13th March 2025

ಹೊರ ಜಗತ್ತಿನ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಅದ್ವಿತೀಯ.
ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜೇಂದ್ರ ಗೌಡಪ್ಪಗೋಳ ಅಭಿಮತ.
ಅಂಕಲಗಿ. ೧೨- ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಾಧನೆಯ ಮೆಟ್ಟಿಲಲ್ಲಿ ನಿಲ್ಲುತ್ತಿರುವ ಮಹಿಳೆಯರ ಪಾತ್ರ ನಿಜಕ್ಕೂ ಶ್ಲ್ಯಾಘನೀಯ ವಾಗಿದೆ ಎಂದು ಸಮೀಪದ ಮಲ್ಲಾಪುರ ಗ್ರಾಮದ ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಹೇಳಿದರು. ಅವರು ಅಂಕಲಗಿ ಶ್ರೀ ಅಡವಿಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಬುಧವಾರ ಮುಂಜಾನೆ ಜಿಲ್ಲಾ ಪಂಚಾಯತಿ ಬೆಳಗಾವಿ, ಆತ್ಮ ಯೋಜನೆ, ಕೃಷಿ ಇಲಾಖೆ ಗೋಕಾಕ, ಜೈ ಜವಾನ, ಜೈ ಕಿಸಾನ ಕೃಷಿ ಗ್ರಾಮೀಣ ಅಭಿವ್ರದ್ಧಿ ಸಂಘ ಖಾನಗಾಂವ ಹಾಗೂ ವಿವೇಕ ಜಾಗ್ರತ ಬಳಗ, ಅಂಕಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ, ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಾಧನೆಗಳು ಪುರುಷರನ್ನು ಮೀರಿದ್ದು, ಎಲ್ಲ ಶಿಕ್ಷಣ, ಸಾಮಾಜಿಕ, ಆರ್ಥಿಕ, ಕೃಷಿ, ರಾಜಕೀಯ, ವೈಜ್ಞಾನಿಕ, ಮಾಹಿತಿ, ತಂತ್ರಜ್ಞಾನ ಸೇರಿದಂತೆ ಆರ್ಥಿಕತೆಯಲ್ಲೂ ಸಬಲತೆ ಸಾಧಿಸಿ ಎತ್ತರದಲ್ಲಿ ಗುರುತಿಕೊಂಡಿದ್ದು , ಹೆಮ್ಮೆಯ ವಿಷಯವಾಗಿದೆ. ಇಂದು ಆಚರಿಸುತ್ತಿರುವ ಈ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರು.
ಗೋಕಾಕ ಕೃಷಿ ಇಲಾಖೆಯ ಅಧಿಕಾರಿ ಎಮ್,ಎಂ ನಧಾಪ್ ಮಹಿಳೆಯರಿಲ್ಲದೆ ಸ್ರಷ್ಠಿ ಇಲ್ಲಾ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಾಧನೆಗಳು ಪುರುಷರನ್ನು ಮೀರಿದ್ದು, ಇಂದಿನ ಈ ಮಹಿಳಾ ದಿನಾಚರಣೆಗೆ ಪೂರಕವೆನಿಸಿದೆ ಎಂದರು.
ವೇದಿಕೆಯಲ್ಲಿ ಬಸವರಾಜ ಪಟ್ಟಣಶೆಟ್ಟಿ, ಶಂಕರ ಭೂಸನ್ನವರ, ಸಿದ್ದಪ್ಪ ಹೊಳೆಯಾಚಿ, ಜೈ ಜವಾನ ಜೈ ಕಿಸಾನ ಕೃಷಿ ಸಂಘದ ಅದ್ಯಕ್ಷ ಈಶ್ವರ ಬಾಗೋಜಿ, ಚಾಯಾ ಯಾದವಾಡ, ಶಿವನಗೌಡಾ ಹೊಳೆಯಾಚಿ, ಉಪ ಕೃಷಿ ನಿರ್ದೇಶಕ, ಎಚ್ ಡಿ ಕೋಳೇಕರ,
ವ್ಹಿ ಎಮ್ ಹೊಸೂರ, ಸುಜಾತಾ ರಾಮಕ್ರಷ್ಣ್, , ವಿಮಲಾ ಪ್ರವೀಣ ಕಡಗದ, ಆಸೀನರಾಗಿದ್ದರು.
ಶ್ರೀ ಅಡವಿಸಿದ್ಧೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು.
ಚಾಯಾ ಯಾದವಾಡ ಸ್ವಾಗತಿಸಿದರು.
ಆರ್ ಎಸ್ ಕಾಕಡೆ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಸಂಘಗಳ ಮಹಿಳೆಯರು, ಕುಂದರನಾಡಿನ ಅಭಿಮಾನಿಗಳು ಉಪಸ್ಥಿತರಿದ್ದರು.
ಸುರೇಶ ಉರಬಿನಟ್ಟಿ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ