12th October 2024

*ನನಸಾದ ಕನಸು*
ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠ ಡೋಣಿ ಇವರ ಕನಸು ಇಂದು ನನಸಾಗಿದೆ.
ಶ್ರೀ ನಂದಿವೇರಿ ಬಸವಣ್ಣನ ಎದುರಿನ ಬಂಗಾರ ಕೊಳದಲ್ಲಿ ಬಂಗಾರ ತೀರ್ಥದ ಜೀರ್ಣದ್ಧಾರದ ಕೈಂಕರ್ಯವನ್ನು ಶ್ರೀಗಳು ಕೈಗೊಂಡಿದ್ದುದು ತಮಗೆಲ್ಲರಿಗೆ ಗೊತ್ತಿರುವ ಸಂಗತಿ.
ಅನೇಕ ದಾನಿಗಳ ಸಹಾಯದಿಂದ ಬಂಗಾರ ತೀರ್ಥ ನಂದಿಮುಖಿಯಾಗಿ ಇಂದು ವಿಜಯದಶಮಿಯ ಶುಭದಿನದಂದು ಪ್ರವಹಿಸಲು ಪ್ರಾರಂಭಿಸಿರುದು ದೈವೀ ಸಂಕಲ್ಪವಾಗಿದೆ.
ಸದರಿ ಬಂಗಾರದ ಕೊಳದಲ್ಲಿ ಜಲ ಸಂಗ್ರಹಿಸಲು ನಾವೆಲ್ಲರೂ ಶತ ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ನಿನ್ನೆ ಸುರಿದ ಮಳೆಯಿಂದಾಗಿ ನೈಸರ್ಗಿಕವಾಗಿ ಬಂಗಾರ ಕೊಳವು ತಂಬಿ ನಂದಿಮಖಿ ಮುಖೇನ ಇಂದು ವಿಜಯದಶಮಿಯಂದೇ ಹರಿಯಲುಕ್ರಮಿಸಿರುವುದು ದೈವಸಂಕಲ್ಪವಲ್ಲದೇ ಮತ್ತೇನು?
ದೈವೀ ಸಂಕಲ್ಪದ ಮಂದೆ ಮಾನವ ಸಂಕಲ್ಪ ನಗಣ್ಯವೇಂಬುದು ಮತ್ತೊಮ್ಮೆ ಸಾಬೀತಾಗಿದೆ.
ಬನ್ನಿ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಬಸವಣ್ಣನ ಎದುರಿನ ಈ ಬಂಗಾರದ ಕೊಳದಿಂದ ಪ್ರವಹಿಸುತ್ತಿರುವ ಬಂಗಾರ ತೀರ್ಥದ ದರ್ಶನ ಪಡೆಯೋಣ, ತೀರ್ಥಪ್ರೋಕ್ಷಣೆಯಿಂದ ಪಾವನರಾಗೋಣ.
ಈ ಪುಣ್ಯಕಾರ್ಯದಲ್ಲಿ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರಿಗೆ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ವಿಜಯದಶಮಿಯ ಈ ಶುಭದಿನದಂದು ಜರುಗರುವ ವಿಶೇಶ ಪೂಜೆ, ಗಂಗಾಪೂಜೆ, ಗೋಪೂಜೆ ಗಳಲ್ಲಿ ಭಾಗವಹಿಸಿ ಶ್ರೀ ನಂದಿವೇರಿ ಬಸವಣ್ಣನ ಕೃಪೆಗೆ ಪಾತ್ರರಾಗಬೇಕೆಂದು ತಮ್ಮೆಲ್ಲರಲ್ಲಿ ಕೋರಿಕೊಳ್ಳುವ-
ಭಾಲಚಂದ್ರ ಜಾಬಶೆಟ್ಟಿ
9741888365

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ