ಬಹುಮಾನಗಳು ಅಹಂಕಾರದ ವಸ್ತುವಾಗಬಾರದು..
ಮಲ್ಲಾಪುರ ಎಸ್ ಎ ಗ್ರಾಮದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ಬ್ರಹ್ಮಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ.
ಅಂಕಲಗಿ. ೧೯- ಕ್ರೀಡೆಗಳಲ್ಲಿ ಸೋಲು,ಗೆಲುವು ಸಾಮಾನ್ಯ. ಗೆಲುವಿನ ಬಹುಮಾನಗಳು ನಮ್ಮ ಅಹಂಕಾರದ ವಸ್ತುವಾಗಬಾರದು ಎಂದು ಸಮೀಪದ ತವಗ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು ಅವರು ಸೋಮವಾರ ಸಮೀಪದ ಮಲ್ಲಾಪುರ ಎಸ್ ಎ ಗ್ರಾಮದಲ್ಲಿ ಜರುಗಿದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದರು. . ಆಟಗಾರನಲ್ಲಿ ಆಸಕ್ತಿ, ಹುಮ್ಮಸ್ಸು, ಛಲಗಳಿರಬೇಕು. ಆದರೆ ದುರಾಸೆ ಬೇಡ .ಇದು ನಮ್ಮ ಶಕ್ತಿ ನಶಿಸಲು ಕಾರಣವಾಗುವದು. ಸರ್ಕಾರ ಕ್ರೀಡೆಗಳಿಗೆ ಸೋಲೇ ಗೆಲುವಿನ ಸೋಪಾನ ಎಂಬುದು ನಮಗೆ ತಿಳಿದಿರುವ ವಿಷಯ. ಸರ್ಕಾರ ಕ್ರೀಡೆಗಳಿಗೆ ಹತ್ತಾರು ಹೊಸ,ಹೊಸ ಯೋಜನೆಗಳನ್ನು ಕೊಡುತ್ತಿದ್ದು, ಸದ್ಬ
ಳಕೆಗೆ ಮುಂದಾಗಬೇಕೆಂದರಲ್ಲದೆ, ವಿಜೇತ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು.
ಅದ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಳ ಅಧ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಮಾತನಾಡಿ, ನಮ್ಮ ಗೋಕಾಕ ನಾಡು ವಿಶ್ವ ಮಟ್ಟದ ಸ್ಥಾನ,ಮಾನಗಳನ್ನು ಗಳಿಸುವಲ್ಲಿ ಸಫಲರಾಗುತ್ತಿದ್ದು, ನಮ್ಮ ನೆಲದ ಶಕ್ತಿ ಇದಾಗಿದೆ ಎಂದರು.
ವೇದಿಕೆಯಲ್ಲಿ ಚಂದ್ರಪ್ಪ ಗಸ್ತಿ, ರಾಜು ಇರಪನ್ನಗೋಳ, ಶಿವಾನಂದ ನಾಯಕ, ಗೌಸ್ ಮೋಮಿನ್ ಚಂದ್ರಪ್ಪಾ ಪೂಜೇರಿ, ಬಾಳಪ್ಪ ನಾಯ್ಕ, ಮದಾರಸಾಬ ದೇಸಾಯಿ, ನಿರ್ವಾಣಿ ಹೊಂಕಳಿ, ಬಸನಗೌಡಾ ಪಾಟೀಲ, ಪಪ್ಪು ಬೊಂಬ್ರಿ, ರಾಜೇಸಾಬ ಹುಕ್ಕೇರಿ, ಗೋಪಾಲ ಗೌಡಪ್ಪಗೋಳ, ಬಸವರಾಜ ಎಲಿಬಳ್ಳಿ ಸೇರಿದಂತೆ ಪ್ರಮುಖರು, ಮುಖಂಡರುಗಳು ಉಪಸ್ತಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ
ಸುಮಾರು ೨೦ ಕ್ಕೂ ಹೆಚ್ಚು ವಿವಿಧ ಗ್ರಾಮಗಳ ತಂಡಗಳಲ್ಲಿ, ನಾಲ್ಕು ಬಹುಮಾನಗಳು ವಿಜೇತರಿಗೆ ಕೊಡಮಾಡಲಾಯಿತು. ಭೀಮಗೌಡಾ ಪೊಲೀಸಗೌಡರರಿಂದ ಕೊಡಮಾಡಿದ ರೂ ೧೦,೦೦೧ ಪ್ರಥಮ ಬಹುಮಾನ, ಬಸವರಾಜ ಹರಿಜನ ಕೊಡಮಾಡಿದ ೭೦೦೧, ಮಾರುತಿ ಬೊಂಬ್ರಿ ಕೊಡಮಾಡಿದ ರೂ ೫೦೦೧ ಕ್ರಮೇಣ
ಪ್ರಥಮ ಸ್ಥಾನ ಮಲ್ಲಾಪುರದ ಮಹಾತ್ಮಾಗಾಂಧಿ ಎ ತಂಡ, ದ್ವಿತೀಯ ಸ್ಥಾನ ಬಸ್ಸಾಪುರದ ಸೀಮೆವ್ವಾ ತಂಡ, ತೃತೀಯ ಸ್ಥಾನ ಸುಳಧಾಳದ ಜೈ ಹನುಮಾನ ತಂಡ
ನಾಲ್ಕನೇ ಬಹುಮಾನ ರೂ ೩೦೦೧ ಸ್ಥಾನ ಮಲ್ಲಾಪುರ ಎಸ್ ಎ ಗ್ರಾಮದ ಮಹಾತ್ಮಾಗಾಂಧಿ ಬಿ ತಂಡ ಪಡೆದವು. ಅತ್ಯುತ್ತಮ ಆಟಗಾರನೆಂದು ಶಿವು ಕರೆಲ್ಲಪ್ಪಗೋಳ,ಗೆ ನೀಡಲಾಯಿತು.
ಕಬಡ್ಡಿ ಪ್ರೇಮಿಗಳು, ಯುವಕರು, ಸುತ್ತಮುತ್ತಲಿನ ಗ್ರಾಮಸ್ತರು ಉಪಸ್ಥಿತರಿದ್ದರು.
ಸುರೇಶ ಉರಬಿನಹಟ್ಟಿ





