26th October 2024

⭐ ಎಕ್ಸ್ಪರ್ಟ್ ಪಿಯು ಕಾಲೇಜ್ ಬಳಗದಿಂದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ⭐
ಬೆಳಗಾವಿಯ ಹೆಸರಾಂತ ಎಕ್ಸ್ಪರ್ಟ್ ಪಿಯು ಕಾಲೇಜ್ ಬಳಗದ ವತಿಯಿಂದ 2024 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ನೀಟ್ ಪರೀಕ್ಷೆ ಪಾಸಾಗಲು ಶ್ರಮಿಸಿದ ಶಿಕ್ಷಕ ಬಳಗವನ್ನು ಸನ್ಮಾನಿಸಲಾಯಿತು. ಇತ್ತೀಚಿನ ದಿನಗಳಲ್ಲಿ ನೀಟ್ ಪರೀಕ್ಷೆ ಪಾಸ್ ಆಗುವುದು ಗಗನ ಕುಸುಮವಾಗಿದೆ. ಸಾವಿರಾರು ವಿದ್ಯಾರ್ಥಿಗಳು ವಿವಿಧ ರೀತಿಯಲ್ಲಿ ತಯಾರಿ ಮಾಡಿದರೂ ಸಹ ನೀಟ್ ಪರೀಕ್ಷೆ ತೇರ್ಗಡೆಯಾಗುವುದು ಬಲು ಕಠಿಣ. ಅದಕ್ಕೆ ಅವರು ದೂರದ ಮಂಗಳೂರು,ಬೆಂಗಳೂರು ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಅರಸಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಸಹ ಫಲಿತಾಂಶದ ಪ್ರಮಾಣ ನೋಡಿದರೆ ಶೇಕಡಾ 30ಕ್ಕಿಂತಲೂ ಕಡಿಮೆ. ಅದು ಅಂತಹ ಶಿಕ್ಷಣ ಸಂಸ್ಥೆಗಳಿಗೆ ಹೋಗಬೇಕೆಂದರೆ ಶೇಕಡ 95 ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಿಯುಸಿ ಹಂತದಲ್ಲಿ ಪಡೆದಿರಬೇಕು. ಹಾಗಾದರೆ ಶೇಕಡ 80 ರಿಂದ 95 ರವರೆಗಿನ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಪಾಸಾಗಲು ಸಾಧ್ಯವೇ ಇಲ್ಲವೇ. ಅದಕ್ಕೆ ಉತ್ತರ ಎಂಬಂತೆ ಸಾಧಾರಣ ಮಟ್ಟದ ವಿದ್ಯಾರ್ಥಿಗಳನ್ನು ಸಹ ತೆಗೆದುಕೊಂಡು ಅತಿ ಕಟ್ಟುನಿಟ್ಟಿನ ಕೋಚಿಂಗ್ ಕೊಡುವುದರ ಮೂಲಕ ಮೂಲ ಹಂತದಿಂದ ಆ ವಿದ್ಯಾರ್ಥಿಗಳನ್ನು ತಯಾರು ಗೊಳಿಸಿ ಪ್ರತಿಷ್ಠಿತ ನೀಟ್ ಪರೀಕ್ಷೆ ತೇರ್ಗಡೆಯಾಗುವುದರ ಮಟ್ಟಿಗೆ ತಯಾರಿಗೊಳಿಸಿದ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಕೋಚಿಂಗ್ ನೀಡಿದ ಅನುಭವವನ್ನು ಹೊಂದಿರುವ ಶ್ರೀ ಸ್ಯಾಮುಯೆಲ್ ಠಾಕೂರ, ಸಚಿನ್ ಪಂಡರ ಪೂರಕರ, ಅಮರೀಶ ಕುಮಾರ ಮತ್ತು ರೂಪೇಶ್ ಪಾಟೀಲ್ ಮತ್ತು ಅವರ ತಂಡ ಎಕ್ಸ್ಪರ್ಟ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈಗ ವಿದ್ಯಾರ್ಥಿಗಳ ಪಿಯುಸಿ ಹಂತದ ದಲ್ಲಿಯೇ ನಿಖರವಾದ ನೀಟ್ ತರಬೇತಿಯನ್ನು ನಿರಂತರವಾಗಿ ಎಕ್ಸ್ಪರ್ಟ್ ಪಿಯುಸಿ ಕಾಲೇಜಿನಲ್ಲಿ ಒದಗಿಸುತ್ತಿದ್ದಾರೆ. ಸಾಧಾರಣ ಮಟ್ಟದ ವಿದ್ಯಾರ್ಥಿಗಳು ಸಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಾವು ತೇರ್ಗಡೆ ಹೊಂದಬಹುದು ಎಂಬ ಆಶಾಭಾವನೆ ಯೊಂದಿಗೆ ಕಠಿಣ ಪರಿಶ್ರಮವಹಿಸಿ ಅಭ್ಯಾಸ ಮಾಡುತ್ತಿದ್ದಾರೆ. 2024 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720 ಕ್ಕೆ671 ಅಂಕಗಳಿಸಿ ಪಾಸಾಗಿ ಎಂಬಿಬಿಎಸ್ ಸೀಟ್ ದಕ್ಕಿಸಿಕೊಂಡ ವಿದ್ಯಾರ್ಥಿನಿ ಸಮೃದ್ಧಿ ಮೋರೆ ಸನ್ಮಾನ ಸ್ವೀಕರಿಸಿ ಮಾತನಾಡಿ ಪಿಯುಸಿ ಆದ ನಂತರ ಸಾಧಾರಣವಾಗಿದ್ದ ನಮ್ಮ ಶೈಕ್ಷಣಿಕ ಯೋಜನಾ ಸ್ಥಿತಿ ನಿರಂತರವಾದ ಅತಿ ಸರಳ ರೂಪದಲ್ಲಿ ಎಲ್ಲಾ ವಿಷಯಗಳ ಬೋಧನೆ ಮಾಡುವುದರೊಂದಿಗೆ ನಮ್ಮನ್ನು ಅತ್ಯಂತ ವ್ಯವಸ್ಥಿತವಾಗಿ ಪ್ರತಿ ಹಂತದಲ್ಲಿ ತಿದ್ದುವ ಮೂಲಕ ನಮ್ಮನ್ನು ತಯಾರಿಗೊಳಿಸಿದ್ದಾರೆ. ವಿದ್ಯಾರ್ಥಿಗಳು ಈಗ ಬೆಂಗಳೂರು ಮಂಗಳೂರು ಅರಸುವ ಬದಲು ಇಲ್ಲಿಯೇ ಬೆಳಗಾವಿಯ ಎಕ್ಸ್ಪರ್ಟ್ ಕಾಲೇಜಿನಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸ್ಯಾಮುಯೆಲ್ ಠಾಕೂರ, ಸಚಿನ್ ಪಂಡರಪುರಕರ, ಅಮರೀಶ ಕುಮಾರ ಮತ್ತು ಪ್ರಾಚಾರ್ಯರಾದ ರೂಪೇಶ್ ಪಾಟೀಲ ಮತ್ತು ತಂಡದ ಮಾರ್ಗದರ್ಶನ ಪಡೆದಿದ್ದೆ ಆದರೆ ಸಾಧಾರಣ ಮಟ್ಟದ ನಮ್ಮಂತಹ ವಿದ್ಯಾರ್ಥಿಗಳು ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಮ್ಮ ನೀಟ್ ನ ಕನಸನ್ನು ನನಸಾಗಿ ಕೊಳ್ಳುವತ್ತ ಹೆಜ್ಜೆ ಹಾಕಬಹುದು ಆ ನಿಟ್ಟಿನಲ್ಲಿ ಬೆಳಗಾವಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಳಿ ಮಾಡಿಸಿದಂತಿರುವ ಇಂತಹ ಮಾರ್ಗದರ್ಶಿ ಶಿಕ್ಷಕರಿರುವ ಎಕ್ಸ್ಪರ್ಟ್ ಕಾಲೇಜಿನ ಪ್ರಯೋಜನ ಬೆಳಗಾವಿಯ ಬಡ ಮತ್ತು ಸಾಧಾರಣ ಮಟ್ಟದ ವಿದ್ಯಾರ್ಥಿಗಳು ಪಡೆಯುವಂತಾಗಲಿ ಆ ನಿಟ್ಟಿನಲ್ಲಿ ಇವರ ಮಾರ್ಗದರ್ಶನ ಪಡೆಯಲಿ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ವತಿಯಿಂದ ನೀಟ್ ಪರೀಕ್ಷೆಯ ನುರಿತ ತಜ್ಞ ಶಿಕ್ಷಕರನ್ನು ಕಾಲೇಜಿನ ಬಳಗದವರು ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗೇಶ ದಂಡಾಪೂರೆ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನುರಿತ ಶಿಕ್ಷಕರ ತಂಡದಿಂದ ಕಾಳಜಿ ಪೂರ್ವಕವಾಗಿ ಕಾರ್ಯನಿರ್ವಹಿಸುತ್ತಾ ಒಳ್ಳೆಯ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ನಮ್ಮ ಸಂಸ್ಥೆಯ ಪ್ರಯೋಜನವನ್ನು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಪಡೆದು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಸಾಧನೆ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸದಾ ಶ್ರಮಿಸುತ್ತದೆ ಅದರ ಪ್ರಯೋಜನ ಪಡೆಯಿರಿ ಎಂದರು. ಕಾರ್ಯಕ್ರಮದಲ್ಲಿ ಮೈಲಾರ ತೆನಗಿ ಕಾಲೇಜು ಕಾರ್ಯ ನಿರ್ವಹಿಸುತ್ತಿರುವ ವಿವಿಧ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಗಜೇಂದ್ರ ಕುರಿ ಸ್ವಾಗತಿಸಿದರು ಸಂಜೀವ ಕರವಿನಕೊಪ್ಪ ನಿರೂಪಿಸಿದರು ಮತ್ತು ನಾಗಯ್ಯ ಗುರುವಯ್ಯನವರ ವಂದಿಸಿದರು

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ