6th January 2025

ಡಾ ಸುರೇಶ ನೆಗಳಗುಳಿಯವರಿಗೆ ಕಲ್ಲಚ್ಚು ಪ್ರಕಾಶನ ವತಿಯಿಂದ ಗೌರವ ಸನ್ಮಾನ
ಮಂಗಳೂರು ಜ
ಮಂಗಳೂರಿನ ಪ್ರತಿಷ್ಠಿತ ಕಲ್ಲಚ್ಚು ಪ್ರಕಾಶನವು ತನ್ನ ಸಂಸ್ಥೆಯ ಇಪ್ಪತ್ತೈದನೇ ವರ್ಷಕ್ಕೆ ಪದಾರ್ಪಣ ಮಾಡುವ ಸವಿನೆನಪಿಗಾಗಿ ಸ್ಥಳೀಯ ಓಷನ್ ಪರ್ಲ್ ಸಭಾಂಗಣದಲ್ಲಿ ರಜತ ರಂಗು ಎನ್ನುವ ಅದ್ದೂರಿಯ ಸಮಾರಂಭವನ್ನು ಏರ್ಪಡಿಸಿತ್ತು.
ಸಾಹಿತ್ಯ,ಸಂಸ್ಕೃತಿ ಕಲೆ ಸಂಘಟನೆಗಳ ನೆಲೆಯಲ್ಲಿ ಮಹೇಶ್ ನಾಯಕ್ ರವರು ಬಹಳಷ್ಟು ಪ್ರಕಟಣೆಗಳಿಗೆ ಹೆಸರಾಗಿದ್ದು ರಜತ ರಂಗು ಎಂಬ ಬೆಳ್ಳಿ ಹಬ್ಬದ ಆಚರಣೆಯನ್ನು ಕೇಂದ್ರ ಸಾಹಿತ್ಯ ಪರಿಷತ್ತಿನ ನಿವೃತ್ತ ಉಪಕಾರ್ಯದರ್ಶಿ ಡಾ ಮಹಾಲಿಂಗೇಶ್ವರ ಎಸ್ ಪಿಯವರು ಉದ್ಘಾಟಿಸಿದರು.
ಇದೇ ವೇಳೆ ಪ್ರಕಾಶಕರ ಅನುಗೂಡೂನು ಬಾ ಎಂಬ ಕಥೆ ಕವನ ಸಹಿತವಾದ ವಿಶಿಷ್ಟ ಸಂಕಲನವನ್ನು ಸಾಹಿತಿ ಡಾ ಪ್ರಭಾಕರ ನೀರುಮಾರ್ಗ ಬಿಡುಗಡೆ ಗೊಳಿಸಿದರು.ಡಾ ಪೂರ್ಣಾನಂದ ಬಳ್ಕೂರರು ಕೃತಿ ಪರಿಚಯ ಮಾಡಿದರು. ಉದ್ಯಮಿ ಜಯಂತ ನಾಯಕ್ ಪೃಥ್ವೀರಾಜ ನಾಯಕ್ ಡಾ ಸ್ಮಿತಾ ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಕ.ಸಾ.ಪ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಡಾ || ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಸಾಹಿತ್ಯ ಮತ್ತಿತರ ಪೂರಕ ಸಾಧಕರನ್ಮು ಸನ್ಮಾನಿಸಲಾಯಿತು.
ಇದಲ್ಲದೆ ಕಲ್ಕಚ್ಚು ಪ್ರಕಾಶನದಿಂದ ಹೊರತರಲಾದ ಕೃತಿಕಾರರಾದ ಮಂಗಳೂರಿನ ಕಣಚೂರು ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ,ಮಂಗಳಾ ಆಸ್ಪತ್ರೆಯ ಕ್ಷಾರ ಚಿಕಿತ್ಸಾ ತಜ಼್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಸಹಿತವಾಗಿ ಹಲವರನ್ನು
ರಜತ ರಂಗಿನ ತಟ್ಟೆ ,ಶಾಲು,ಸಹಿತವಾಗಿ ಸನ್ಮಾನಿಸಲಾಯಿತು
ಇದೇ ವೇಳೆ ಪುತ್ತೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಚ ಉಮೇಶ್ ನಾಯಕ್ ರವರು ಮಹೇಶ ನಾಯಕರನ್ನುಅಭಿಮಾನ ಪೂರ್ವಕವಾಗಿ ಪೇಟ ಶಾಲು ಸಹಿತ ಸನ್ಮಾನಿಸಿದರು
ಕಲ್ಕಚ್ವು ಮಹೇಶ್ ಸ್ವಾಗತಿಸಿದ ಈ ಸಮಾರಂಭದ ನಿರ್ವಹಣೆ ಹಾಗೂ ಧನ್ಯವಾದವನ್ನು ಚು.ಸಾ.ಪ ಮಾಜಿ ಅಧ್ಯಕ್ಷ ಶ್ರೀ ಸುಬ್ರಾಯ ಭಟ್ಟರು ನಿರ್ವಹಿಸಿದ್ದರು.
@ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು 575009
9448216674

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ