29th November 2024

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಂದ ರಚಿತವಾದ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ - ಮಾನಸ - ಸಿಕ್ರಂ.
ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಸಂವಿಧಾನ ದಿನಾಚರಣೆ: ಮಾನಸ -ಸಿಕ್ರಮ.
ಸುನೀತಾ ಹೊನ್ನಣ್ಣವರು ಇವರು ಮೊಟಾರು ವಾಹನಗಳ ಕಾಯ್ದೆ 1988ರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಅತಿ ವೇಗವಾಗಿ ವಾಹನಗಳನ್ನು ಚಾಲನೆ ಮಾಡಬಾರದು ಬೇರೆಯವರ ಮೋಟಾರ್ ಸೈಕಲ್ ಗಳನ್ನು ತೆಗೆದುಕೊಂಡು ಚಾಲನೆ ಮಾಡುವುದು ಅಪರಾಧ, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವಂತಿಲ್ಲ, ಮದ್ಯಪಾನ ಮಾಡಿ ಚಲಾಯಿಸುವುದು ನಿಷೇಧ, 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು ನಿಷೇಧ, ಹಾಗೂ ದ್ವಿಚಕ್ರ ವಾಹನ ವಿಮೆ ಇಲ್ಲದೆ ಚಾಲನೆ ಮಾಡಿದರೆ 2000/ದಂಡ ಮೂರು ತಿಂಗಳು ಜೈಲು ಶಿಕ್ಷೆ ಅನ್ವಯಿಸುತ್ತದೆ. ಕಲಂ 112, 113, ಕಲಂ, 129 ಹೆಲ್ಮೆಟ್ ಇಲ್ಲದೆ, ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ನಿಷೇಧಿಸುತ್ತವೆ ಎಂದು ಮಕ್ಕಳಿಗೆ ತಿಳಿಸಿದರು.
ಮುರಾರ್ಜಿ ದೇಸಾಯಿ ವಸತಿ ನಿಲಯದ ಪ್ರಾಂಶುಪಾಲರು ಶ್ರೀ ಅರುಣ್ ಭಂದ್ರಕಾಳಿ ಸರ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ, ಮಾನಸ - ಸಿಕ್ರಂ ಸಂಸ್ಥೆಯೊಂದಿಗೆ ಸಂವಿಧಾನ ದಿನಾಚರಣೆಯನ್ನು ಆಚರಿಸಲು ನಮಗೆ ಇಂದು ವಿಶೇಷವೆನಿಸುತ್ತಿದೆ . MANASA- SICHREM. South Indian Cell for Human Rights Education and Monitoring. ಈ ಸಂಸ್ಥೆಯು ಜವಾಬ್ದಾರಿಯುತವಾದ, ಉತ್ತಮ ಸಮಾಜವನ್ನು ನಿರ್ಮಾಣ ಮಾಡವ ಉದ್ದೇಶದಿಂದ ಹಕ್ಕುಗಳನ್ನು ರಕ್ಷಣೆ ಮಾಡಲು ಸಮಾಜದಲ್ಲಿರುವ ಜನರನ್ನ ಜಾಗೃತರನ್ನಾಗಿ , ಸಬಲರನ್ನಾಗಿ ಮಾಡಲು ಇಂದಿನ ಸಮಾಜದಲ್ಲಿ ಇಂತಹ ಸಂಸ್ಥೆಗಳು ಅತಿ ಅವಶ್ಯಕವಾಗಿವೆ. ಶಾಸನಬದ್ಧ ಸಂಸ್ಥೆ, ಮಾನವ ಹಕ್ಕುಗಳ ಸಮುದಾಯಗಳು ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿವೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಹಕ್ಕುಗಳ ಮೂಲಕ ಕಾನೂನಿನ ಮೂಲಕ ನ್ಯಾಯ ಮತ್ತು ರಕ್ಷಣೆಯನ್ನು ಒದಗಿಸುವ ಮುಖ್ಯ ಗುರಿಯನ್ನು ಹೊಂದಿದ್ದು, ಉತ್ತಮ ಆಡಳಿತಕ್ಕಾಗಿ , ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಸ್ಥೆಯ ಮೂಲಕ ಮಾನವ ಹಕ್ಕುಗಳ ಕೇಂದ್ರವು ಶ್ರಮ ಪಡುತ್ತಿದೆ. ನಮ್ಮ ಸಂವಿಧಾನದಲ್ಲಿರುವಂತಹ ಆದರ್ಶಗಳನ್ನು ,ಉನ್ನತವಾದ ಮೌಲ್ಯಗಳನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಂವಿಧಾನದ ಉನ್ನತ ಮೌಲ್ಯಗಳನ್ನು ಅನುಸರಿಸುತ್ತಾ, ಪಾಲನೆ ಮಾಡುತ್ತಾ ,ಬದುಕಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಫರಿದಾ ದೇಸಾಯಿ ಇವರು ಕೂಡ ಕಾರ್ಯಕ್ರಮ ಉದ್ದೇಶಿಸಿ ಮೂಲಭೂತ ಹಕ್ಕುಗಳು ಭಾರತ ಸಂವಿಧಾನದ ಭಾಗ-3 ರಲ್ಲೂ ವಿವರಿಸಲಾಗಿದೆ ಸಂವಿಧಾನದ ಹಕ್ಕುಗಳು ವ್ಯಕ್ತಿಗಳ ಬೌದ್ಧಿಕ ನೈತಿಕ ಆಧ್ಯಾತ್ಮಿಕ ಬೆಳವಣಿಗೆ ಅತಿ ಅಗತ್ಯವಾದ ಹಕ್ಕುಗಳಾಗಿವೆ. ಕಾನೂನಿನ ಮುಂದೆ ಸಮಾನತೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ,ಹಾಗೂ ಶೋಷಣೆ ವಿರುದ್ಧ ಹಕ್ಕು ಅಂದರೆ ಮಾನವನ ಕಳಸಾಗಾಣಿಕೆ ನಿಷೇಧಿಸುತ್ತದೆ , ಸಮಾಜದಲ್ಲಿ ಪ್ರತಿಯೊಬ್ಬರು ನಾಗರಿಕರು ಅವರು ಬಯಸಿದ ಧರ್ಮವನ್ನು ಸ್ವೀಕರಿಸಲು ಬಹುದು . ನಾಗರಿಕರ ಹಕ್ಕುಗಳು ಉಲ್ಲಂಘನೆ ಆದರೆ ಅವರಿಗೆ ಪರಿಹಾರವನ್ನು ಸಂವಿಧಾನವು ಖಾತ್ರಿಪಡಿಸುತ್ತದೆ ಎಂದು ಹೇಳುತ್ತಾ ಮಾತನಾಡಿದರು.
ನಿರ್ಮಲ ದೊಡ್ಡಮನಿ.ಅವರು ಸಂವಿಧಾನದ ಭಾಗ 4 ರಲ್ಲಿ ಮೂಲಭೂತ ಕರ್ತವ್ಯಗಳನ್ನು ಕುರಿತು ಭಾರತ ಸಂವಿಧಾನಕ್ಕೆ ಎಲ್ಲರು ಬದ್ಧರಾಗಿ ಸಂವಿಧಾನದ ಆದರ್ಶಗಳು ಹಾಗೂ ರಾಷ್ಟ್ರ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವವನ್ನು ಕೊಡಬೇಕು ಸಂವಿಧಾನದ ಆದರ್ಶಗಳನ್ನು ಅನುಸರಿಸಬೇಕು ದೇಶ ಸೇವೆಯನ್ನು ಮಾಡಿ ರಕ್ಷಿಸಲು ಮುಂದಾಗಬೇಕು. ಭಾರತದ ಎಲ್ಲರೂ ಸಾಮರಸ್ಯ , ಸಹೋದರ ಭಾವನೆ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳು ಪರಿಸರವನ್ನು ರಕ್ಷಿಸಿ, ಎಲ್ಲ ಜೀವಿಗಳ ಬಗ್ಗೆ ಸಹನುಭೂತಿಯನ್ನು ಹೊಂದುವಂತರಾಗಬೇಕು ಎಂದು ಹೇಳುತಾ , ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾನಸ- ಸಿಕ್ರಮ ಸಂಸ್ಥೆ ವತಿಯಿಂದ ವಂದನೆಗಳನ್ನು ಸಲ್ಲಿಸುತ್ತಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ