12th November 2024

ಹಿರಿಯ ಸಾಹಿತಿ ಪ್ರೊ. ಶಿವಲಿಂಗಪ್ಪಾ ಭಾವಿಕಟ್ಟಿ (೮೩) ನಿಧನ.
ಅಂಕಲಗಿ ೧೨- ಅಕ್ಕತಂಗೇರಹಾಳ ಗ್ರಾಮದ ಹಿರಿಯ ಸಾಹಿತಿ ಪ್ರೊ. ಶಿವಲಿಂಗಪ್ಪ ಅಪ್ಪಣ್ಣಾ ಭಾವಿಕಟ್ಟಿ ಸೋಮವಾರ ನಿಧನರಾದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು.
೩ ದಶಕಗಳಿಗೂ ಹೆಚ್ಚು ಕಾಲ. ಕನ್ನಡ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಿಶ್ರಾಂತರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಮೋಘವಾಗಿದೆ. ಇವರ. ಅನೇಕ ಪ್ರಸಿದ್ಧ ಕಥೆ, ಕವನ,ನಾಟಕಗಳು, ಕಾದಂಬರಿಗಳು, ವಿಮರ್ಶಾ ಗ್ರಂಥಗಳು ಓದುಗರ ಹೃದಯ ತಟ್ಟಿದ್ದು, ಅವುಗಳಲ್ಲಿ ಅಸ್ತಿ ಪಂಜರ ಹಾಡು, ಹೊರೆ, ಜಾನಪದದಲ್ಲಿ ಅಂಕಲಗಿ ಅಡವೇಶ, ಜಾನಪದದಲ್ಲಿ ಕಿತ್ತೂರು, ಕಾವ್ಯಂಜಲಿ, ಕವನ ಸಂಕಲನ ಹೊರೆ, ಇವರು ರಚಿಸಿದ ಪ್ರಮುಖ ಕೃತಿಗಳಾಗಿವೆ. ಇವರು ಇತ್ತೀಚೆಗೆ ಅಂಕಲಗಿಯಲ್ಲಿ ಜರುಗಿದ ತಾಲೂಕಾ ೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಇವರಾಗಿದ್ದರು.
ಇವರ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಸಾಹಿತ್ಯಭಿಮಾನಿಗಳಾದ ಎನ್ ಬಿ ಶೆಟ್ಟೆನ್ನವರ, ನಿವ್ರತ್ತ ಪ್ರಾಚಾರ್ಯ ಬಿ ಎಲ್ ಪಾಟೀಲ, ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ಎಸ್ ಬಿ ಹೊಳೆಯಾಚಿ, ಓಂಪ್ರಕಾಶ ನಿರ್ವಾಣಿ, ಬಸವರಾಜ್ ಮುದೆನ್ನವರ, ಬಸವರಾಜ ಗೌಡಪ್ಪಗೋಳ, ಅಶೋಕ ಕರಲಿಂಗನ್ನವರ, ಸಿ.ಬಿ.ಮೇದಾರ ಸೇರಿದಂತೆ ಅಸಂಖ್ಯಾತ ಶಿಕ್ಷಕರು, ಅಭಿಮಾನಿಗಳು, ತೀವ್ರ ಸಂತಾಪ ಸೂಚಿಸಿದ್ದಾರೆ. ಅಕ್ಕತಂಗೇರಹಾಳ ದಲ್ಲಿ ಮಂಗಳವಾರ ಜರುಗಿದ ಮೃತರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿತ್ತು. ಶಿವಗಣಾರಾಧನೆಯು ಸ್ವಗ್ರಾಮ ಅಕ್ಕತಂಗೇರಹಾಳ ದಲ್ಲಿ ಇದೇ ಗುರುವಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ಮೂವರು ಪುತ್ರರು,ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗ ಅಗಲಿದ್ದಾರೆ. .ಸುರೇಶ ಉರಬಿನಹಟ್ಟಿ

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ