22nd November 2024

ಭಾರತೀಯ ಜನತಾ ಪಾರ್ಟಿ ಬೆಳಗಾವಿ
ವಕ್ಫ್ ಮಂಡಳಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಾಗೂ ರೈತ ವಿರೋಧಿ ನೀತಿ* *ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ "ನಮ್ಮ ಭೂಮಿ ನಮ್ಮ ಹಕ್ಕು"*
*ಬೃಹತ್ ಜನಾಂದೋಲನ ಧರಣಿ ಸತ್ಯಾಗ್ರಹ ನಡೆಯಿತು*
*ನಗರದ ಸರ್ದಾರ್ ಮೈದಾನದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ತೆರಳಿದರು* *ಧರಣಿ ಸತ್ಯಾಗ್ರಹ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾವಿರಾರು ಭಾ.ಜ.ಪಾ ಕಾರ್ಯಕರ್ತರು ಭಾಗವಹಿಸಿದ್ದರು*
*ಪ್ರತಿಭಟನಾ ಮೆರವಣಿಗೆಯ ಉದ್ದಕ್ಕೂ ವಿವಿಧ ಡೊಳ್ಳಿನ ಕುಣಿತ,ಭಜನಾ ತಂಡ,ಹಲಗೆ ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು*
*ಬೆಳಿಗ್ಗೆ 11 ಗಂಟೆಯಿಂದ ನಡೆದ ಧರಣಿ ಸತ್ಯಾಗ್ರಹ ಸಾಯಂಕಾಲ 5 ಗಂಟೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಮುಕ್ತಾಯವಾಯಿತು*
*ಪ್ರತಿಭಟನಾ ನಿರತರ ಪ್ರಮುಖ ಬೇಡಿಕೆಗಳು*
*1*) ವಕ್ಫ್ ರೈತರ ಆಸ್ತಿ ಕಬಳಿಕೆ. ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಭ್ರಷ್ಟಾಚಾರಗಳ
ಮುಖ್ಯಮಂತ್ರಿಯಾದ ಶ್ರೀ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು.
*2*) ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು
ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೇಜಟ್ ನೋಟಿಫಿಕೆಶನ್ ಅನ್ನು
ಹಿಂಪಡೆಯಬೇಕು.
*3*) ಕೇಂದ್ರ ಸರ್ಕಾರವು ತರುತ್ತಿರುವ ವಕ್ಸ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ
ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ
ಕಳುಹಿಸಿಕೊಡಬೇಕು.
*4*)ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ನ್ನು ಎಪಿಎಲ್ ಕಾರ್ಡ್ ಎಂದು ಘೋಷಿಸಿರುವುದನ್ನು
ತಕ್ಷಣವೇ ಬಿಪಿಎಲ್ ಕಾರ್ಡ್ ಎಂದು ಘೋಷಣೆ ಮಾಡಬೇಕು.
ನಮ್ಮ ಭೂಮಿ ನಮ್ಮ ಹಕ್ಕು ಜನಾಂದೋಲನ ಧರಣಿ ಸತ್ಯಾಗ್ರಹ ಉದ್ದೇಶಿಸಿ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಮಾತನಾಡಿ ಸರಕಾರದ ತಪ್ಪು ಆದೇಶದಿಂದ ರೈತರು, ಹಿಂದೂ ಮಠ ಮಂದಿರಗಳು, ಭಕ್ತರು,
ಸ್ವಾಮೀಜಿಗಳು ಆತಂಕದಲ್ಲಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ನೋಟಿಸನ್ನು ಹಿಂಪಡೆದರೆ
ಸಾಲದು; 1974ರ ಗಜೆಟ್ ಅಧಿಸೂಚನೆಯನ್ನೂ ರದ್ದು ಮಾಡಬೇಕು. ಈ ವಿಷಯದಲ್ಲಿ ಕೇವಲ
ಕಣ್ಣೆರೆಸುವ ತಂತ್ರ ಮಾಡುವುದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.
ಅಭಿನವ ಶ್ರೀಗಳು(ಕ್ಯಾರಗುಡ್ಡ) ಅವರು ಮಾತನಾಡಿ ಮಠ ಮಾನ್ಯಗಳ ಆಸ್ತಿಯನ್ನು ಅತಿಕ್ರಮಣ ಮಾಡಿರುವ ಉದಾಹರಣೆಗಳನ್ನು ಹೇಳಿ ಕೂಡಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್,ಎಂ.ಬಿ.ಜಿರಲಿ ಮಾತನಾಡಿ
ಬಿಪಿಎಲ್ ಪಡಿತರ ಚೀಟಿ ರದ್ದತಿ ಹಾಗೂ ಎಪಿಎಲ್ ಕಾರ್ಡ್ ರದ್ದತಿಯಿಂದ ಲಕ್ಷಾಂತರ
ಜನರಿಗೆ ತೊಂದರೆ ಆಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ಗರೀಬ್
ಕಲ್ಯಾಣ್ ಅನ್ನ ಯೋಜನೆಯಲ್ಲಿ ಪಡಿತರಿಗೆ ಅಕ್ಕಿ ನೀಡುತ್ತಿದ್ದು ಕಾರ್ಡ್ ರದ್ದತಿಯಿಂದ ಜನರಲ್ಲಿ
ಭಯದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಆಯುಷ್ಮಾನ್ ಯೋಜನೆ
ಸಂಬಂಧಿತ ನೆರವೂ ಸಿಗದಿರುವ ಆತಂಕ ಜನರನ್ನು ಕಾಡುತ್ತಿದೆ ಎಂದು ಎಂದು ಹೇಳಿದರು.ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ,
ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಜಗದೀಶ್ ಮೆಟಗುಡ್ಡ, ಅರವಿಂದ ಪಾಟೀಲ್ ಮಾತನಾಡಿ
ಬಡವರಿಗೆ ಮೊದಲು ನೋಟಿಸ್ ಕೊಟ್ಟು ಅವರ ಪಡಿತರ ಚೀಟಿಯನ್ನು ಬಿಪಿಎಲ್
ಕಾರ್ಡ್ನ್ನಾಗಿ ಪರಿವರ್ತಿಸುವ ಕಾರ್ಯ ನಡೆಸಬೇಕಿತ್ತು. ಆದರೆ, ಎಪಿಎಲ್ನ್ನಾಗಿ ಮಾಡಿದ್ದು
ತೀವ್ರ ಖಂಡನೀಯ, ಜಮೀನನ್ನು ಏಕಾಏಕಿ ಪಹಣಿಯಲ್ಲಿ ವಕ್ಫ್ ಎಂದು ಬದಲಿಸಿದ
ಮಾದರಿಯಲ್ಲಿ ಬಡಜನರ ಅನ್ನ ಕಸಿಯುವ ಕಾರ್ಯ ನಡೆದಿದೆ. ಇಂಥ ಜನವಿರೋಧಿ,
ಬಡವರ ವಿರೋಧಿ ನೀತಿಯನ್ನು ನಾವು ಖಂಡಿಸುತ್ತೇವೆ. ತಮ್ಮ ಮೂಲಕ ರಾಜ್ಯ ಸರ್ಕಾರದ
ಗಮನಕ್ಕೆ ತರುತ್ತಿದ್ದೇವೆ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬರುವ ಡಿಸೆಂಬರ್
ತಿಂಗಳ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕರ್ನಾಟಕದಾದ್ಯಂತ ಉಗ್ರ ಹೋರಾಟ
ನಡೆಸುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯದ ಪ್ರಮುಖ ಪದಾಧಿಕಾರಿಗಳು, ಗ್ರಾಮಾಂತರ ಜಿಲ್ಲೆ ಹಾಗೂ ಮಹಾನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲೆಯ,ಮಂಡಲದ ಪ್ರಮುಖ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

ಶಿಕ್ಷಣ ಇಲಾಖೆಯ ಅಪ್ಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ವಿ ಇವರು ಹಲಗಾ ಶಾಲೆಗೆ ಭೇಟಿ..

ಎಸ್ಐಆರ್ ವಿಚಾರದಲ್ಲಿ ರಾಯರೆಡ್ಡಿಗೆ ತಿಳುವಳಿಕೆ ಕೊರತೆ- ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ಕುಮಾರ ಗುಳಗಣ್ಣ ಟಾಂಗ್- ಎಸ್ಐಆರ್ ಮೇಲ್ವಿಚಾರಣೆ ರಾಜ್ಯದ ಹೊಣೆ ಎಂಬುದು ಅರಿಯಲಿ