ವಿಷಯ: ಆರ್ ಸಿ ಯು ಬೆಳಗಾವಿಯ 12 ನೇಯ ಘಟಿಕೋತ್ಸವದ ಸಮಾರಂಭದಲ್ಲಿ ಯಮನಪ್ಪ ಕೆಳಗೇರಿಗೆ ಡಾಕ್ಟರೇಟ್ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ 03-12-2024 ರಂದು ಪ್ರದಾನ ಮಾಡಲಾಯಿತು.
ಇವರು ಮೂಲತಃ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಚನ್ನಪ್ಪ ಕೆಳಗೇರಿ ಮತ್ತು ಮಲ್ಲವ್ವ ಕೆಳಗೇರಿ ಅವರು ಮಗ ಯಮನಪ್ಪ ಕೆಳಗೇರಿ ಇವರು ಬಡ ಕುಟುಂಬದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಪದವಿಯಾದ ಡಾಕ್ಟರೇಟ್ ಪದವಿಯನ್ನು ತಮ್ಮ ಮುಡಿಗೆ ಏರಿಸಿ ಕೊಂಡಿದ್ದಾರೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ 12 ನೇಯ ಘಟಿಕೋತ್ಸವದ ಸಮಾರಂಭದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಪಿ ಎಚ್ ಡಿ ಪದವಿಯನ್ನು ಪ್ರಧಾನ ಮಾಡಲಾಯಿತು.
ಇವರು ಈ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಿತ್ತೂರಿನಲ್ಲಿ ಕಾರ್ಯ ನಿರ್ವಹಿಸಿ ,ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿಂದಗಿಯಲ್ಲಿ ವಾಣಿಜ್ಯ ಶಾಸ್ತ್ರ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ ಆರ್ ಸಿ ಎಸ್ ಕಾಲೇಜು ಬೈಲಹೊಂಗಲದ ನಿವೃತ್ತ ಪ್ರಾಂಶುಪಾಲರಾದ ಡಾ..ವಾಯ್ ಜಿ ಬಾಳಿಗಟ್ಟಿ ಅವರ ಮಾರ್ಗದರ್ಶನದಲ್ಲಿ ಪ್ರಾಬ್ಲಮ್ಸ್ ಆಂಡ್ ಪ್ರೋಸ್ಪೆಕ್ಟ್ಸ ಆಫ್ ಅನ್ಸಿಲರಿ ಇಂಡಸ್ಟ್ರಿಜ್ ವಿತ್ ಸ್ಪೇಷಿಯಲ್ ರೆಪರನ್ಸ ಟು ಬೆಳಗಾವಿ ಜಿಲ್ಲೆ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದರು.
ಇವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ಕುಟುಂಬಸ್ಥರು, ವಣ್ಣೂರ ಗ್ರಾಮದ ಗುರು ಹಿರಿಯರು ಮತ್ತು ಸ್ನೇಹಿತ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.






