11th October 2024

ಬೆಳಗಾವಿ ಶೋರೂಂನಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಕಲಾತ್ಮಕ ಪ್ರದರ್ಶನವನ್ನು ಉದ್ಘಾಟಿಸಿದರು
ಬೆಳಗಾವಿ: ದೇಶದಲ್ಲಿ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಚಾಲಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಬೆಳಗಾವಿ ಶೋರೂಂನಲ್ಲಿ ಅಕ್ಟೋಬರ್ 10 ರಿಂದ 13 ರವರೆಗೆ 'ಆರ್ಟಿಸ್ಟಿ ಶೋ' ಅನ್ನು ಆಯೋಜಿಸುತ್ತಿದೆ. ಮುಖ್ಯ ಅತಿಥಿಗಳಾದ ನೀತು ಕೌಸಂದಲ್ (ಕ್ಯಾಲಿಸ್ಸೆನಿಕ್ಸ್ ತರಬೇತುದಾರ, ಭರತನಾಟ್ಯ ನೃತ್ಯಗಾರ್ತಿ ಮತ್ತು ಡಿಜಿಟಲ್ ಫಿಟ್ ನೆಸ್ ಹಬ್ ಪಾಲುದಾರ), ಅಕ್ಷತಾ ತುಬಾಕಿ - ಬೆಳಗಾವಿಯ ಹೆಸರಾಂತ ಮತ್ತು ಪ್ರಶಸ್ತಿ ವಿಜೇತ ಮೇಕಪ್ ಕಲಾವಿದೆ, ದೇವಕಿ ಪವಾರ್ ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ ಗ್ರಾಹಕರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಗಿತ್ತು. ಈ ವಿಶೇಷ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ವಿನ್ಯಾಸಗಳ ವ್ಯಾಪಕ ಶ್ರೇಣಿಯೊಂದಿಗೆ ಕರಕುಶಲ ಆಭರಣಗಳ ಕಲಾತ್ಮಕ ಕೌಶಲ್ಯವನ್ನು ಪ್ರದರ್ಶಿಸಲಾಗುತ್ತದೆ.
ಆರ್ಟಿಸ್ವಿ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವ ಪ್ರತಿಯೊಂದು ಆಭರಣವೂ ವೈಶಿಷ್ಟ್ಯಪೂರ್ಣವಾಗಿರುತ್ತದೆ ಮತ್ತು ಭಾರತೀಯ ವಿನ್ಯಾಸದ ಕಲೆ ಹಾಗೂ ನುರಿತ ಕರಕುಶಲತೆಗೆ ಸಾಕ್ಷಿಯಾಗಿರುತ್ತದೆ. ಇಲ್ಲಿನ ಸಂಗ್ರಹವು ಅತ್ಯಂತ ಪರಿಪೂರ್ಣತೆಯೊಂದಿಗೆ ರಚಿಸಲಾದ ವಿನ್ಯಾಗಳನ್ನು ಮತ್ತು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ವಿಶೇಷ ಬ್ಯಾಂಡ್ಗಳಿಂದ ವಿವಿಧ ರೀತಿಯ ಆಭರಣಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ: ಮೈನ್ ಡೈಮಂಡ್ ಆಭರಣಗಳು, ಎರಾ ಕಟ್ ಡೈಮಂಡ್ಸ್, ಅತ್ಯಮೂಲ್ಯ ರತ್ನದ ಆಭರಣಗಳು, ಎಡ್ರಿಕ್ಸ್ ಕರಕುಶಲ ಆಭರಣಗಳು, ವಿರಾಜ್ ರಾಯಲ್ ಪೋಲ್ಕಿ ಆಭರಣಗಳು ಸೇರಿವೆ.
ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, "ಬೆಳಗಾವಿ ಶೋರೂಂನಲ್ಲಿ ಆರ್ಟಿಸ್ಟಿ ಶೋವನ್ನು ಆರಂಭ ಮಾಡಲು ಮತ್ತು ನಮ್ಮ ಆಭರಣದ ಕರಕುಶಲತೆಯ ಶ್ರೇಷ್ಠತೆಯನ್ನು ಆಚರಿಸುವ ಸೊಗಸಾದ ವಿನ್ಯಾಸಗಳನ್ನು ಪರಿಚಯಿಸಲು ಸಂತೋಷಪಡುತ್ತೇವೆ. ನಗರದಲ್ಲಿ ಆಭರಣ ಖರೀದಿದಾರರು ಅತ್ಯುತ್ಕೃಷ್ಟ ಗುಣಮಟ್ಟ, ಶುದ್ಧತೆ ಮತ್ತು ನ್ಯಾಯಯುತ ಬೆಲೆಗಳ ಆನಂದಿಸಬಹುದಾಗಿದೆ'' ಎಂದು ಹೇಳಿದರು. ನಮ್ಮ ಉತ್ಪನ್ನಗಳನ್ನು భరషనగట్టిందిగ
ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಲೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬದ್ಧತೆಗೆ ಹೆಸರುವಾಸಿಯಾಗಿದೆ. ಇಲ್ಲಿನ ನ್ಯಾಯಯುತ ಬೆಲೆಯ ಭರವಸೆಯ ಭಾಗವಾಗಿ, ಗ್ರಾಹಕರು ತಮ್ಮ ನೆಚ್ಚಿನ ಆಭರಗಳನ್ನು ಸಮಂಜಸವಾದ ಮೇಕಿಂಗ್ ಶುಲ್ಕಗಳಲ್ಲಿ ಖರೀದಿಸಬಹುದಾಗಿದೆ ಎಂಬುದನ್ನು ಬ್ರಾಂಡ್ ಖಚಿತಪಡಿಸುತ್ತದೆ. ಇದಲ್ಲದೇ, ಬ್ರಾಂಡ್ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ ಸೀಂ ಅನ್ನು ನೀಡುತ್ತದೆ. ಇದು ದೇಶದ ಎಲ್ಲಾ ಅಂಗಡಿಗಳಲ್ಲಿ ಚಿನ್ನಕ್ಕೆ ಏಕರೂಪದ ಬೆಲೆಯನ್ನು ಖಚಿತಪಡಿಸುತ್ತದೆ.
ತನ್ನ ಗ್ರಾಹಕರಿಗೆ ಬ್ರಾಂಡ್ನ ಬದ್ಧತೆಯನ್ನು ಬಲಪಡಿಸುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಮಲಬಾರ್ ಭರವಸೆಗಳನ್ನು ನೀಡುತ್ತದೆ. ಭರವಸೆಗಳು ಕಲ್ಲಿನ ತೂಕ, ನಿವ್ವಳ ತೂಕ ಮತ್ತು ಆಭರಣದ ಕಲ್ಲಿನ ಶುಲ್ಕವನ್ನು ಸೂಚಿಸುವ ಪಾರದರ್ಶಕ ಬೆಲೆಯನ್ನು ಬೆಲೆಯನ್ನು ಒಳಗೊಂಡಿವೆ. ಆಭರಣಗಳಿಗೆ ಜೀವಮಾನದ ಉಚಿತ ನಿರ್ವಹಣೆಯ ಭರವಸೆ, ಹಳೆಯ ಚಿನ್ನ ಮತ್ತು ವಜ್ರದ ಆಭರಣಗಳನ್ನು ಮರುಮಾರಾಟ ಮಾಡುವಾಗ ಚಿನ್ನ ಮತ್ತು ವಜ್ರಗಳಿಗೆ ಶೇ.100 ರಷ್ಟು ಮೌಲ್ಯ. ಶೇ.100 ರಷ್ಟು ಎಚ್ಯುಐಡಿ- ಅನುಸಾರ ಚಿನ್ನ, ಐಜಿಐ ಮತ್ತು ಜಿಐಎ ಪ್ರಮಾಣೀಕೃತ ವಜ್ರಗಳಿಗೆ ಜಾಗತಿಕ ಮಾನದಂಡಗಳ 28 ಹಂತದ ಗುಣಮಟ್ಟ ಪರಿಶೀಲನೆ, ಮರುಖರೀದಿ ಖಾತರಿ, ಪೂರಕ ಆಭರಣ ವಿಮೆ. ಜವಾಬ್ದಾರಿಯುತ ಮೂಲ ಮತ್ತು ನ್ಯಾಯಯುತ ಕಾರ್ಮಿಕ ಅಭ್ಯಾಸಗಳನ್ನು ಖಾತರಿಪಡಿಸುತ್ತದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಬಗ್ಗೆ
ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಲಬಾರ್ ಗ್ರೂಪ್ನ ಪ್ರಮುಖ ಕಂಪನಿಯಾಗಿದೆ, ಇದು ಪ್ರಮುಖ ವೈವಿಧ್ಯಮಯ ಭಾರತೀಯ ವ್ಯಾಪಾರ ಸಮೂಹವಾಗಿದೆ. 1993 ರಲ್ಲಿ ಕೇರಳದಲ್ಲಿ ಸ್ಥಾಪಿತವಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಇಂದು 13 ದೇಶಗಳಲ್ಲಿ 355 ಕ್ಕೂ ಹೆಚ್ಚು ಶೋರೂಮ್ಗಳು ಮತ್ತು 14 ಸಗಟು ಘಟಕಗಳ ಪ್ರಬಲ ಚಿಲ್ಲರೆ ಜಾಲವನ್ನು ಹೊಂದಿದೆ, ಜೊತೆಗೆ ಭಾರತ, ಆಸ್ಟ್ರೇಲಿಯಾ, ಕೆನಡಾ, ಯು.ಕೆ., ಯುಎಸ್ಎ, ಕಛೇರಿಗಳು, ವಿನ್ಯಾಸ ಕೇಂದ್ರಗಳು ಮತ್ತು ಕಾರ್ಖಾನೆಗಳು. ಮಧ್ಯಪ್ರಾಚ್ಯ, ಮತ್ತು ದೂರದ ಪೂರ್ವ. ಕಂಪನಿಯು ಪ್ರಸ್ತುತ ಜಾಗತಿಕವಾಗಿ ಅತಿ ದೊಡ್ಡ ಆಭರಣ ಚಿಲ್ಲರೆ ವ್ಯಾಪಾರಿಗಳಲ್ಲಿ ಸ್ಥಾನ ಪಡೆದಿದೆ.ಪ್ರಸ್ತುತ ಅತಿಥಿ ಮತ್ತು ನಿರ್ವಹಣೆ
ನೀತು ಕೌಸಂದಲ್-(ಕ್ಯಾಲಿಸ್ಥೆನಿಕ್ಸ್ ತರಬೇತುದಾರ, ಭರತನಾಟ್ಯ ನೃತ್ಯಗಾರ್ತಿ ಮತ್ತು ಡಿಜಿಟಲ್ ಫಿಟ್ನೆಸ್ ಹಬ್ಗೆ ಪಾಲುದಾರ).
ಅಕ್ಷತಾ ತುಬಾಕಿ - ಬೆಳಗಾವಿಯ ಹೆಸರಾಂತ ಮತ್ತು ಪ್ರಶಸ್ತಿ ವಿಜೇತ ಮೇಕಪ್ ಕಲಾವಿದೆ
ದೇವಕಿ ಪವಾರ್
ಶೋರೂಂ ಮುಖ್ಯಸ್ಥ - ಲಿಜೇಶ್ ಕೆ.ಜೆ
ಸಹಾಯಕ ಮುಖ್ಯಸ್ಥ - ಆಶಿಶ್ ಮ್ಯಾಥ್ಯೂ
ಶೋರೂಂ ಮ್ಯಾನೇಜರ್ - ಸೂರಜ್ ಅನ್ವೇಕರ್
ಸೇಲ್ಸ್ ಮ್ಯಾನೇಜರ್- ಅಬ್ದುಲ್ ಕರೀಂ

ಶ್ರೀ ದುರ್ಗಾ ಫಿಲ್ಮ್ಸ್ ಬ್ಯಾನರ್ ನಲ್ಲಿ "ನವಿಲುಗೆಜ್ಜೆ " ಎಂಬ ಕಿರು ಚಿತ್ರದ ಟೈಟಲ್ ಬಿಡುಗಡೆ ಅಂಬೆಡ್ಕರ್ ಉದ್ಯಾನವನದಲ್ಲಾಯಿತು...