21st January 2025
೧೨ನೆಯ ಶತಮಾನದ ಬಸವಾದಿ ಶರಣರ ವಚನಗಳು ಮನುಷ್ಯರಿಗೆ ದಾರಿದೀಪಗಳಾಗಿವೆ. ವ್ಯಕ್ತಿಯ ಯಾವುದೇ ಸಮಸ್ಯೆಗಳಿಗೂ ವಚನಗಳಲ್ಲಿ ಪರಿಹಾರ ಸಿಗುತ್ತದೆ.ಟಿ ವಿ ಮೊಬೈಲಗಳಿಂದ ಮಕ್ಕಳಲ್ಲಿ ಮೌಲಿಕ ಶಿಕ್ಷಣ ಕಡಿಮೆ ಆಗತ್ತಿರುವ ಈ ಸಂದರ್ಭದಲ್ಲಿ ವಚನಗಳ ಅಧ್ಯಯನದಿಂದ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶ್ರೀ ಸಿ ಎಂ ಬೂದಿಹಾಳ ಅವರು ಹೇಳಿದರು.
ಅವರು ಜಾಗತಿಕ ಲಿಂಗಾಯತ ಮಹಾಸಭಾ ನಗರ ಘಟಕದಿಂದ ಬೆಳಗಾವಿ ರಾಮತೀರ್ಥ ನಗರದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳಗೆ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಿ ಮಾತನಾಡಿದರು.
ಪ್ರಾರಂಭದಲ್ಲಿ ಶ್ರೀ ಮೋಹನ ಗುಂಡ್ಲೂರ ವಚನ ಪ್ರಾರ್ಥನೆ ಮಾಡಿದರು. ಮುಖ್ಯ ಗುರುಮಾತೆ ಶ್ರೀಮತಿ ಎಸ್ ಆರ್ ಮೆಳವಂಕಿ ಸ್ವಾಗತಿಸಿದರು. ಶಿಕ್ಷಕ ಶ್ರೀ ಮಹಾಂತೇಶ ವಾಲಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಎಫ್ ಆರ್ ಪಾಟೀಲ ಮಕ್ಕಳ ವಚನ ಕಂಠಪಾಠ ಸ್ಪರ್ಧೆ ನಡೆಸಿದರು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀ ಜಗಜಂಪಿ, ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ ಖನಗಣ್ಣಿ ಶ್ರೀಮತಿ ಎಸ್ ಎಸ್ ಸತ್ತೀಗೇರಿ, ಶ್ರೀಮತಿ ಎಸ್ ಪಿ ಅಣ್ಣಿಗೇರಿ ಉಪಸ್ಥಿತರಿದ್ದರು.
ಭಗವಾನ ಮಹಾವೀರ ಜಯಂತಿ ಆಚರಣೆ ಕುರಿತು ತಹಶೀಲ್ದಾರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ
ಕುಷ್ಟಗಿಯ ಶ್ರೀ ರಾಮ ದೇವರ ದೇವಸ್ಥಾನದಲ್ಲಿ ಜರುಗಿದ ಶ್ರೀ ರಾಮನವಮಿ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿದ ಶ್ರೀ ರಾಮನವಮಿ ಉತ್ಸವ: ಭಕ್ತರಿಗೆ ಕೋಸಂಬರಿ, ಪಾನಕ ವಿತರಣೆ
ಗಡಿ ತಾಲೂಕು ಆಳಂದನಲ್ಲಿ ಡಿ.ಸಿ. ಸಂಚಾರ: ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರ ಸಮಸ್ಯೆ ಆಲಿಕೆ
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!