8th January 2025

ಆರ್ಥಿಕ ಬಲವರ್ಧನೆಯಲ್ಲಿ ದಿ ಗೋಕಾಕ ಅರ್ಬನ್ ಕೋ ಆಪ್ ಬ್ಯಾಂಕ ನ ಸಾಧನೆ ಅದ್ವಿತೀಯ
- ಗದುಗಿನ ತೊಂಟದಾರ್ಯ ಮಠದ ಜಗದ್ಗುರು ಡಾ ಸಿದ್ಧರಾಮ ಮಹಾಸ್ವಾಮಿಗಳ ಹೇಳಿಕೆ..
ಅಂಕಲಗಿ. ೦೮- ಸಾಮಾಜಿಕ, ಕೃಷಿಕ, ಔದ್ಯೋಗಿಕ ಕ್ಷೇತ್ರಗಳ ಬಲವರ್ಧನೆಯಲ್ಲಿ ದಿ ಗೋಕಾಕ ಅರ್ಬನ್ ಕೋ ಅಪ್ ಬ್ಯಾಂಕ ಸಾಧನೆ ಆದ್ವಿತೀಯವಾಗಿದೆ. ಎಂದು ಗದುಗಿನ ತೊಂಟದಾರ್ಯ ಮಠದ ಜಗದ್ಗುರು ಡಾ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು. ಅವರು ಮಂಗಳವಾರ ಬೆಳಗಾವಿಯ ಶಹಾಪುರದಲ್ಲಿ ನೂತನವಾಗಿ ಸ್ಥಾಪಿತ ಸಂಸ್ಥೆಯ ೯ನೇ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ, ಬ್ಯಾಂಕ ಉದ್ಘಾಟಿಸಿ ಮಾತನಾಡಿದರು. ಉತ್ಕ್ರುಷ್ಟ ಸೇವೆಯಿಂದಾಗಿ ಗೋಕಾಕ ನಲ್ಲಿ ಅತ್ಯುತ್ತಮ ಕೋ ಆಪ್ ಬ್ಯಾಂಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ ಎಲ್ಲ ಗ್ರಾಹಕರು ಆರ್ಥಿಕ ಸಬಲತೆ ಹೊಂದಬೇಕು. ಬ್ಯಾಂಕಗಳ ಅಭಿವ್ರದ್ಧಿಯಾದರೆ ಆ ದೇಶ ಅಭಿವ್ರದ್ಧಿ ಸಾಧ್ಯ. ಎಲ್ಲರ ಪ್ರಾಮಾಣಿಕತೆಯಿಂದ ಮಾತ್ರ ಸಂಸ್ಥೆ ಹೆಮ್ಮರಗೊಳ್ಳಲು ಸಾಧ್ಯ. ಜಯಾನಂದ ಮುನವಳ್ಳಿ ನೇತೃತ್ವದ ಈ ಬ್ಯಾಂಕು ಎಲ್ಲ ನಿರ್ದೇಶಕರ ನಿರಂತರ ಶ್ರಮದಿಂದ ಎಲ್ಲರ ವಿಶ್ವಾಸ ಗಳಿಸಲು ಸಾಧ್ಯವಾಗಿದೆ... ಈ ಸಂಸ್ಥೆಯ ಎತ್ತರ ಗಳಿಸಲು ಹೆಗಲು ಕೊಡಿ ಎಂದು ಸಲಹೆ ನೀಡಿದರಲ್ಲದೆ, ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿ ಪದಾಧಿಕಾರಿಗಳಿಗೆ ಆಶೀರ್ವದಿಸಿದರು. ಸಂಸ್ಥೆಯ ಪರ ಜಗದ್ಗುರು ಡಾ ಸಿದ್ಧರಾಮ ಮಹಾಸ್ವಾಮಿಗಳನ್ನು ಜಯಾನಂದ ಮುನವಳ್ಳಿ, ಬಸವರಾಜ ಅರಬಳ್ಳಿ, ಬಸವರಾಜ ಕಲ್ಯಾಣಶೆಟ್ಟಿ, ಸುಧೀರ ಅಂಕಲಿ ಮತ್ತು ಎಲ್ಲ ಸದಸ್ಯರು ಸಿಬ್ಬಂದಿ ಡಾ ಸಿದ್ಧರಾಮ ಮಹಾಸ್ವಾಮಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ
ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ವ್ಯವಸ್ಥಾಪಕ ಶಿವನಗೌಡಾ ಪಾಟೀಲ, ವೀರಣ್ಣಾ ಬಿದರಿ, ದುಂಡಪ್ಪಾ ಬಿದರಿ, ಮಹಾಂತೇಶ ಕಲ್ಲೋಳಿ, ರಾಜಶೇಖರ ತಾರಳಿ , ಮಲ್ಲಿಕಾರ್ಜುನ ಚುನಮರಿ, ಶೋಭಾ ಕುರಬೇಟ, ಶಾಂತಾದೇವಿ ಕುರಬೇಟ, ಅಶೋಕ ಹೆಗ್ಗನ್ನವರ, ಪ್ರಕಾಶ ಮಡ್ಡೆಪ್ಪಗೋಳ, ಪ್ರಸಾದ ಸೊಲ್ಲಾಪೂರಮಠ, ಶ್ರೀಕಾಂತ ಪಟ್ಟಣಶೆಟ್ಟಿ, ವ್ಯವಸ್ಥಾಪನ ಸಮಿತಿ ಚಂದ್ರಶೇಖರ ಕಡೆವಾದಿ, ಬಸವಣ್ಣಿ ಮಾಳಿ , ಸೋಮಶೇಖರ ಮಗದುಮ್, ಸಲಹಾ ಸಮಿತಿ ಸದಸ್ಯರಾದ ಬಸವರಾಜ ಅರಬಳ್ಳಿ, ಆನಂದ ಚಹ್ವಾಣ, ನಾಗರಾಜ ವೇರ್ನೇಕರ, ಶಂಕರ ಚೊಣ್ಣದ, ಉದಯ ಜೋಶಿ, ಲಕ್ಷ್ಮಣ ಸೊಂಟಕ್ಕಿ, ನವೀನ್ ಮೆಟಗುಡ್, ವ್ಯಾವಸ್ಥಾಪಕ ಪ್ರಸಾದ ದೊಡಮನಿ ಸೇರಿದಂತೆ ಸಹಕಾರಿ ಧುರೀಣರು, ಸಿಬ್ಬಂದಿ, ಗ್ರಾಹಕರು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ