28th November 2024

ಬೆಳಗಾವಿ-ವಿದ್ಯಾರ್ಥಿಗಳು ಪುರಾತನ ವಿಷಯಗಳ ಬಗ್ಗೆ ಅಧ್ಯಯನ ಮಾಡಿ "ಪ್ರಾಚ್ಯ ಪ್ರಜ್ಞೆ" ಬೆಳೆಸಿಕೊಳ್ಳಬೇಕು ಮತ್ತು ಸ್ಪರ್ಧೆಗಳಲ್ಲಿ ಸ್ಪರ್ಧಾಮನೋಭಾವದಿಂದ ಭಾಗವಹಿಸಬೇಕು ಎಂದು
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ .ಬಿ. ಎನ್. ಕಸಾಳೆ. ಹೇಳಿದರು.
ಬೈಲಹೊಂಗಲ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ "ಪ್ರಾಚ್ಯ ಪ್ರಜ್ಞೆ" ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಚಿತ್ರಕಲೆ, ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯ ನೋಡಲ್ ಅಧಿಕಾರಿಗಳಾದ ಎಸ್ ಎಸ್ ಚಳಕೊಪ್ಪ ಮಾತನಾಡಿ ಸ್ಪರ್ಧೆಯ ನಿಯಮಗಳನ್ನು ಮತ್ತು ಅವುಗಳ ಮಹತ್ವ ತಿಳಿಸಿಕೊಟ್ಟರು ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಮಹೇಶ ಯರಗಟ್ಟಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕು ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಸುತಗಟ್ಟಿ, ನಿರ್ಣಾಯಕರಾಗಿ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು ಹಾಗೂ ಸ್ಪರ್ಧಾಳುಗಳಾಗಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು. ಆನಿಗೋಳ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಪಾ ಪೂಜೇರ ಮತ್ತು ಅಶ್ವಿನಿ ಚಂದನ್ನವರ ಪ್ರಾರ್ಥನಾ ಗೀತೆ ಹಾಡಿದರು. ಸಿ ಆರ್ ಪಿ ರಾಜು ಹಕ್ಕಿ ಸ್ವಾಗತಿಸಿದರು, ಸಿ ಆರ್ ಪಿ ಗೌಡಪ್ಪ ಪಾಟೀಲ ವಂದಿಸಿದರು. ಬಿ ಆಯ್ ಇ ಆರ್ ಟಿ ಗಳಾದ ರಮೇಶ ಇಂಗಳಗಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ