈ ದಿನ ಶಸ್ತ್ರಾಸ್ತ್ರ, ಕುದುರೆ, ಆನೆ, ವಾಹನ ಮತ್ತು ಯಂತ್ರಗಳ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಪೌರಾಣಿಕ ಹಿನ್ನೆಲೆಯಪ್ರಕಾರಮಹಿಷನನ್ನು ಸಂಹರಿಸಲುದೇವಿಉಪ
ಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ,ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದುಪೂಜಿಸಲು ಆರಂಭಿಸಿದರು. ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ,
*03,🪔 ನವರಾತ್ರಿಗಳು ಮುಗಿದ ನಂತರದ ದಿನವೇ ವಿಜಯದಶಮಿ*🪔
ಅಕ್ಟೋಬರ್ 12ರ ಶನಿವಾರ ವಿಜಯದಶಮಿಯ ದಿನ. ಹತ್ತನೇ ದಿನವಾದ ಅಂದು ವಿಜಯೋತ್ಸವದ ದಿನ. ನವರಾತ್ರಿ ಮುಕ್ತಾಯಗೊಂಡು ವಿಜಯೋತ್ಸವವನ್ನು ಸಾಧಿಸುವ ದಿನವೂ ಹೌದು. ಅಂದು ವಿಶೇಷವಾಗಿ ಸುವಾಸಿನಿಯರ ಪೂಜೆಯನ್ನು ಮಾಡಬಹುದು/,ಮಾಡಲಾಗುತ್ತದೆ. ಮಹಾನೇವೇದ್ಯಕ್ಕೆ,
ಪಾನಕ, ಕೋಸಂಬರಿ, ಅಕ್ಕಿ ಬೇಳೆಯಿಂದ ಮಾಡಿದ ಪಾಯಸ - ಹೋಳಿಗೆ-ಕೊಬ್ಬರಿ ಮಿಠಾಯಿ-ಕಡಲೆಬೇಳೆ ವಡೆ -ಚಿತ್ರಾನ್ನ ಮತ್ತು ಮೊಸರನ್ನ ಮಾಡಬಹುದು,
#,ಸೀಮೋಲ್ಲಂಘನ ಸಂಪ್ರದಾಯದಲ್ಲಿ ಶಮೀ ವೃಕ್ಷ ಅಥವಾ ಮಂದಾರ ವೃಕ್ಷವಿರುವಲ್ಲಿಗೆ ಹೋಗಿ ಪೂಜೆಯನ್ನೂ ನೆರವೇರಿಸುವಂತಹ ಕ್ರಮವಿದೆ.
⚜️⚜️⚜️⚜️⚜️⚜️🪷,ದಶಮಿಯವಿಜಯೋತ್ಸವದ, ಮೆರವಣಿಗೆಯೊಂದಿಗೆ ದಸರಾ ಸಂಪನ್ನಗೊಳ್ಳುತ್ತದೆ,
*#,ವಿಶೇಷ ಗಮನಕ್ಕೆ*
ನವರಾತ್ರಿಯ ಪೂಜೆಯ ಸಂಕಲ್ಪವನ್ನು ಮಾಡಿ, ವ್ರತನಿಷ್ಠರಾಗಿ.ಸಿಟ್ಟು ಮಾಡಿಕೊಳ್ಳದೆ, ಶಾಂತ ಚಿತ್ತರಾಗಿ, ಯಾರನ್ನೂ ದ್ವೇಷಿಸದೆ ತಾಯಿಯ ಆರಾಧನೆಯನ್ನು ಮಾಡಿ ಸನ್ಮಾರ್ಗ ಪಡೆಯಿರಿ,🙏💐
🚩 *ಭಗವಂತ ಶ್ರೀ ಪರಶುರಾಮ*🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸ph no :9480916387

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ