24th November 2024

ಅಕ್ಕತಂಗೇರಹಾಳ ನನ್ನ ಬಾಲ್ಯ ನೆನಪಿಸುವ ನೆಚ್ಚಿನ ಗ್ರಾಮ
ಅಕ್ಕತಂಗೇರಹಾಳ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಚಂದ್ರಶೇಖರ ಕಂಬಾರ ಅಭಿಮತ.
ಅಂಕಲಗಿ. ೨೪- ನಾನು ಈ ಗ್ರಾಮದಲ್ಲಿ ಬಾಲ್ಯದಲ್ಲಿ ಆಡಿ ಬೆಳೆದ ಮತ್ತು ಓಡಾಡಿದ ನೆನಪುಗಳು ಇನ್ನೂ ನನ್ನಲ್ಲಿ ಅಚ್ಛಳಿಯದೇ ಉಳಿದಿದ್ದು, ಎಂದೂ ನನ್ನಿಂದ ಅವು ಮರೆಯಾಗಲಾರವು. ಎಂದು ಜಾಣಪೀಠ ಪ್ರಶಸ್ತಿ ಪುರಸ್ಕ್ರತ ಡಾ ಚಂದ್ರಶೇಖರ ಕಂಬಾರ ಹೇಳಿದರು. ಅವರು ಭಾನುವಾರ ಆರಾಧ್ಯದೈವ ಅಕ್ಕತಂಗೇರಹಾಳ ಶ್ರೀ ದುರ್ಗಾದೇವಸ್ಥಾನಕ್ಕೆ ಭೆಟ್ಟಿ ಕೊಟ್ಟು, ಆಶೀರ್ವಾದ ಪಡೆದು ಮಾತನಾಡಿದರು. ಧರ್ಮ ಪತ್ನಿಯ ತವರಾದ ಈ ಅಕ್ಕತಂಗೇರಹಾಳ ನನ್ನ ಪ್ರೀತಿಯ ಗ್ರಾಮ. ಇಲ್ಲಿಯ ಜನರ ನನ್ನೊಂದಿಗಿನ ಪ್ರೀತಿ, ವಾತ್ಸಲ್ಯಗಳು, ಎಲ್ಲರಲ್ಲಿಯ ಸೌಜನ್ಯ, ನಡೆ,ನುಡಿಗಳು ನನ್ನ. ಭಾವನೆಗಳಲ್ಲಿ ಕಟ್ಟಿ ಹಾಕಿವೆ. ನನಗೆ ದೊರೆತ ಎಲ್ಲ ಗೌರವಗಳಿಗಿಂತ ನನಗೆ ಇಲ್ಲಿಯ ಗೌರವಗಳು, ಮಾನ, ಸನ್ಮಾನಗಳು ಅತ್ಯಂತ ಹಿರಿದಾಗಿವೆ . ಈ ನಾಡು ಸಹಿತ ನನಗೆ ಸಾಹಿತ್ಯದ ಒಂದು ಭಾಗವೆನಿಸಿದ್ದು ನನಗೆ ಅತೀ ಹೆಮ್ಮೆಯಾಗಿದೆ. ಅಕ್ಕತಂಗೇರಹಾಳ ನನ್ನ ಪ್ರೀತಿಯ ಒಂದು ಭಾಗವೆಂಬುದನ್ನು ಅಭಿಮಾನದಿಂದ ಹೇಳುವೆ ಎಂದರಲ್ಲದೆ, ಸನ್ಮಾನಿಸಿದ ಅಭಿಮಾನಿಗಳು, ಮತ್ತು ಸಂಬಂದಿಗಳಿಗೆ ಧನ್ಯವಾದ ಹೇಳಿದರು.
ವೇದಿಕೆಯಲ್ಲಿದ್ದ ಗ್ರಾಮದ ಹಿರಿಯರು, ಅಭಿಮಾನಿಗಳು ಸಮಸ್ತ ಗ್ರಾಮದ ಪರ ಸನ್ಮಾನಿಸಿ ಗೌರವಿಸಿದರು.
ಆನಂದ ಬಿಳಿಕಿಚಡಿ ಮತ್ತು ಪತ್ರಕರ್ತ ಸುರೇಶ ಉರಬಿನಹಟ್ಟಿ ಕಂಬಾರರ ಸಾಹಿತ್ಯ ಸೇವೆ ಮತ್ತು ಪ್ರಶಸ್ತಿಗಳ ಕುರಿತು ಮಾತನಾಡಿದರಲ್ಲದೆ, ಕಂಬಾರರ. ಈ ಗ್ರಾಮದ. ಭೆಟ್ಟಿಯು ಹೊಸ ಕಳೆ, ಮತ್ತು ಚೈತನ್ಯ ಒದಗಿಸಿದೆ ಎಂದರು.
ವೇದಿಕೆಯಲ್ಲಿ ಬೆಳಗಾವಿ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ, ದುರ್ಗಾ ದೇವಸ್ಥಾನ ಕಮಿಟಿ ಅದ್ಯಕ್ಷ ವೀರನಗೌಡಾ ಈಶ್ವರಪ್ಪಗೋಳ, ಬಸವಣ್ಣಿ ಬೆಣ್ಣಿ, ಬಾಳಪ್ಪ ದಡ್ಡಿ, ಸಿದವೀರಪ್ಪಾ ತುಪ್ಪದ, ಕಿಶೋರ ಬೆಣ್ಣಿ, ಅಶೋಕ ಕರಲಿಂಗನ್ನವರ, ರಮೇಶ ನಿರ್ವಾಣಿ, ಗುರುವಯ್ಯಾ ಹಿರೇಮಠ, ಬಾಳಗೌಡ ಪಾಟೀಲ, ಶಂಕರ ತುಪ್ಪದ, ರವಿ ಹಣಮನ್ನವರ, ದಯಾನಂದ ಹ್ಯಾಗಿ, ಅಪ್ಪಾಸಾಹೇಬ ಬಡಿಗೇರ, ನಿವ್ರತ್ತ ಕ್ಯಾಪ್ಟನ್ ಶಿವನಗೌಡಾ ನಿರ್ವಾಣಿ, ಸೇರಿದಂತೆ ಸಾಹಿತ್ಯಿಕ ಅಭಿಮಾನಿಗಳು, ಭಕ್ತಾದಿಗಳು, ದುರ್ಗಾ ದೇವಸ್ಥಾನ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಸುರೇಶ್ ಉರಬಿನಹಟ್ಟಿ

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ