23rd January 2025

ಬೆಳಗಾವಿ.ಜಿಲ್ಲಾಧಿಕಾರಿಗಳು
ವಿಷಯ : ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ- ಧಾರವಾಡ ಕೈಗಾರಿಕ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಕುರಿತು
ಮಾನ್ಯರೇ,
ಕೆಲವು ದಿನಗಳ ಹಿಂದೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದಂತೆ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ - ಧಾರವಾಡ ಕೈಗಾರಿಕ ಪ್ರದೇಶಕ್ಕೆ ರೈತರ ಹೊಲಗಳಲ್ಲಿ ಪೈಪ್ ಲೈನ್ ಮುಖಾಂತರ ನೀರು ಸರಬರಾಜು ಮಾಡುವ ಕಾರ್ಯವು ಸದ್ದು ಗದ್ದಲವಿಲ್ಲದೆ ಪ್ರಾರಂಭವಾಗಿದೆ.
ಹಿಡಕಲ್ ಜಲಾಶಯವು ಬೆಳಗಾವಿ ನಗರದ ಕುಡಿಯುವ ನೀರು ಸರಬರಾಜು ಮಾಡುವ ಪ್ರಮುಖ ಕೇಂದ್ರಗಳಲ್ಲಿ ಒಂದು ಅದೇ ರೀತಿ ಹುಕ್ಕೇರಿ, ಗೋಕಾಕ್, ಹಾಗೂ ಬೆಳಗಾವಿ ತಾಲ್ಲೂಕಿನ ರೈತರ ಜೀವನಾಡಿಯು ಹೌದು.
ಇಂತಹ ಪ್ರಮುಖ ಜಲಾಶಯದಿಂದ ಕೈಗಾರಿಕಾ ಪ್ರದೇಶಕ್ಕೆ ನೀರು ಸರಬರಾಜು ಮಾಡಿದರೆ ಬೇಸಿಗೆ ಕಾಲದಲ್ಲಿ ಬೆಳಗಾವಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗಿ ನಗರದ ಜನತೆಗೆ ಹಾಗೂ ಕೆಲವು ತಾಲ್ಲೂಕುಗಳಲ್ಲಿನ ರೈತರಿಗೆ ತೊಂದರೆ ಉಂಟಾಗುತ್ತದೆ.
ಆದ ಕಾರಣ ಕೈಗಾರಿಕಾ ಪ್ರದೇಶಕ್ಕೆ ನೀರು ಕಳುಹಿಸುವ ಕೆಲಸವನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು.
ಬಿ
ಸೂರ್ಯಕಾಂತ ಭಾಂವಿ
ಅಧ್ಯಕ್ಷರು,

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ