18th May 2025
ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.18.05.2025 ರಂದು ಸಾಮೂಹಿಕ ಪ್ರಾಥ೯ನೆ ಪ್ರೋ.ವಿರೂಪಾಕ್ಷ. ಬಾ. ದೊಡಮನಿ ಉಪನ್ಯಾಸ ನೀಡಿದರು.ಜ್ಞಾನಜ್ಯೋತಿಗೆ ಸಾಧು ಮಾನ್ಯರು ದೀಪಕ್ಕೆ ಎಣ್ಣೆ ಹಾಕಬೇಕು.ನೋಡುವ ದೃಷ್ಟಿ ಬದಲಾಗಬೇಕು.ಸಮಯ ಮಾಡಿಕೊಂಡು ಶರಣರ ಮಾತು ಆಲಿಸಬೇಕು.ಮನಸಿಗೆ ಬಂದ್ದದೆಲ್ಲಾ ಬಯಸಬಾರದು.ದೀಪದ ಗುಣ ಅಳವಡಿಸಿ ಕೊಳ್ಳಬೇಕು.ಅತಿಥಿಗಳನ್ನು ಆದರಿಸಬೇಕು.ಶಿಷ್ಯನೊವ೯ನು ನನ್ನ ಹೆಸರು ಅಜರಾಮರಾಗಿ ಉಳಿಯಲು ಏನು ಮಾಡಬೇಕು ಎಂದಾಗ ಗುಡ್ಡದ ತುದಿಗೆ ಕರೆದುಕೊಂಡು ಹೋಗಿ ಪ್ರತಿದ್ವನಿ ಹೇಗೆ ಬರುವುದು ತೋರಿಸಿದರು ನಾವು ಹೇಗೆ ಇರುತ್ತೆವೆಯೂ ಹಾಗೆ ಜೀವನ ನಮ್ಮಲ್ಲಿ ಅರಿಷಡ್ವಗಳು ಗೆಲ್ಲಬೇಕು ಮನಸ್ಸು ಸ್ವಚ್ಛವಿರಬೇಕು.ನಡೆ ನುಡಿ ಒಂದೆ ಇರಬೇಕು.ನಮ್ಮ ತಪ್ಪುಗಳನ್ನ ನಾವು ತಿದ್ದಿಕೊಳ್ಳಬೇಕು. ಶರಣರ ಸಂತರ ಆದಶ೯ಗಳನ್ನ ಅಳವಡಿಸಿಕೊಳ್ಳಬೇಕು. ಬಿ. ಪಿ. ಜೇವಣಿಯವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಆನಂದಕರಕಿ,ವಿ. ಕೆ. ಪಾಟೀಲ,ಅಕ್ಕಮಹಾದೇವಿ ತೆಗ್ಗಿ,ಜಯಶ್ರೀ ಚಾವಲಗಿ,ದಾಕ್ಷಾಯಿಣಿ ಪೂಜಾರ,ಸುನಿಲ ಸಾಣಿಕೊಪ್ಪ,ವಚನ ವಿಶ್ಲೇಷಣೆ ಮಾಡಿದರು..ಈರಣ್ಣಾ ದೇಯಣ್ಣವರಅಧ್ಯಕ್ಷತೆವಹಿಸಿದ್ದರು.ದ್ರಾಕ್ಷಯಿಣಿ ಪೂಜಾರ ದಾಸೋಹ ಸೇವೆಗೈದರು. ಇದೇ ಸ೦ದಭ೯ದಲಿೢ ಶಿವಪುತ್ರಯ್ಯ ಪೂಜಾರ ಇವರ ೮೧ನೇಯ ಹುಟ್ಟುಹಬ್ಬ ಆಚರಿಸಲಾಯಿತು ಮಹಾ೦ತೇಶ ತೊರಣಗಟ್ಟಿ, ಆನಂದ ಕರಕಿ,ಬಸವರಾಜ ಪೂಜಾರ,ಮಹಾ೦ತೇಶ ಇ೦ಚಲ, ಬಸವರಾಜ ಕರಡಿಮಠ, ಕಾಡೆ,ಸುಶೀಲಾ ಗುರವ, ದೊಡಗೌಡ ಪಾಟೀಲ,,ರುದ್ರಗೌಡ ಪಾಟೀಲ,ಗಂಗಪ್ಪ ಉಣಕಲ್,ಮಹಾಂತೇಶ ಮೆಣಸಿನಕಾಯಿ,ಬಸವರಾಜ ಛಟ್ಟರಕಿ,ಸಿದ್ಧಪ್ಪ ಸಾರಾಪೂರೆ,ಮರಲಿಂಗಣ್ಣವರ,ಗುರುಸಿದ್ದಪ್ಪ ರೇವಣ್ಣವರ,ಕೆಂಪಣ್ಣಾ ರಾಮಾಪೂರೆ ದಂಪತಿಗಳು,ಲಕ್ಷೀಕಾಂತ ಗುರವ,ಶೇಖರ ವಾಲಿಇಟಗಿ,ತಿಗಡಿ ದಂಪತಿಗಳು,ಶಿವಾನಂದ ನಾಯಕ,ಎಸ್ ಎಸ್ ಪೂಜಾರ ದಂಪತಿಗಳು,ಗಂಗಾಧರ ಹಿತ್ತಲಮನಿ,ಶರಣ ಶರಣೆಯರು ಉಪಸ್ಥತರಿದ್ದರು.ಆನಂದ ಕಕಿ೯ ನಿರೂಪಿಸಿ ವಂದಿಸಿದರು
ಸಜೀವ ದಹನವಾಗಿದ್ದ ಯುವಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*