13th November 2024

ಸಂಘಗಳ ಗಟ್ಟಿತನಕ್ಕೆ ಸಹಕಾರ ಅತ್ಯವಶ್ಯ. ನ್ಯಾಯವಾದಿ ರಾಜೇಂದ್ರ ಗೌಡಪ್ಪಗೋಳ ಅಭಿಮತ.
ಅಂಕಲಗಿ ೧೩- ಸಹಕಾರಿ ಸಂಘಗಳು ಗಟ್ಟಿಗೊಳ್ಳಲು ಸರ್ವರ ಸಹಕಾರ ಅತ್ಯವಶ್ಯ ಎಂದು ಗೋಕಾಕ ಗ್ರಾಮೀಣ ಬಿಜೆಪಿ ಮಂಡಳ ಅಧ್ಯಕ್ಷರಾದ ನ್ಯಾಯವಾದಿ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು ಅಂಕಲಗಿಯಲ್ಲಿ ನೂತನವಾಗಿ ಸ್ಥಾಪಿತ ಸಿರಿ ಸಮ್ರದ್ಧಿ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ,ರಿಬ್ಬನ್ ಕತ್ತರಿಸಿ ಸಂಘ ಉದ್ಘಾಟಿಸಿ ಮಾತನಾಡಿದರು. ಹಳ್ಳಿಗಳ ಸಮ್ರದ್ಧಿಗೆ ಬ್ಯಾಂಕಗಳು, ಸಹಕಾರಿ ಸಂಘಗಳು, ಅತ್ಯವಶ್ಯವಾಗಿದ್ದು, ಇಲ್ಲಿಯ ನುರಿತ ಹಿರಿಯರಿಂದ ಪ್ರಾರಂಭಿಸಿದ ಈ ಸಂಘ ಆರ್ಥಿಕ ಬಲವರ್ಧನೆಗೊಳ್ಳಲು ,ಸಂಘದ ಸದಸ್ಯರು ಸಹಕಾರ ಮತ್ತು ಸಹಮತ ಹೊಂದಿರಬೇಕು. ಈ ಸಂಸ್ಥೆ ಯ ಸ್ಥಾಪಕರು ಅನುಭವವುಳ್ಳವರಾಗಿದ್ದರಿಂದಾಗಿ ಸಮ್ರದ್ಧಿ ಸಂಸ್ಥೆಯ ಸಿರಿತನ ಮತ್ತಷ್ಟು ಇಂಬುಗೊಳ್ಳುವದರಲ್ಲಿ ಸಂಶಯವೇ ಇಲ್ಲ ಎಂದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಧುರೀಣರಾದ ಭೀಮಗೌಡಾ ಪೊಲೀಸಗೌಡರ ಸಂಸ್ಥೆ ಅಭಿವ್ರದ್ಧಿ ಕುರಿತು ಮಾತನಾಡಿದರು. ಧುರೀಣರಾದ ಅಡಿವೆಪ್ಪಾ ನಾವಲಗಟ್ಟಿ, ಗಂಗಪ್ಪಾ ಅಂಗಡಿ, ವಿರುಪಾಕ್ಷಿ ಅಂಗಡಿ ವೇದಿಕೆಯಲ್ಲಿದ್ದರು. ಸಂಘದ ಕಾರ್ಯದರ್ಶಿ ಈರಣ್ಣ ನಬಾಪೂರಿ, ಎಮ್ ಡಿ, ಮಲ್ಲೇಶ ನಬಾಪೂರಿ, ಸಂಘದ ಚೇರಮನ್, ನಿರ್ವಾಣಿ ಹೊಂಕಳಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಗ್ರಾಮದ ಹಿರಿಯರು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ