14th February 2025

*ಇಂದು ನಗರದಲ್ಲಿ ಸಾವಿತ್ರಿ ಬಾಯಿ ಫುಲೆ ಜಯಂತ್ರೋತ್ಸವ*
ಬೆಳಗಾವಿ ದಿ 14:-ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕ ಹಾಗೂ ಜಿಲ್ಲಾ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ದಿ 15 ರಂದು ಮಧ್ಯಾಹ್ನ 2.30 ಘಂಟೆಗೆ ಕನ್ನಡ ಸಾಹಿತ್ಯ ಭವನದಲ್ಲಿ ಸಾವಿತ್ರಿ ಭಾಯಿ ಫುಲೆ ಜಯಂತಿ ಉತ್ಸವದ ಅಂಗವಾಗಿ ಜಯಂತಿ ಹಾಗೂ ವಿವಿಧ ಸಾಧಕರಿಗೆ ಪ್ರಶಸ್ತಿ ಸಮಾರಂಭ ನಡೆಯಲಿದೆ,
ವಿಧಾನ ಪರಿಷತ್ತ ಸದಸ್ಯರಾದ ಡಾ, ಸಾಬಣ್ಣ ತಳವಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಸರಕಾರಿ ಶಾಲೆಗಳ ಸಬಲೀಕರಣ ಕುರಿತು ಮಾತನಾಡಲಿದ್ದಾರೆ, ಶೈಕ್ಷಣಿಕ ಸಾಧನೆ ಮಾಡಿದವರಿಗೆ ಸಾವಿತ್ರಿ ಭಾಯಿ ಫುಲೆ ಜಿಲ್ಲಾ ಪ್ರಶಸ್ತಿಯನ್ನು ಡಿ ಡಿ ಪಿ ಐ ರವರಾದ ಶ್ರೀಮತಿ ಎಲ್ ಎಸ್ ಹಿರೇಮಠ ರವರು ಪ್ರದಾನ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ ಸಕ್ರೆನವರ ವಹಿಸುವರು
ಮುಖ್ಯ ಅತಿಥಿಗಳಾಗಿ ನಗರ ಬಿ ಇ ಓ ರವಿ ಭಜಂತ್ರಿ ಯವರು, ಗ್ರಾಮೀಣ ಬಿ ಇ ಓ ಎಸ್ ಪಿ ದಾಸಪ್ಪನವರ, ಎಮ್ ಎಸ್ ಮೇದಾರ, ಶಿಕ್ಷಕರ ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಖನ್ನಿನಾಯ್ಕರ, ಸಾವಿತ್ರಿಭಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ನಸ್ರಿನ ಬಾನು ಕಾಶಿಮನವರ, ನಿಪ್ಪಾಣಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮಹದೇವ ಗೋಕಾರ, ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷೆ ಚಾಂದಬಿ ಕಲಾಲ, ಪ್ರಧಾನ ಕಾರ್ಯದರ್ಶಿ ಮೈಲಾರ ಹೊರಕೇರಿ, ಜಿಲ್ಲಾ ಬರಹಗಾರರ ಸಂಘದ ಗೌರವಾಧ್ಯಕ್ಷರಾದ ಬಸವರಾಜ ಫಕೀರಪ್ಪ ಸುಣಗಾರ, ಅಹಿಂದ ನೌಕರರ ಸಂಘದ ಅಧ್ಯಕ್ಷರಾದ ಬಿ ಡಿ ತಮ್ಮಣ್ಣವರ ಆಗಮಿಸುವರು
ಈ ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ಹಾಗೂ ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಗುವುದು
ಈ ಸಮಾರಂಭದಲ್ಲಿ ಶೈಕ್ಷಣಿಕ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರು -ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಸಾವಿತ್ರಿಭಾಯಿ ಫುಲೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು,
ಈ ಕಾರ್ಯಕ್ರಮಕ್ಜೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಶಿಕ್ಷಣಾಭಿಮಾನಿಗಳು,ಶಿಕ್ಷಕರು ಶಿಕ್ಷಕಿಯರು ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರಾದ ಪುಷ್ಪಾ ಖನ್ನಿನಾಯ್ಕರ, ಮಹೇಶ ನಿಲಜಿ, ಬಸವರಾಜ ಮೇದಾರ, ಪ್ರವೀಣ ಪಾಲೇಕರ, ಡಿ ಡಿ ಹೋಳಿ, ಯವರು ಮನವಿ ಮಾಡಿಕೊಂಡಿರುವರು

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ