19th November 2024

ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾಂಗಣಕ್ಕೆ ಮತ್ತಷ್ಟು ಒತ್ತು. ರಾಮತೀರ್ಥನಗರದ ಅಭಿನಂದನಾ ಕಾರ್ಯಕ್ರಮ ದಲ್ಲಿ ಶಾಸಕ ಆಸಿಫ್ ಸೇಠ್ ಅಭಿಮತ.
ಬೆಳಗಾವಿ. ೧೮- ನಮ್ಮ ನೆಲದಲ್ಲಿ ನಿಸರ್ಗ ದತ್ತ ಕಸುವಿದೆ. ಬಳಸಿಕೊಳ್ಳುವ ಕಲೆ ನಮ್ಮದಾದಾಗ
ಪ್ರಶಸ್ತಿಗಳು ನಮ್ಮ ಬೆನ್ನೇರುವವು ಎಂದು ಬೆಳಗಾವಿ ಉತ್ತರ ಕ್ಷೇತ್ರ ಶಾಸಕ ಆಸಿಫ್ ಸೇಠ್ ಹೇಳಿದರು.
ಅವರು ಭಾನುವಾರ ಸಂಜೆ ರಾಮತೀರ್ಥನಗರದ ಸಮುದಾಯ ಭವನದಲ್ಲಿ ಕುಂದರನಾಡ ರಹವಾಸಿಗಳ ಸಂಘ, ಸ್ನೇಹ ಸಮಾಜ ಸೇವಾ ಸಂಘ ದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ, ಸೂಪರ ವಾಕಿಂಗ್ ಟೀಮ್, ಸುರೇಶ ಯಾದವ ಪೌoಡೇಷನ್, ವಿರಾಟ್ ಕಾರ ಸೇಲ್ಸ್ ಕಾರ್ಪೊರೇಶನ್, ಶಿವಂ ಸೀಡ್ಸ್& ಆಗ್ರೋ ಮಾರ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರಂಜಿ ಶ್ರೀಗಳಿಗೆ, ಶಾಸಕ ಆಸಿಫ್ ಸೇಠ್ ಹಾಗೂ ವಿಶ್ವ ಕರಾಟೆ ಪಟು ವೈಷ್ಣವಿ ನಿರ್ವಾಣಿ ಅವರಿಗೆ ಜರುಗಿದ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಪಡೆದು ಮಾತನಾಡಿದರು. ರಾಮತೀರ್ಥನಗರದಲ್ಲಿ ಕಸುವಿದ್ದ ಕಾರಣ ಜಿಲ್ಲಾ ಕ್ರೀಡಾಂಗಣ ದೊರಕಿದೆ. ಸಕಲ ವ್ಯವಸ್ಥೆ ಕಲ್ಪಿಸಿ ಸುಸಜ್ಜಿತ ಕ್ರೀಡಾಂಗಣ ಮಾಡುವುದು ನಮ್ಮ ಗುರಿ. ನಮ್ಮ ನಾಡು ನಮ್ಮ ದೇಶ ನಮ್ಮ ಹೆಮ್ಮೆ. ನಮ್ಮ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮನ ತವರಿನಲ್ಲಿ ಹುಟ್ಟಿ ಕರಾಟೆ ಯಲ್ಲಿ ಸ್ವರ್ಣ ಪದಕ ಪಡೆದು ವಿಶ್ವ ವೀರಾಗ್ರಣಿ ಪಟ್ಟಕ್ಕೇರಿದ ವೈಷ್ಣವಿ ನಮ್ಮೆಲ್ಲರ ಅಭಿಮಾನ ಇದಾಗಿದೆ ಎಂದರಲ್ಲದೆ, ಸನ್ಮಾನಿಸಿ ಗೌರವಿಸಿದರು. ದಿವ್ಯ ಸಾನಿಧ್ಯ ವಹಿಸಿದ್ದ ಕರಮ್ಜಿ ಮಠದ ಗುರುಸಿದ್ಧ ಮಹಾಸ್ವಾಮೀಜಿ ಸನ್ಮಾನ ಸ್ವೀಕರಿಸಿ, ಮಾತನಾಡಿ ಅಮ್ರತ ಮಹೋತ್ಸವದ ಹಿನ್ನೆಲೆಯಲ್ಲಿ ಅಪಾರ ಭಕ್ತರು ನನ್ನನ್ನು ಅಭಿನಂದಿಸುತ್ತಿದ್ದು ಸಮಾಜದ ಋಣ ನನಗೆ ಭಾರವೆನಿಸಿದೆ. ನಮ್ಮ ಮಠದ ಮೇಲಿನ ಎಲ್ಲರ ಪ್ರೀತಿಗೆ ಬೆಲೆ ಕಟ್ಟಲಾಗದು. ಎಲ್ಲ ಮಠ ಮಾನ್ಯಗಳ ಶ್ರೀಗಳು ನನಗೆ ಪ್ರೀತಿ ಕೊಟ್ಟು, ಆಶೀರ್ವಾದ ಮಾಡಿದ್ದು ನಾನು ಕ್ರತಾರ್ಥನಾಗಿದ್ದೇನೆ ಎಂದರಲ್ಲದೆ, ಶ್ರೀ ಮಠದ ಪರ ವೈಷ್ಣವಿ ಯನ್ನು ಸನ್ಮಾನಿಸಿ ಅಭಿನಂದಿಸಿದರು. ಮಲ್ಲಿಕಾರ್ಜುನ ಹಿತ್ತಲಮನಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ
ಜಿಲ್ಲಾಕಾಂಗ್ರೆಸ್ ಅದ್ಯಕ್ಷ ವಿನಯ ನಾವಲಗಟ್ಟಿ ವೈಷ್ಣವಿ ಸಾಧನೆ ನಮ್ಮ ಮಕ್ಕಳಿಗೆ ಸ್ಫೂರ್ತಿ. ಎಲ್ಲ ಪಾಲಕರು ಮಕ್ಕಳ ಆಸಕ್ತಿ ಅರಿತು ಪ್ರೊತ್ಸಾಹಿಸುವದಾಗಬೇಕೆಂದರು.
ವೇದಿಕೆಯಲ್ಲಿ ಸುರೇಶ ಯಾದವ ಪೌoಡೇಷನ್ ಅಧ್ಯಕ್ಷರಾದ ಸುರೇಶ ಯಾದವ, ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ನಿವ್ರತ್ತ ಸೈನಿಕ ಸಂಘದ ಅದ್ಯಕ್ಷ ವಿರುಪಾಕ್ಷಿ ತಿಳಗಂಜಿ, ಸುರೇಶ ಉರಬಿನಹಟ್ಟಿ, ಕರಾಟೆ ವೀರಾಗ್ರಣಿ ವೈಷ್ಣವಿ ಆಸೀನರಾಗಿದ್ದರು.
ಪ್ರೊ.ಎ. ಕೆ ಪಾಟೀಲ ,ಎಸ್ ಎಸ್ ಮುಳಕೂರಿ, ಮಹೇಶ ಮಾವಿನಕಟ್ಟಿ ನಿರೂಪಿಸಿದರು. ಆನಂದ ಕರ್ಕಿ ಪ್ರಾರ್ಥಿಸಿದರು. ಎ.ಕೆ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನಿವ್ರತ್ತ ಸೈನಿಕ ಸಂಘ, ಹಾಗೂ ವಿವಿಧ ಸಂಘಟಣೆಗಳಿಂದ ವೇದಿಕೆಯ ಗಣ್ಯರಿಗೆ ಸನ್ಮಾನ ಜರುಗಿತು.
ಕಾರ್ಯಕ್ರಮದಲ್ಲಿ ಬಿ.ಬಿ.ಉರಬಿನಹಟ್ಟಿ, ಬಸವರಾಜ ಗೌಡಪ್ಪಗೋಳ, ವೀರನಗೌಡ ಈಶ್ವರಪ್ಪಗೋಳ, ಪ್ರಹ್ಲಾದ ಹೊಳೆಯಾಚಿ, ಬಸವರಾಜ ಸುಲ್ತಾನಪೂರಿ, ಓಂಪ್ರಕಾಶ ನಿರ್ವಾಣಿ, ಜಿ ಎಸ್ ಪಾಟೀಲ, ರವಿ ಕೋರಿ , ರಮೇಶ ನಿರ್ವಾಣಿ, ಆನಂದ ಪಾಟೀಲ, ಮಲ್ಹಾರ ದೀಕ್ಷಿತ, ಡಾ ಶಿವಾನಂದ ಮುಳಕೂರಿ, ಬಸವರಾಜ ವಾಲಿ, ಸೇರಿದಂತೆ ಅಭಿಮಾನಿಗಳು, ಆಪ್ತರು, ರಹವಾಸಿ ಸಂಘಗಳ ಪದಾಧಿಕಾರಿಗಳು ಉಪಸ್ತಿತರಿದ್ದರು.
ಸುರೇಶ ಉರಬಿನಹಟ್ಟಿ

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ