2nd December 2024

7ನೇ ವೇತನ ಆಯೋಗದ ಅನುಷ್ಠಾನದಲ್ಲಿ ದಿನಾಂಕ 01.07.2022 ರಿಂದ 31.07.2024 ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ/ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ಸರ್ಕಾರ ನಮಗೆ ನೀಡದೆ ಇರುವುದನ್ನು ಖಂಡಿಸಿ ನಿವೃತ್ತರಾಗಿರುವ ನಾವು ಹೋರಾಟವನ್ನು ಹಮ್ಮಿಕೊಂಡಿರುತ್ತೇವೆ
ಸರ್ಕಾರವು ತನ್ನ ನೌಕರರಿಗೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದಿನಾಂಕ 01.07.2022 ರಿಂದ 31.07.2024ರವರೆಗೆ 25 ತಿಂಗಳ ಅವಧಿಯಲ್ಲಿ ನಿವೃತ್ತರಾಗಿರುವ ರಾಜ್ಯದ ಸಮಸ್ತ ಅಧಿಕಾರಿ/ನೌಕರರು (26,643) ತಾವುಗಳು ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತಿ ನೌಕರರಿಗೆ ಸರ್ಕಾರವು ಪರಿಷ್ಕೃತ ವೇತನವನ್ನು ಅನುಷ್ಠಾನಕ್ಕೆ ತಂದಿರುತ್ತೀರಿ ಇದಕ್ಕಾಗಿ ತಮಗೆ ನಮ್ಮೆಲ್ಲರ ಹೃದಯಪೂರ್ವಕ ಅಭಿನಂದನೆಗಳು.
“ಮೇಲಿನ ಉಲ್ಲೇಖದ ಸರ್ಕಾರದ ಆದೇಶದ ಖಂಡಿಕೆ (9)ರಲ್ಲಿ ಈ ಕೆಳಗಿನಂತೆ ವಿವರಿಸಲಾಗಿರುತ್ತದೆ."
ಮುಂದುವರೆದು, ಈ ಮೇಲಿನಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ, ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು ದಿನಾಂಕ 01.08.2024 ರಿಂದ ನಗದಾಗಿ ವಾವತಿ ಮಾಡತಕ್ಕದ್ದು, ದಿನಾಂಕ: 01.07.2022 ರಿಂದ 31.07.2024ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ನುರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ "ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು. ಆದರೆ ಸದರಿ ಕಾಲ್ಪನಿಕ ಪುನರ್ ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ನೌಕರನಿಗೆ ಅಥವಾ ಮರಣ ಹೊಂದಿದ ನೌಕರನ ಪಲಾನುಭವಿಗೆ ಸಂದರ್ಭಾನುಸಾರ ದಿನಾಂಕ: 01.08.2024 ರಿಂದ ಪ್ರಾಪ್ತವಾಗತಕ್ಕದ್ದು".ಈ ಆದೇಶದನ್ವಯ ದಿನಾಂಕ: 01-07-2012 ರಿಂದ 30 ವರಾರವರೆಗೆ 12 ತಿಂಗಳ ವಧಿಯಲ್ಲಿ ನಿಮ್ಮತ್ರರಾದ/ನಿಧನ ಹೊಂದಿದ ಅಧಿಕಾರಿ/ನೌಕರರಿಗೆ TION() పోతన పంటలై వన సంధా మాదిదలేశయ ఉన్న వస ಕಣಿಯ ಮೇಲೆಯೇ ಪರಿಗಣಿಸುತ್ತಿದ್ದ ದಿನವೇ ವ 2022 ರಿಂದ ಅತೀವವಾತವಾಗಿರುತ್ತದೆ. ನಮದಲದ ಪರಿಷ ತ ವೇತನದಲ್ಲಿ, ನಿನ್ನನ್ನ సౌలభున లభ్యవాగున్నాడు, లాగ శతగినం ನಿರ್ವಹಿಸುತ್ತಿರುವವರಂತೆ సౌలభ్యగళన్ను ನಾವುಗಳೂ ಸಹ 7ನೇ ವೇತನ ಪಡೆಯುವ ಅರ್ಹತೆ ಹೊಂದಿದ್ದೇವೆ.
ಮುಂದುವರೆದು ತಮ್ಮಲ್ಲಿ ತಿಳಿಸಲು ಇಚ್ಛಿಸುವುದೇನೆಂದರೆ, ಪ್ರಸ್ತುತ ಸೇವೆಯಲ್ಲಿ ಇರುವ ಇತರ ಅಧಿಕಾರಿ/ನೌಕರರದಪ ಕೂಡ ದಿನಾಂಕ : 01-07-2022 ರಿಂದಲೇ ಪಡೆಯ ಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸ ಬಾಕಿಯನ್ನು HArears) ಕೇಳುತ್ತಿರುವುದಿಲ್ಲ. ನಾವು ಕೇಳುತ್ತಿರುವುದು 7ನೇ ವೇತನ ಅಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ DORG, COMMUTATION (OPTION) ELENCASHMENT,, ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸವನ್ನು ಮಾತ್ರ ಈ ದಿಶೆಯಲ್ಲಿ ಏಳನೇ ವೇತನ ಆಯೋಗದಲ್ಲಿ ಆರ್ಥಿಕ ನಷ್ಯಕ, ಒಳಗಾಗಿರುವ ಈ ರಾಜ್ಯದ 26,643 ನಿವೃತ್ತ ಅಧಿಕಾರಿ ನೌಕರರುಗಳು, ಎಳನೇ DCRG, COMMUTATION (OPTION) EL, ENCASHMENT ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿ ಆಗಸ್ಟ್ 11ರಿಂದ ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಎಲ್ಲಾ ಕ್ಷೇತ್ರಗಳ ಶಾಸಕರು, ಜಿಲ್ಲಾಧಿಕಾರಿಗಳವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದ್ದೇವೆ.
ದಿನಾಂಕ 18 ಸೆಪ್ಟೆಂಬರ್ 2024 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಸುಮಾರು 12 ಸಾವಿರ ನಿವೃತ್ತ ನೌಕರರ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಏರ್ಪಡಿಸುವ ಮೂಲಕ ವಿಶಾಂತ ನ್ಯಾಯಮೂರ್ತಿಗಳಾದ ಶ್ರೀ ಸಂತೋಷ್ ಹೆಗಡೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ ಎಲ್ ಭೈರಪ್ಪ ಇವರುಗಳ ಸಮ್ಮುಖದಲ್ಲಿ ನಮಗೆ ಆಗಿರುವ ಅನ್ಯಾಯದ ಕುರಿತು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ 'ಉಪಮುಖ್ಯಮಂತ್ರಿಗಳಿಗೆ ಉಭಯ ಸಂಘಟನೆಗಳ ರಾಜ್ಯಾಧ್ಯಕ್ಷರುಗಳಿಗೆ ಒಕ್ಕೂರಲಿನ ಹಕ್ಕೋತ್ತಾಯ ಭಿನ್ನವತ್ತಳೆ ಸಮರ್ಪಿಸಿ ಐತಿಹಾಸಿಕ ದಾಖಲೆಯನ್ನು ಮಾಡಿದ್ದೇವೆ.
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಇಲ್ಲಿಯವರೆಗೆ 12ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ನಮ್ಮ ಆರ್ಥಿಕ ನಷ್ಟವನ್ನು ಸರಿಪಡಿಸಿಕೊಳ್ಳಲು ಕೇಳಿಕೊಂಡರೂ ಸಹ ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ ಇರುವುದನ್ನು ಮನಗಂಡು ನಮ್ಮೊಡನೆ ಸರ್ಕಾರದ ಅಧಿಕಾರಿಗಳ ಜೊತೆ ಒಂದು ಸಭೆಯನ್ನು ಏರ್ಪಡಿಸುವಂತೆ ವಿನಂತಿ ಮಾಡಿದರು ಸಹ ಯಾವುದೇ ಉತ್ತರವನ್ನು ನೀಡದೆ ಇರುವುದು ಈ ರಾಜ್ಯದ ನಿವೃತ್ತ ನೌಕರರ ಮನಸ್ಸಿಗೆ ತುಂಬಲಾರದ ನೋವು ಉಂಟಾಗಿದ್ದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ನಮ್ಮ ಆರ್ಥಿಕ ನಷ್ಟ ಕುರಿತಂತೆ ಚರ್ಚಿಸಿ ಅನುಕೂಲಕಲ್ಪಿಸಬೇಕಾಗಿರುವುದರಿಂದ ನಮಗೆ ಸರ್ಕಾರ ನಾವು ಕೆಲಸ ಮಾಡಿದ್ದಕ್ಕೆ ಕೊಡಬೇಕಾಗಿರುವ ಕೂಲಿ ಕೇಳುತ್ತಿರುವುದಾಗಿ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಉದ್ದೇಶದಿಂದ ಆರ್ಥಿಕ ನಷ್ಟಕ್ಕೆ ಒಳಗಾದ ಎಲ್ಲ ನಿವೃತ್ತ ನೌಕರರುಗಳು ( 26,643 ) ಚಳಿಗಾಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಂದು ದಿನದ ಪ್ರತಿಭಟನ ದಿನಾಚರಣೆಯನ್ನು ಆಚರಿಸುವ ಮೂಲಕ ಸರ್ಕಾರಕ್ಕೆ ಗಮನ ಸೆಳೆಯಲು ಕಾರ್ಯಕ್ರಮ ಆಯೋಜಿಸಲಾಗಿದೆ ಹಾಗೆಯೇ ಮುಂದುವರೆದು ನಮ್ಮ ಆರ್ಥಿಕ ನಷ್ಟ ಉಂಟಾಗಿರುವುದು ಸತ್ಯಕ್ಕೆ ಹತ್ತಿರವಾಗಿದೆ ಎಂಬುದನ್ನು ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೂ ಪರಿಚಯಿಸುವ ಮೂಲಕ, ರಾಜ್ಯದ ಎಲ್ಲಾ ಈ ಅವಧಿಯ ನಿವೃತ್ತ ನೌಕರರುಗಳಿಗೆ ಜಾಗೃತಿ ಮಾಡುವ ನಿಟ್ಟಿನಲ್ಲಿ ಬೆಳಗಾವಿಯ ಸುವರ್ಣಸೌಧದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಜಾಗೃತಿ ರಥಯಾತ್ರೆಯನ್ನು ಆರಂಭಿಸಿ ಬೆಂಗಳೂರಿನ ಮಾನ್ಯ ಮುಖ್ಯಮಂತ್ರಿಗಳವರ ಗೃಹ ಕಚೇರಿ ಕೃಷ್ಣದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮನವಿ ಸಲ್ಲಿಸಿ ಮಾನವೀಯತೆಯ ನಿಟ್ಟಿನಲ್ಲಿ ನಮ್ಮ ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗುತ್ತೇವೆಂದು ನಾವಾದರೂ ಭಾವಿಸಿದ್ದೇವೆ.ನಮಗೆ ಏಳನೇ ವೇತನ ಆಯೋಗದಲ್ಲಿ ಆರ್ಥಿಕ ನಷ್ಟ ಉಂಟಾಗಿ ಅನ್ಯಾಯಕ್ಕೆ ಒಳಗಾಗಿರುವ ನಾವುಗಳು ” ಸಹ ರಾಜ್ಯದ ಕಾರ್ಯಂಗದಲ್ಲಿ ಸರಿ ಸುಮಾರು 30 ರಿಂದ 40 ವರ್ಷ ಸೇವೆ ಸಲ್ಲಿಸಿದ ನಮ್ಮನ್ನು ಸರ್ಕಾರ ಮುಖ್ಯಮಂತ್ರಿಗಳವರು ಈಗಲಾದರೂ ಪರಿಗಣಿಸದೆ ಹೋದಲ್ಲಿ ಈಗ ಶಾಂತಿತವಾಗಿ ಮಾಡುತ್ತಿರುವ ಹೋರಾಟ ಮುಂದೆ ಕ್ರಾಂತಿಯುತ ಹೋರಾಟಕ್ಕೆ ನಾಂದಿಯಾಗಬಹುದು ಆ ಸಂದರ್ಭದಲ್ಲಿ ಯಾವುದೇ ನಿವೃತ್ತ ನೌಕರರಿಗೆ, ಸಾರ್ವಜನಿಕ ಆಸ್ತಿಪಾಸ್ತಿಗೆ, ನಷ್ಟ ಉಂಟಾದಲ್ಲಿ ಈ ರಾಜ್ಯ ಸರ್ಕಾರವೇ ನೇರವಾಗಿ ಹೊಣೆಯಾಗುತ್ತದೆ ಎಂಬುದನ್ನು ಸಹ ಪತ್ರಿಕಾಗೋಷ್ಠಿ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆಯನ್ನು ನಮ್ಮ ನಿವೃತ್ತ ನೌಕರರ ವೇದಿಕೆ ಪರವಾಗಿ ರಾಜ್ಯ ಪ್ರಧಾನ ಸಂಚಾಲಕನಾದ ನಾನು ತಮ್ಮ ಮಾಧ್ಯಮದ ಮೂಲಕ ನೀಡುತ್ತಿದ್ದೇನೆ.
ನನ್ನೊಂದಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ವಿಭಾಗದ ಪ್ರಧಾನ ಸಂಚಾಲಕರಾದ ರಾಜ್ಯ ಸಂಸ್ಥಾಪಕ ಸಂಚಾಲಕರುಗಳಾದ ಅಶೋಕ್ ಸಜ್ಜನ್, ಶೇಖರಪ್ಪ ಬಿಸಿ ರೊಟ್ಟಿ, ವಿಜಯ್ ಅಣಜಿ, ಧಾರವಾಡ ಜಿಲ್ಲೆಯ ಎಸ್ ಪಿ ಪಾಟೀಲ್, ಬೆಳಗಾವಿ ಜಿಲ್ಲಾ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ.ಸಿದ್ಮಾಳ್, ಬೆಳಗಾವಿ ಜಿಲ್ಲಾ ಪ್ರಧಾನ ಸಂಚಾಲಕ ಹಾಗೂ ಮುಖ್ಯ ಸಂಚಾಲಕರು, ಹಾಗೂ ಕಿತ್ತೂರು ಖಾನಾಪುರ ಬೆಳಗಾವಿ ಸೌದತ್ತಿ ರಾಮದುರ್ಗ, ಚಿಕ್ಕೋಡಿ, ನಿಪ್ಪಾಣಿ, ರಾಯಭಾಗ ಅಥಣಿ, ಗೋಕಾಕ, ತಾಲೂಕುಗಳ ಪ್ರಧಾನ ಹಾಗೂ ಮುಖ್ಯ ಸಂಚಾಲಕರುಗಳು ಉಪಸ್ಥಿತರಿರುವರು.
ಧನ್ಯವಾದಗಳು,
ಎಂ.ಪಿಎಂ. ಷಣ್ಮುಖ (ಪ್ರಧಾನ ಸಂಚಾಲಕರು ) ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆ 9449100521

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ