13th February 2025

ಕರ್ನಾಟಕ ನಿವೃತ್ತ ನೌಕರರ ವೇದಿಕೆ, ಕೇಂದ್ರ ಸಮಿತಿ,
: ದಿನಾಂಕ : 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ/ನೌಕರ ವರ್ಗದ 26.700 ನಿವೃತ್ತರಿಗೆ 7 ನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟದ ಕುರಿತು ಕರ್ನಾಟಕ ತನ ಸರಕಾರದ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವಲ್ಲ ತಮ್ಮ ವಾಹಿನಿಯಲ್ಲಿ ಸಂವಾದ ಕಾರ್ಯಕ್ರಮ-ಸುದ್ದಿಪ್ರಸಾರ ಮಾಡುವ ಕುರಿತು ಮನವಿ ಪತ್ರ.
ಒಂದು ವೇಳೆ ಮಾನ್ಯ ಮುಖ್ಯಮಂತ್ರಗಳು 10 ದಿನಗಳ ಒಳಗಾಗಿ ನಮ್ಮ ಬೇಡಿಕೆ ಕಂಡೇರಿಕೆ ಕುರಿತು ವರ್ಷ ಆಹ್ವಾನಿಸದಿದ್ದಲ್ಲಿ ಅಣ್ಣಾ ಹಜಾರ-ಸಂತೋಷ ಹೆಗಡೆ ಅವರುಗಳ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಅನಿರ್ಧಿಷ್ಟ ಅವಧಿಗೆ ನಡೆಸುತ್ತೇವೆ.
ಮಾನ್ಯರೇ.
ಸರಕಾರವು ಸರಕಾರಿ ನೌಕರರಿಗೆ ವೇತನ ಭತ್ಯೆಗಳನ್ನು ಪರಿಷ್ಕರಿಸಲು ಹಾಗೂ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಲು ಡಾ| ಸುಧಾಕರರಾವ್ ಅವರ ನೇತೃತ್ವದಲ್ಲಿ 7 ನೇ ವೇತನ ಆಯೋಗವನ್ನು ರಚಿಸಿತ್ತು ಸದರಿ ವೇತನ ಆಯೋಗವು ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿರುತ್ತದೆ. ಸರಕಾರವು ಈ ಸಂಬಂಧ ದಿನಾಂಕ 23-08-2024 ರಂದು ವೇತನ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿರುತ್ತದೆ. ಸದರಿ ಆದೇಶದಲ್ಲಿ ದಿನಾಂಕ 01-08-2024 ರಿಂದ ವೇತನ ಭತ್ಯೆಗಳ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡಿರುತ್ತದೆ. ವಾಸ್ತವವಾಗಿ ದಿನಾಂಕ 01-07-2022 ರಿಂದಲೇ ಜಾರಿಗೊಳಿಸಬೇಕಾಗಿದ್ದು, 4 01-08-2024 ರಿಂದ ಜಾರಿಗೊಳಿಸಿರುವುದರಿಂದ 1-7-2022 005 31-7-2024 5 0 25 ತಿಂಗಳು ಸೇವೆಸಲ್ಲಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಟಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿರುತ್ತದೆ.
ನಾವುಗಳು ಸರಕಾರವನ್ನು ಕೇಳಿಕೊಳ್ಳುವುದೇನೆಂದರೆ ದಿನಾಂಕ 1-7-2022 ರಿಂದಲೇ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸವನ್ನು (Arrears) ಹೇಳುತ್ತಿರುವುದಿಲ್ಲ. ಬದಲಾಗಿ ನಾವು ಹೇಳುತ್ತಿರುವುದು 7 ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃದ್ಧಿ ಆರ್ಥಿಕ ಸೌಲಭ್ಯಗಳಾದ ಡಿ.ಸಿ.ಆರ್.ಜಿ. ಕಮ್ಯುಟೇಶನ್ ಹಾಗೂ ಗಳಿಕ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಮಾತ್ರ (One Time Settlement) ಕೊಡಬೇಕೆಂದು ದಿನಾಂಕ 11-8-2024 ರಿಂದ ಈ ತನಕ ಸರಿಸುಮಾರು 5 ತಿಂಗಳುಗಳಿಂದ ಕರ್ನಾಟಕ ಘನ ಸರಕಾರದ /ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು ಬೇಡಿಕೆ ಈಡೇರಿಸಿಕೊಳ್ಳುವ ದಿಸೆಯಲ್ಲಿ ಈ ಕೆಳಗಿನಂತೆ ನಾವ ವಿವಿಧ ರೀತಿಯಲ್ಲಿ ಹೋರಾಟಗಳನ್ನು ಕೈಗೊಂಡಿರುತ್ತೇವೆ.
• ದಿನಾಂಕ 01-07-2022 ರಿಂದ 31-07-2024 ರ ಅವಧಿಯಲ್ಲಿ ನಿವೃತ್ತರಾದ ಒಟ್ಟು ನೌಕರರ ಸಂಖ್ಯೆ 26,700. ಸದರಿ ನೌಕರರನ್ನು ಒಗ್ಗೂಡಿಸಲು ದಿನಾಂಕ 11-08-2024 ಮತ್ತು 24-08-2024 ರಂದು ಬೆಣ್ಣೆ ನಗರಿ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಬೃಹತ್ ಸಭೆಗಳನ್ನು ಜರುಗಿಸಿದೆವು.
• ರಾಜ್ಯದ ಎಲ್ಲಾ ತಹಶೀಲ್ದಾರ್ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಬೃಹತ್ ನಿಯೋಗದೊಂದಿಗೆ ಮನವಿ ಅರ್ಪಿಸಿದ್ದೇವೆ.• ದಿನಾಂಕ 18-09-2024 ರಂದು ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಮಾಜಿ ಲೋಕಾಯುಕ್ತರಾದ ಸನ್ಮಾನ್ಯ ಶ್ರೀ ಸಂತೋಷ ಹೆಗಡೆಯವರ ಸಮ್ಮುಖದಲ್ಲಿ "ಬೆಂಗಳೂರು ಚಲೋ" – ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದೆವು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಿಗೆ ನಮ್ಮ ಬೇಡಿಕೆ ಈಡೇರಿಕೆ ಕುರಿತು ಆಗ್ರಹಿಸಿ 12,000 ನಿವೃತ್ತರು ಸಮಾವೇಶಗೊಂಡು ಮನವಿ ಅರ್ಪಿಸಿದೆವು.
• ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ರಾಜ್ಯ ಘಟಕ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಶ್ರೀ ಸಿ. ಎಸ್. ಷಡಕ್ಷರಿಯವರಿಗೆ ಬೆಂಗಳೂರು ಚಲೋ ಸಮಾವೇಶದಲ್ಲಿ ಖುದ್ದಾಗಿ ಹಾಗೂ ಹತ್ತಾರು ಬಾರಿ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಅರ್ಪಿಸಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದೇವೆ.
•
ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ (ರಿ) ರಾಜ್ಯ ಘಟಕ, ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ಎಲ್. ಭೈರಪ್ಪನವರಿಗೆ ಬೆಂಗಳೂರು ಚಲೋ ಸಮಾವೇಶದಲ್ಲಿ ಖುದ್ದಾಗಿ ಹಾಗೂ ಹತ್ತಾರು ಬಾರಿ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಅರ್ಪಿಸಿ ವಿಷಯ ಮನವರಿಕೆ ಮಾಡಿಕೊಟ್ಟಿದ್ದೇವೆ.
• ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಿನಾಂಕ 01-10-2024 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಸಹಸ್ರ - ಸಹಸ್ರ ನಿವೃತ್ತರು ಸೇರಿ ಕಪ್ಪು ಪಟ್ಟಿ ಧರಿಸಿ ಜಿಲ್ಲಾ ಮಟ್ಟದಲ್ಲಿ ಧರಣಿ-ಸತ್ಯಾಗ್ರಹ-ಪ್ರತಿಭಟನೆ-ಹೋರಾಟ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದೇವೆ.
• ರಾಜ್ಯದ ಘನ ಸರಕಾರದ ವಿಧಾನ ಪರಿಷತ್ತಿನ ಸಭಾಪತಿಗಳಿಗೆ, ಉಪ ಸಭಾಪತಿಗಳಿಗೆ, ವಿಧಾನಸಭೆಯ ಸಭಾಪತಿಗಳಿಗೆ, ಉಪ ಸಭಾಪತಿಗಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಸನ್ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಸಚಿವ ಸಂಪುಟದ ಸರ್ವ ಸಚಿವರಿಗೆ, ಆಯಾ ಕ್ಷೇತ್ರಗಳ ಮತದಾರ ನಿವೃತ್ತ ನೌಕರರ ಬೃಹತ್ ನಿಯೋಗದ ಮೂಲಕ ಮನವಿ ಅರ್ಪಿಸಿದ್ದೇವೆ.
•
ಮೇಲ್ಕಾಣಿಸಿದ ಸರ್ವಮಾನ್ಯರು ಮಾನ್ಯ ಮುಖ್ಯಮಂತ್ರಿಗಳಿಗೆ ಇವರ ಬೇಡಿಕೆ ನ್ಯಾಯಯುತವಾಗಿದ್ದು ಈಡೇರಿಸುವಂತೆ ಶಿಫಾರಸ್ಸು ಪತ್ರಗಳನ್ನು ನೀಡಿದ್ದಾರೆ.
• ಕರ್ನಾಟಕ ವಿಧಾನಸಭೆಯ 224 ಮಾನ್ಯ ಶಾಸಕರುಗಳಿಗೆ ಅವರವರ ಕ್ಷೇತ್ರದ ನಿವೃತ್ತ ನೌಕರ ಮತದಾರರು ನಮ್ಮ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರಿಷ್ಕೃತ ಆದೇಶ ಹೊರಡಿಸುವಂತೆ ಬೃಹತ್ ನಿಯೋಗದೊಂದಿಗೆ ಮನವಿ ಅರ್ಪಿಸಿದ್ದೇವೆ.
•
ಕರ್ನಾಟಕ ವಿಧಾನಪರಿಷತ್ತಿನ ಸರ್ವಮಾನ್ಯ ಶಾಸಕರುಗಳಿಗೆ ಅವರವರ ಕ್ಷೇತ್ರದ ನಿವೃತ್ತ ನೌಕರ ಮತದಾರರು ನಮ್ಮ ಬೇಡಿಕೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಪರಿಷ್ಕೃತ ಆದೇಶ ಹೊರಡಿಸುವಂತೆ ಬೃಹತ್ ನಿಯೋಗದೊಂದಿಗೆ ಮನವಿ ಅರ್ಪಿಸಿದ್ದೇವೆ.
• ಬಹುಪಾಲು ಶಾಸಕರು ಮಾನ್ಯ ಮುಖ್ಯಮಂತ್ರಿಗಳಿಗೆ ನಿವೃತ್ತರ ಬೇಡಿಕೆ ಈಡೇರಿಸುವಂತೆ ಶಿಫಾರಸ್ಸು ಪತ್ರಗಳನ್ನು ನೀಡಿದ್ದಾರೆ.
• ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯಶ್ರೀಮತಿ ಶಾಲಿನಿ ರಜನೀಶ್ರವರಿಗೆ ನಾಲ್ಕಾರು ಬಾರಿ ನಿಯೋಗದೊಂದಿಗೆ ಮನವಿ ಅರ್ಪಿಸಿ ವಿಷಯ ಮನವರಿಕೆ ಮಾಡಿದ್ದೇವೆ. ಇವರೂ ಸಹ ನಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ.
• ನಮ್ಮ ಬೇಡಿಕೆಯು ಆರ್ಥಿಕ ಇಲಾಖೆಗೆ ಸಂಬಂಧಿಸಿದ್ದಾಗಿದ್ದರಿಂದ ಸರಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯಶ್ರೀ ಎಲ್. ಕೆ. ಅತೀಕ್ ರವರಿಗೆ ಹಾಗೂ ಇದೇ ಇಲಾಖೆಯ ಕಾರ್ಯದರ್ಶಿಗಳು (ಆ, & ಸಂ.) ಮಾನ್ಯಶ್ರೀ ಪಿ. ಸಿ. ಜಾಫರ್ರವರಿಗೆ ಹತ್ತಾರು ಬಾರಿ ಖುದ್ದಾಗಿ ಭೇಟಿಯಾಗಿ ನಿಯೋಗದೊಂದಿಗೆ ವಿಷಯ ಮನವರಿಕೆ ಮಾಡಿ ಚರ್ಚಿಸಿ ಬಂದಿದ್ದೇವೆ. ಸದರಿಯವರು ನಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ.• ವಿಶೇಷವಾಗಿ ವಿಧಾನಪರಿಷತ್ ಸದಸ್ಯರಾದ ಮಾನ್ಯ ಡಾ| ಯತೀಂದ್ರ ಸಿದ್ಧರಾಮಯ್ಯನವರಿಗೆ ನಾಧ್ಯಮ ಬಾರಿ ಖುದ್ದಾಗಿ ಭೇಟಿಯಾಗಿ ನಿಯೋಗದೊಂದಿಗೆ ವಿಷಯ ಮನವರಿಕೆ ಮಾಡಿ ಚರ್ಚಿಸಿ ಬಂದಿದ್ದೇವೆ, ಕವಾಯಾರಿ ನಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ.
ಈ ನಮ್ಮ ಬೇಡಿಕೆ ಕುರಿತು ಸಾವುಗಳು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿ ಆಗ್ರಹಿಸಿ ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸುವರ್ಣಸೌಧದ ಮುಂದೆ ದಿನಾಂಕ 16-12-2004 ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ 20,000 ಕ್ಕೂ ಅಧಿಕ ನೌಕರರು ಸಮಾವೇಶಗೊಂಡ ಸಂದರ್ಭದಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಸತೀಶ ಜಾರಕಿಹೊಳಿಯವರು ಘನ ಸರಕಾರದ ವತಿಯಿಂದ ನಮ್ಮ ಮನವಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಮಾನ್ಯ ಸಚಿವರೊಂದಿಗೆ ಆಗು ಮಾನ್ಯಶ್ರೀ ಪಿ. ಸಿ. ಜಾಫರ್ ಸರಕಾರದ ಕಾರ್ಯದರ್ಶಿಗಳು (ಆ. & ಸಂ.) ಆರ್ಥಿಕ ಇಲಾಖೆ, ಬೆಂಗಳೂರು ಇವರು ಆಗಮಿಸಿದ ಸಂದರ್ಭದಲ್ಲಿ ಅಧಿವೇಶನದ ನಂತರ ಬೆಂಗಳೂರಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಸಭೆ ಆಯೋಜಿ ನಿಮ್ಮ ವೇದಿಕೆಯ ಮುಖಂಡರನ್ನು ಮಾತುಕತೆಗೆ ಆಹ್ವಾನಿಸುತ್ತೇವೆ. ಆಗ ತಾವು ಬಂದು ತಮ್ಮ ಆಹವಾಲು ಮಂಡಿಸಿರಿ ಎಂದು ತಿಳಿಸಿದ್ದರು.
ಅಲ್ಲದೇ ಮಾನ್ಯಶ್ರೀ ಸತೀಶ ಜಾರಕಿಹೊಳಿ ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಗಳನ್ನು ಸುವರ್ಣ ವಿಧಾನಸೌಧದಲ್ಲಿ ಭೇಟಿಯಾಗಲು ವ್ಯವಸ್ಥೆ ಮಾಡಿದಂತೆ ನಮ್ಮ ವೇದಿಕೆಯ ನಿಯೋಗವು ದಿನಾಂಕ 16-12-2024 ರಂದು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾದಾಗ ಮಾನ್ಯ ಮುಖ್ಯಮಂತ್ರಿಗಳು ಈ ಅಧಿವೇಶನದ ನಂತರ ಸಭೆ ಕರೆದು ಚರ್ಚಿಸಿ ನಿರ್ಧರಿಸೋಣ ಎಂದು ಹೇಳಿದ್ದರು.
ಆದರೆ ಈ ವರೆಗೂ ಆರ್ಥಿಕ ಇಲಾಖೆಯ ಅಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಭೆ ಬರ್ಪಾಡು ಮಾಡಿರುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ 26,700 ನಿವೃತ್ತ ನೌಕರರು ಹಿರಿಯ ಜೀವಿಗಳಾಗಿದ್ದು ಹಿರಿಯ ನಾಗರಿಕರಾಗಿದ್ದು ನಮಗೆ ನಮ್ಮ ಕುಟುಂಬಕ್ಕೆ ಆರ್ಥಿಕ ಸಂಕಷ್ಟವಾಗಿದೆ. ನಮಗೆ 7 ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಇ.ಎಲ್. ಸರಂಡರ್, ಆರ್ಥಿಕ ಸೌಲಭ್ಯಗಳನ್ನು ನೀಡದೇ 01-07-2022 ರಿಂದಲೇ 7 ನೇ ವೇತನ ಆಯೋಗ ಜಾರಿ ಆಗಿದ್ದು ನಾವುಗಳು ಇದೇ ಅವಧಿಯಲ್ಲಿ ಸೇವೆ ಸಲ್ಲಿಸಿದ್ದರೂ ನಮ್ಮನ್ನು ಆರ್ಥಿಕ ಸೌಲಭ್ಯದಿಂದ ವಂಚಿತಗೊಳಿಸಿ 01-08-2024 ರಿಂದ ಜಾರಿಗೊಳಿಸಿದ್ದಾರೆ.
ಆದ್ದರಿಂದ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸಿ ಪರಿಷ್ಕೃತ ಆದೇಶ ಹೊರಡಿಸುವಲ್ಲ ಮಾನ್ಯ ಮುಖ್ಯಮಂತ್ರಿಗಳು ನಮ್ಮ ವೇದಿಕೆಯ ಮುಖಂಡರುಗಳೊಂದಿಗೆ ಒಂದು ವಾರದೊಳಗೆ ದಿನಾಂಕ ನಿಗದಿಗೊಳಿಸಿ ಒಂದು ಸಭೆ ಬರ್ಹಾಡು ಮಾಡಲು ಈ ನಿಮ್ಮ ಪತ್ರಿಕೆಯಲ್ಲಿ ಸುದ್ದಿ ಪ್ರಕಣಸಲು ಕೋರುತ್ತ ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತಿದ್ದೇನೆ.
ಒಂದು ವೇಳೆ ಮಾನ್ಯ ಮುಖ್ಯಮಂತ್ರಿಗಳು 10 ದಿನಗಳ ಒಳಗಾಗಿ ನಮ್ಮ ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಆಹ್ವಾನಿಸದಿದ್ದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಆಗ್ರಹಿಸಿ ದಿನಾಂಕ 28-02-2025 ರಂದು ಫ್ರೀಡಂ ಸಾರ್ಹ, ಬೆಂಗಳೂರಿನಲ್ಲಿ ಪ್ರಧಾನರು, ಬೃಷ್ಟಾಚಾರ ವಿರೋಧಿ ಜನಾಂದೋಲನ ಸಮಿತಿ, ಅಷ್ಟದನಗರ, ಮಹಾರಾಷ್ಟ್ರದ ಅಣ್ಣಾ ಹಜಾರ ಇವರ • ನೇತೃತ್ವದಲ್ಲಿ ಹಾಗೂ ವಿಶ್ರಾಂತ ಲೋಕಾಯುಕ್ತ ಅಧಿಕಾರಿಗಳಾದ ಸಂತೋಷ ಹೆಗಡೆ ಅವರುಗಳ ಬೆಂಬಲದೊಂದಿಗೆ ಬೆಂಗಳೂರು ಚಲೋ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಅನಿರ್ಧಿಷ್ಟ ಅವಧಿಗೆ ನಡೆಸುತ್ತೇವೆ.
ಸುದ್ದಿಗೋಷ್ಠಿಯಲ್ಲಿ
ಮಂತಾದವರು ಉಪಸ್ಥಿತರಿದ್ದರು.
ಈ ಸಂಗತಿಯನ್ನು ತಮ್ಮ ಜನಪ್ರಿಯ ಮಾಧ್ಯಮದಲ್ಲಿ ಪ್ರಕಟಿಸಲು ಹಾಗೂ ಪ್ರಸಾರ ಮಾಡಲು ಏನಂತ.
ಗೌರವಾನ್ವಿತ ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿಕರು
ಅಶೋಕ ಎಮ್. ಸಜ್ಜನ
ರಾಜ್ಯ ಸಂಚಾಲಕರು
ತೇಜ ಎನರ್
ಡಾ. ಸಮಾ.ಡಿ.ಎಂ. ಇಣ್ಯಬಿಯ್ಯ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ