6th March 2025

೭೭೦ ವರ್ಷ ತಪಗೈದ ಮಹಾತಪಸ್ವಿ
ಅಡವಿ ಮಹಾಸ್ವಾಮಿಗಳು.
ಮಹಾರಥೋತ್ಸವ ಜಾತ್ರೆ.
ಅಂಕಲಗಿ ೦೫- ಕುಂದರನಾಡು ಗೋಕಾಕ ತಾಲೂಕಿನ ಪಶ್ಚಿಮ ಘಟ್ಟದ ಅಂಚಿನ
ಮತ್ತು ಫಲವತ್ತಾದ ಪ್ರದೇಶ. ಇಲ್ಲಿ ಗುಡ್ಡ ಬೆಟ್ಟಗಳು, ಹಳ್ಳ ಕೊಳ್ಳಗಳು, ಪ್ರವಾಸಿಗರ ಕಣ್ಮನ ಸೆಳೆಯಬಲ್ಲ ತಾಣಗಳು. ೧೨ ನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿಯ ನಂತರ ಶರಣರು ದಶ ದಿಕ್ಕುಗಳತ್ತ ಚದುರಿ ಹೋಗಿ ಅಲ್ಲಲ್ಲಿ ನೆಲೆ ನಿಂತು ಭಕ್ತರ ಉದ್ಧಾರಗೊಳಿಸಿದವರು..
ಚನ್ನ ಬಸವಣ್ಣನವರ ಅನತಿಯಂತೆ ಅಂದಿನ ಕಲ್ಯಾಣದ ಶಿವಶರಣರಲ್ಲಿ ಅತೀ ಹಿರಿಯರನಿಸಿದ ಹಿಮಾಲಯದಲ್ಲಿ ತಪಗೈದು ದಕ್ಷಿಣದತ್ತ ಬಂದು ಬಸವ ಶಿವಶರಣರಲ್ಲಿ ಕೂಡಿ, ಪೀಠದಲ್ಲಿ ತಾಂಬೂಲು ಸೇವೆ ಗೈದಿದ್ದ, ರೇಚಪ್ಪ ಸ್ವಾಮಿಗಳು, ಕುಂದರನಾಡಿನ ಕುಂದರಗಿಯ ಹುಣಸೆ ಮರದ ಪೊಟರೆಯಲ್ಲಿ ನೆಲೆ ನಿಂತು ತಪಗೈದು ನಂತರ ಅಂಕಲಗಿ ಸಮೀಪದ ಡೊಂಕ ಬಳ್ಳಾರಿ ಯ ತಟದ ಬಿದಿರು ಮೆಳೆಯಲ್ಲಿ ಆರಾಧ್ಯ ದೈವ ಸಿದ್ಧೇಶ್ವರನನ್ನು ಅರಾಧಿಸುತ್ತ ಭಕ್ತರ ಉದ್ಧರಿಸಿ ನಾಡು ಸಂಪನ್ನಗೊಳಿಸಿದವರು. ಮಹಿಮಾ ಪುರುಷರಾಗಿದ್ದ ರೇಚಪ್ಪ ಸ್ವಾಮಿಗಳು ಅಡಿವೆಪ್ಪರೆಂದು ಪ್ರಸಿದ್ಧರಾಗಿ, ಅರಮನೆ ನಾಚಿಸುವಂಥ ಭವ್ಯ ಮಠವನ್ನು ಕಟ್ಟಿ , ೭೭೦ ವರ್ಷಗಳ ಕಾಲ ಭಕ್ತರೊಂದಿಗೆ ಬದುಕಿ , ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಗರ್ಭ ಗುಡಿಯಲ್ಲಿ ಲಿಂಗೈಕ್ಯರಾದವರು. ಅವರು ಸಶರೀರವಾಗಿ ಕೈಲಾಸಕ್ಕೆ ಹೋಗುವಾಗ ಐಖ್ಯ ರಾದ ಸ್ಥಳದಲ್ಲಿ ಅವರು ಬಿಟ್ಟು ಹೋದ ಎರಡು ವಿಭೂತಿ ಗಟ್ಟಿಗಳನ್ನು ಇಂದಿಗೂ ಗದ್ದುಗೆಯ ಎರಡು ಹಿತ್ತಾಳೆ ಕಟ್ಟಿನಲ್ಲಿಟ್ಟು ನಿತ್ಯ ಪೂಜಿಸಲಾಗುತ್ತಿದೆ.
ಅವರ ಮಹಿಮೆಗಳು ಅಪಾರ, ಶ್ರೀ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಮಹಾ ರಥೋತ್ಸವದ ಜಾತ್ರೆಯ ವೈಭವ ಇದೇ ಶುಕ್ರವಾರ ದಿನಾಂಕ ೦೭-೦೩-೨೦೨೫ರಂದು ಜರುಗಲಿದ್ದು, ಈ ಜಾತ್ರೆಯ ವೈಭವ ಕಾಣ್ತುಂಬಿಕೊಳ್ಳುವದೇ ಒಂದು ಸುಯೋಗ. ಸುಪ್ರಸಿದ್ಧಿಯಾದ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಜಾತ್ರೆಯು ಲಕ್ಷಾಂತರ ಭಕ್ತರ ಕೂಟ. ಅಲ್ಲಿ ಜಾತಿ, ಮತ,ಬಿಟ್ಟು ಮಾನವೀಯ ಪ್ರೀತಿ, ಪ್ರೇಮಗಳ ಸಂಗಮವಾಗಿ ವರ್ಷಕ್ಕೊಮ್ಮೆ ಶಿವರಾತ್ರಿಯ ೯ ನೇ ದಿನದಲ್ಲಿ ಅಪಾರ ಸಂಖ್ಯೆಯ ಜನಜಂಗುಳಿ ಯ. ಮಧ್ಯದಲ್ಲಿ ಮಹಾ ರಥೋತ್ಸವ ಜರುಗುತ್ತದೆ.
ಸೇರಿದ ಭಕ್ತ ಕೋಟಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಮಹಾ ರಥೋತ್ಸವಕ್ಕೆ ಕಾಯಿ,ಫಲಗಳನ್ನು ಎಸೆದು ಕ್ರತಾರ್ಥರಾಗುತ್ತಾರೆ. ಜಾತ್ರೆಯಲ್ಲಿ ಸೇರುವ ದನ, ಕರುಗಳಿಗೆ, ಮತ್ತು ಯಾತ್ರಾರ್ಥಿಗಳ ಸುಗಮ ಜಾತ್ರೆಗೆ ಪೂರಕವಾಗಿ ಸರ್ವತೋಮುಖ ಕಾರ್ಯ ಕೈಗೊಂಡಿದ್ದು, ಯಾವುದೇ ಜಾತ್ರೆಯಲ್ಲಿ ಪ್ರಸಿದ್ಧ ಫೈಲವಾನರ ಕುಸ್ತಿಗಳು, ಅತ್ಯುತ್ತಮ ದನಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಆತಂಕಗಳಾಗದಂತೆ ಸ್ವತ್ಃ ಮಠಾಧ್ಯಕ್ಷರಾದ ಶ್ರೀ ಡಾ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿ, ಎಲ್ಲ ಜಾತ್ರೆಯ ವ್ಯವಸ್ಥೆ ಮಾಡಿ ಸೈ ಎನ್ನಿಸಿಕೊಂಡಿದ್ದು, ವಿಶೇಷವಾಗಿದೆ. ಸುರೇಶ ಉರಬಿನಹಟ್ಟಿ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ