18th March 2025

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ವತಿಯಿಂದ ಮಾರ್ಚ್ 20 ರಂದು ಮಹಾಡ್ ಚವದಾರ ಕೆರೆಯ ಚಳುವಳಿಯ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆಯನ್ನು ಆಚರಿಲಾಗುವುದು ಎಂದು ರಾಜ್ಯ ಖಜಾಂಚಿ ಸಿದ್ಧಪ್ಪ ಕಾಂಬಳೆ ಅವರು ತಿಳಿಸಿದರು. ಇಂದು ಬೆಳಗಾವಿ ನಗರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದದ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರ ಸೂಚನೆಯಂತೆ ರಾಜ್ಯಾದ್ಯಂತ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಚವದಾರ ಕೆರೆಯ ಸತ್ಯಾಗ್ರಹದ ನೆನಪಿನಲ್ಲಿ ಮಾರ್ಚ್ 20 ರಂದು ಶೋಷಿತರ ಸಂಘರ್ಷ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಬೆಳಗಾವಿಯ ಡಾ. ಅಂಬೇಡ್ಕರ ಉದ್ಯಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಸ್ಪಿ ರವೀಂದ್ರ ಗಡಾಡಿ ಉಪಸ್ಥಿತರಿರಲಿದ್ದು, ಸಮಾಜ ಚಿಂತಕರಾದ ಭೀಮಪುತ್ರ ಬಿ. ಸಂತೋಷ, ಪ್ರೋ. ಡಿ. ಶ್ರೀಕಾಂತ ಉಪನ್ಯಾಸ ನೀಡಲಿದ್ದಾರೆ. ಆರ್.ಜಿ ಕಾಂಬಳೆ, ಶಶಿ ಸಾಳವೆ, ನಾಗೇಶ್ ಕಾಮಶೆಟ್ಟಿ, ಮನೋಹರ ಅಜ್ಜಣಕಟ್ಟಿ, ಮಲ್ಲೇಶ ಚೌಗುಲೆ, ಭಾವುರಾವ ಗಡ್ಕರಿ, ಆನಂದ ಸದರಿಮಣಿ ಇನ್ನುಳಿದ ಗಣ್ಯರು ಉಪಸ್ಥಿತರಿಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಮಲ್ಲೇಶ ಚೌಗುಲೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ