20th October 2024

ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ ೨೦. ೧೦. ೨೦೨೪ರಂದು ಸಾಮೂಹಿಕ ಪ್ರಾಥ೯ನೆ ಶರಣೆ ಲಲಿತಾ ಕ್ಯಾಸನ್ನವರ ಅವರಿಂದ ಉಪನ್ಯಾಸ ಜರುಗಿತು. ಬಸವರಾಜ ಮಲಶೆಟ್ಟಿ ಅವರು ಕೃಷ್ಣ ಪಾರಿಜಾತವನ್ನು ಮೂರು ತಾಸಿನಲ್ಲಿ ಅಭಿನಯಿಸುವ ಹಾಗೆ ಬರೆದು ಯಾವುದೇ ಪಾತ್ರಕ್ಕೂ ಚ್ಯುತಿ ಬರದ ಹಾಗೇ ನಾಟಕ ಆಡಿಸುವಂತೆ ರಂಗ ಸಜ್ಜಿಕೆ ಮಾಡಿ ಕೊಟ್ಟ ಖ್ಯಾತಿ ಅವರದು. ಜನಪದ ಉಳಿಸಿ ಬೆಳಸಿದ ಕಿತಿ೯ ಇವರಿಗೂ ಸಲ್ಲುವುದು ಎಂದರು. ಇಂದು ಜನಪದ ಕಲೆ ನಸಿಸಿ ಹೋಗುತ್ತಿದೆ. ಅದನ್ನು ಉಳಿಸಿ ಬೆಳಸಬೇಕಾದ ಜವಾದ್ಬಾರಿ ನಮ್ಮ ನಿಮ್ಮೆ ಲ್ಲರ ಮೇಲಿದೆ. ಜಾನಪದ ವಾಧ್ಯಗಳನ್ನು ಸಹ ಪರಿಚಯಿಸಿ ಅವುಗಳ ಕುರಿತಾದ ಕ್ರುತಿಗಳನ್ನು ರಚಿಸಿದ್ದಾರೆ ಈಗ ಹಾವೇರಿಯಲ್ಲಿ ಜಾನಪದ ವಿಶ್ವ ವಿದ್ಯಾಲಯ ಪ್ರಾರಂಬಿಸಿದ್ದಾರೆ. ಇಂದು ಮಲಶೆಟ್ಟಿ ಅವರು ಬರೆದ ಪುಸ್ತಕಗಳನ್ನು ಮರು ಮುದ್ರಣ ಮಾಡುತ್ತಿದ್ದಾರೆ. ತಿಗಡೊಳ್ಳಿ ಗ್ರಾಮದಲ್ಲಿ ೧೯೪೭ರಲ್ಲಿ ಮರಿಕಲ್ಲಪ್ಪ ಮಲಶೆಟ್ಟಿ ಅವರು ಗಾಂಧೀಜಿಅವರ ಚಿತಾ ಭಸ್ಮ ತಂದು ಅದರಲ್ಲಿ ಆಲದ ಮರ ನೆಟ್ಟಿದ್ದಾರೆ ಅದಕ್ಕೆ ಅಲ್ಲಿ ಜನ ಗಾಂಧಿ ಮರ ಅನ್ನುವರು. ಈಗಲೂ ವಿಶೇಷ ದಿನಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಪ್ರಾರಂಭದಲ್ಲಿ ಶರಣ ಸುರೇಶ ನರಗುಂದ ಪ್ರಾಥ೯ನೆ ನಡಿಸಿಕೊಟ್ಟರು. ವಿಕೆ ಪಾಟೀಲ, ಆನಂದಕಕಿ೯, ಜೆ ಪಿ ಜವಣಿ,ಸುನಿಲ ಸಾಣಿಕೊಪ್ಪ, ಮಹಾoತೆಶ ಇ೦ಚಲ,ಬಸವರಾಜ ಗುರಣಗೌಡ್ರ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ ಇತರರು ವಚನ ವಿಶ್ಲೇಷಣೆ ಮಾಡಿದರು. ಎಂ ವಾಯ್ ಮೆಣಸಿನಕಾಯಿ ಪರಿಚಯಿಸಿದರು.
ಸಂಗಮೇಶ ಬಾಬು ತಿಗಡಿ ದಾಸೋಹ ಸೇವೆಗೖದರು. ಬಾಬು ಮ ತಿಗಡಿ, ಸುವಣಾ೯ತಿಗಡಿ, ಪ್ರಗತಿ ಮ ಪಾಟೀಲ, ಮಲಗೌಡ ಶಿ ಪಾಟೀಲ, ಪೂಜಾ ಪಾಟೀಲ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶಿವಾನಂದ ತಲ್ಲೂರ, ಉಪಸ್ಥಿತರಿದ್ದರು. ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸುರೇಶ ನರಗುಂದ ನಿರೂಪಿಸಿ ವಂದಿಸಿದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ