1st November 2024

*ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಖಾಸಬಾಗ ಬೆಳಗಾವಿ ಇಲ್ಲಿಯ 1857 ನೇ ಮದ್ಯವರ್ಜನ ಶಿಬಿರ ದಿನಾಂಕ 23.09.24 ರಿಂದ 30.09.24 ರವರೆಗೆ ನೆಡೆದಿದ್ದು ಶಿಬಿರದಲ್ಲಿ ಭಾಗವಹಿಸಿದ ಶಿಭಿರಾರ್ಥಿಗಳ ನವಜೀವನ ಮಾಸಿಕ ಸಭೆಯನ್ನು ಇಂದು ಶ್ರೀ ನವದುರ್ಗ ಅಯ್ಯಪ್ಪ ಮಂದಿರದಲ್ಲಿ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ನಾರಾಯಣ ಶೆಟ್ಟಿ ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.*
*ಶಿಬಿರದಿಂದ ಒಂದು ಲಕ್ಷಕ್ಕೂ ಅಧಿಕ ಮಂದಿ ಕುಡಿತ ಬಿಟ್ಟು ಉತ್ತಮ ಜೀವನ ನೆಡೆಸಲು ದಾರಿ ಮಾಡಿ ಕೊಟ್ಟ ಪೂಜ್ಯ ವೀರೇಂದ್ರ ಹೆಗ್ಗಡೆಯವರನ್ನು ಈ ಸಂದರ್ಭದಲ್ಲಿ ಸ್ಮರಿಸಿ ನವಜೀವನ ಸದಸ್ಯರಿಗೆ ಶುಭ ಹಾರೈಸಿದರು.*
*ಕಾರ್ಯಕ್ರಮದಲ್ಲಿ ದಾರವಾಢ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಶ್ರೀ ಭಾಸ್ಕರ ಎನ್ ಇವರು ಕುಡಿತದ ಹಿಂದಿನ ಜೀವನ ಶೈಲಿ ಮತ್ತು ಪ್ರಸ್ತುತ ಕುಡಿತ ಬಿಟ್ಟು ಬದಲಾವಣೆಯಾಗುತ್ತಿರುವ ಜೀವನದ ಶೈಲಿಗಳ ಬಗ್ಗೆ ಮಾಹಿತಿ ನೀಡಿದರು. ತಾಲೋಕಿನ ಯೋಜನಾಧಿಕಾರಿಗಳು ಶ್ರೀ ಸುಭಾಷ್ ಪಿ.ಸಿ, ಜಿಲ್ಲಾ ಜನಜಾಗೃತಿ ಸದಸ್ಯರಾದ ಶ್ರೀ ರಾಜು ಬೆಲ್ಲದ, ಶ್ರೀ ರಾಜು ಮಿರ್ಜನ್ ಉಪಸ್ಥಿತರಿದ್ದು ಶುಭ ಹಾರೈಸಿದರು.*
*ಸಭೆಯಲ್ಲಿ ನವಜೀವನ ಸಮಿತಿಯ ಸದಸ್ಯರು ಕುಡಿತ ಬಿಟ್ಟ ನಂತರದ ಬುದಕಿನ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.*
*ಶ್ರೀ ಮಂಜುನಾಥ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಿ ಭಜನೆ ಮಾಡಲಾಯಿತು.*
*ಮೆಲ್ವೀಚಾರಕ ಭರತ್ ಉಳ್ಳೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಮಾಡಿದರು. ವಲಯದ ಸೇವಾಪ್ರತಿನಿಧಿಗಳು ಸಮಿತಿ ಸದಸ್ಯರ ಪೋಷಕರು ಉಪಸ್ಥಿತರಿದ್ದರು*

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ