25th December 2024

ಮಾಜಿ ಪ್ರಧಾನಿ ಭಾರತ ರತ್ನ
ಅಟಲ್ ಜೀ .೧೦೦ ನೇ ಹುಟ್ಟುಹಬ್ಬ
ಪ್ರತಿ ಬೂತ್ ಮಟ್ಟದಲ್ಲಿ ಸಂಭ್ರಮಿಸಿ
ಬಿಜೆಪಿ ಮಂಡಳ ಅಧ್ಯಕ್ಷ ಗೌಡಪ್ಪಗೋಳ ಕರೆ.
ಅಂಕಲಗಿ, ೨೪ , ಇದೇ ಬುಧವಾರ ದಿನಾಂಕ 25-12-2024 ರಂದು ಭಾರತರತ್ನ ಹಾಗೂ ಮಾಜಿ ಪ್ರಧಾನಿಗಳಾದ ದಿ. ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 100 ನೇ ವರ್ಷದ ಜನ್ಮದಿನ ಅಂಗವಾಗಿ ಸುಶಾಸನ ದಿನ ಅಭಿಯಾನವನ್ನು ಬಿಜೆಪಿಯು ದೇಶಾದ್ಯಂತ ಆಚರಿಸುತ್ತಿದ್ದು ಅಂದು ಬೂತ್ ಮಟ್ಟದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸಿ ಜನ್ಮದಿನಾಚರಣೆ ಆಚರಿಸಬೇಕು ಎಂದು ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಜೀವನ ಚರಿತ್ರೆ ಕುರಿತು ಹಾಗೂ ಪ್ರಧಾನಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ಸಂಘಟನೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಕುರಿತು ಭಾಷಣ ಬೂತ್ ಮಟ್ಟದ ಕಾರ್ಯಕರ್ತರೆ ಮಾಡಬೇಕು ನಂತರ ಅಟಲ್ ಜೀಯವರು ರಚಿಸಿದ 2 ಕವಿತೆಗಳನ್ನು ಮತ್ತೊಬ್ಬ ಬೂತ್ ಮಟ್ಟದ ಕಾರ್ಯಕರ್ತರು ಹೇಳಬೇಕು. ನಂತರ ಅಲ್ಲಿ ಇದ್ದ ಮುಖಂಡರು ವಾಜಪೇಯಿಯವರ ಬಗ್ಗೆ ಮಾತನಾಡಬೇಕು. ನಂತರ ಈ ಕಾರ್ಯಕ್ರಮದ ಫೊಟೋಗಳನ್ನು ಸರಳ ಆ್ಯಪ್ ನಲ್ಲಿ ಹಾಕಬೇಕು ಬಿಜೆಪಿ ವಾಟ್ಸಪ್ ಗ್ರೂಪ್ ಗಳಿಗೂ ಹಂಚಿಕೊಳ್ಳಬೇಕು.ಪ್ರತಿಯೊಂದು ಬೂತ್ ಮಟ್ಟದಲ್ಲಿ ಈ ಕಾರ್ಯಕ್ರಮ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕೆಂದು ಗೋಕಾಕ ಬಿಜೆಪಿ ಮಂಡಳ ಅಧ್ಯಕ್ಷರಾದ ಸಮೀಪದ ಮಲ್ಲಾಪುರ ಎಸ್ ಎ ಗ್ರಾಮದ ರಾಜೇಂದ್ರ ಗೌಡಪ್ಪಗೋಳ ತಿಳಿಸಿದ್ದಾರೆ.
ವರದಿ, ಸುರೇಶ ಉರಬಿನಟ್ಟಿ

ನನ್ನ ಸೋಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಾರಣ.!! ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೊಮ್ಮೆ ಬಹಿರಂಗ- ಕಾಂಗ್ರೆಸ್ ಸೋಲಿಸಲು ನನಗೆ ಎರಡು ಸೆಕೆಂಡ್ ಸಾಕು..!

ಕಾಂಗ್ರೆಸ್ ಕಚೇರಿ ಮೇಲೆ ದಾಂದಲೆ: ಬಿಜೆಪಿ ವಿರುದ್ಧ ದೂರು- ಎಂಎಲ್ಸಿ ಹೇಮಲತಾ ನಾಯಕ ಸೇರಿ ೧೬ ಜನರ ಮೇಲೆ ಎಫ್ಐಆರ್

ರಾಜಕೀಯ ಜೀವನದ 25 ನೇ ವರ್ಷದಲ್ಲಿ ಬಿಜೆಪಿಯ ಶಿಸ್ತಿನ ಸಿಪಾಯಿ ವೀರಭದ್ರಯ್ಯ ಬಾಬು ಪೂಜಾರ*