26th November 2024

*ಸಂವಿಧಾನ ದಿನಾಚರಣೆ: ಸರಕಾರಿ ಸರದಾರ್ಸ ಪದವಿ ಪೂರ್ವ ಕಾಲೇಜು
ಬೆಳಗಾವಿ: ಸಂವಿಧಾನವನ್ನು ಅಂಗೀಕರಿಸಿಕೊಂಡ ದಿನವನ್ನು ಬಾಬಾ ಸಾಹೇಬರ ಫೋಟೋ ಪೂಜೆ ಹಾಗೂ ಸಂವಿಧಾನ ಪೀಠಿಕೆಯನ್ನು ಓದಿಸುವುದರ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ಎಂ ಮುಲ್ಲಾ ಸರ್ ಸಂವಿಧಾನ ಪೀಠಿಕೆ ಬೋಧಿಸಿದರು,ಹಟ್ಟಿ ಸರ್ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಹಾಗೂ ನಮ್ಮ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವುದರ ಅವಶ್ಯಕತೆ ಹೇಳಿದರು.
ಈ ಸಂಧರ್ಭದಲ್ಲಿ ಪ್ರಾಂಶುಪಾಲರಾದ ವೈ.ಎಂ. ಪಾಟೀಲ ಸರ್, ಉಪನ್ಯಾಸಕರಾದ ಜಿಡ್ಡಿಮನಿ ಸರ್ ಹಾಗೂ ಇತರೆ ಉಪನ್ಯಾಸಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ