9th November 2024

ಮಾರಿಹಾಳ ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ”ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನಬಾರ್ಡ್ ಯೋಜನೆಯ ಪ್ರತಿ ಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು.ಹಾಗು ಗ್ರಾಮೀಣ ಪ್ರದೇಶದಿಂದ ಶಹರಕ್ಕೆ ಹೋಗಿ ಕರ ಕುಶಲ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ಸೈಕಲ್ಮೋಟಾರಗಳನ್ನು ಸಂಘದ ನಿರ್ಧರಿತ ಬಡ್ಡಿ ರೂಪದಲ್ಲಿಕೊಡಲಾಯಿತು. ಈ ಸಂದರ್ಬದಲ್ಲಿ ಟ್ಟ್ರ್ಯಾಕ್ಟರಗಳ ರೈತ ಫಲಾನುಭವಿಗಳಾದ ಶಿವನಗೌಡ ನಿರ್ವಾಣಿ,ಅಲ್ತಾಫ್ ಜಮಾದಾರ ,ಇವರನ್ನು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ,ಹಸಿರು ಶಾಲ ಹಾಕಿ ಸತ್ಕರಿಸಿದರು.ಉಪಾಧ್ಯಕ್ಷರಾದ ಮಹದೇವ ಧನಾಯಿ,ಮುಖ್ಯ ನಿರ್ವಾಹಕರಾದ ರುದ್ರಪ್ಪ ಚನ್ನನ್ನವರ,ನಿರ್ದೇಶಕರಾದ ಜಿ,ಅಕ್ಕತಂಗೇರಹಾಳ,ಎಸ್ ಚಾಟೆ,ಎಸ್ ನಿರ್ವಾಣಿ,ಆರ್ ಹನ್ನೂರ,ವಿ ಚವಾಣ್,ಕೆ ಅಗಸಗಿ,ಎಸ್ ಮುಲ್ಲಾ,ಎಸ್ ಧರ್ಮೋಜಿ,ಜಿ ಪಾಟೀಲ,ಎಸ್ ಪೂಜೇರಿ,ಟ್ರ್ಯಾಕ್ಟರ್ರ ಮತ್ತು ಬೈಕ ಗಳ ಕೀಲಿ ಕೈ ಕೊಟ್ಟು ಅಭಿನಂದಿಸಿದರು.ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸಿಹಿ ಹಂಚಿದರು.

ಬೈಲಹೊಂಗಲ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜಕೀಯ ಜಿದ್ದಾಜಿದ್ದಿನ ಶಕ್ತಿ ಪ್ರದರ್ಶನದಿಂದ ಇಡೀ ರಾಜಧಾನಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ಕಡುಬಡತನದಲ್ಲೂ ವರ್ಷವಿಡೀ ಕಷ್ಟಪಟ್ಟು ಓದಿದ ಹತ್ತಾರು ಬಡ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲಾಗದೆ, ಕೊನೆ ಕ್ಷಣದಲ್ಲಿ ನೀಟ್ (NEET) ಮರುಪರೀಕ್ಷೆ ಬರೆಯುವ ಮಹತ್ವದ ಅವಕಾಶವನ್ನು ಕಳೆದುಕೊಂಡು ಪರೀಕ್ಷಾ ಕೇಂದ್ರಗಳ ಮುಂದೆ ಕಣ್ಣೀರು ಹಾಕುತ್ತಿರುವುದು ಅತ್ಯಂತ ಖಂಡನೀಯ, ಈ ವಿದ್ಯಾರ್ಥಿಗಳ ಮರಗು ಕಾಂಗ್ರೆಸ್ ಪಕ್ಷಕ್ಕೆ ತಟ್ಟಲಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ್ಣಿಕೇರಿ ಶಾಲೆಯಲ್ಲಿ 12 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಕ್ಕಳಿಂದ ವಿವಿಧ ಯೋಗಾಸನಗಳು ಪ್ರದರ್ಶನ

ನಾಳೆ ಪಿ. ಎನ್. ಗಾಡ್ಗಿಲ್ & ಸನ್ಸ್ ವತಿಯಿಂದ ಚಿತ್ರಕಲ ಸ್ಪರ್ಧೆ ಚಿರಂಜೀವಿ ಮೆಥೋಡಿಸ್ಟ ಆಂಗ್ಲ ಕನ್ನಡ ಮಾಧ್ಯಮ ಪ್ರೌಢ ಶಾಲೆ ಯಾದಗಿರಿ