26th January 2025

ಸಂವಿಧಾನ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ
ಬೆಳಗಾವಿ: ಅಹಿಂದ ನ್ಯಾಯವಾದಿಗಳ ಸಂಘ ಬೆಳಗಾವಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ದಿನದ ನಿಮಿತ್ಯ ಸಂವಿಧಾನ ಚರ್ಚೆ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳಾದ ಶ್ರೀ. ಎನ್. ಆರ್. ಲಾತೂರ್ ಸಂವಿಧಾನದ ನೆರಳಲ್ಲಿ ಬದುಕುತ್ತಿರುವ ನಾವು ಸೌಲಭ್ಯಗಳನ್ನು ಪಡೆಯುವುದರೊಂದಿಗೆ ನಮ್ಮ ಕರ್ತವ್ಯಗಳನ್ನು ಸಹ ಅರಿತುಕೊಳ್ಳಬೇಕಾದ ತುರ್ತು ಇದೆ ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯೆ ಕಲಿತು ಸಮಾಜದ ಆಸ್ತಿಗಳಾಗಿ ಬೆಳೆದಾಗ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ಸಾಕಾರಗೊಳ್ಳುತ್ತದೆ ಎಂದರು. ಇನ್ನೋರ್ವ ನ್ಯಾಯವಾದಿಗಳಾದ ಶ್ರೀ ಪ್ರವೀಣ್ ತಳವಾರ್ ಮಾತನಾಡಿ ಜ್ಯೋತಿಬಾಪುಲೆ ಅವರಿಂದ ಆರಂಭವಾಗಿ ಬಾಬಾ ಸಾಹೇಬರು ಸಂವಿಧಾನ ಬರೆಯುವವರೆಗೆ 101 ವರ್ಷಗಳ ನಿರಂತರ ಹೋರಾಟ ತ್ಯಾಗದ ಪ್ರತಿಕವಾಗಿ ನಮಗೆ ಸಂವಿಧಾನ ದೊರೆಯಿತು ಸಮಾನವಾಗಿ ಬದುಕುವ ಅವಕಾಶವನ್ನು ಡಾ. ಬಾಬಾ ಸಾಹೇಬರು ನಮಗೆ ಒದಗಿಸಿಕೊಟ್ಟರು ಎಂದರು
ಈ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಶ್ರೀ ಭರಮಣ್ಣ ತೋಳಿಯವರು ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ನ್ಯಾಯವಾದಿಗಳಾದ ನಿಂಗಪ್ಪ ಮಸ್ತಿ, ವಿನೋದ ಪಾಟೀಲ್ ಗಂಗಾಧರ್ ಶಗುನಶೆ, ಚೇತನ ಹೆಡೆಗೆ , ಸಂದೀಪ ಹರಿಜನ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶ್ರೀ ಬಸವರಾಜ ಕುರಿಹುಲಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ