
25th August 2025
ಸೂರ್ಯ ಸಂಘರ್ಷ ಬೆಳಗಾವಿ: 2025-26ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿ ಯಾತ್ರೆಗೆ ದಿನಾಂಕ: 30-09-2025 ರಿಂದ 04-10-2025ರವರೆಗೆ ಪ್ರಯಾಣಿಸಲು ಹಾಗೂ ಹಿಂದಿರುಗಿ ಬರುವ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ದೀಕ್ಷಾಭೂಮಿ ಸಂದರ್ಶಿಸಲು ಬಯಸುವ ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ https://swd.karnataka.gov.in ಮೂಲಕ 9 ಸೆಪ್ಟೆಂಬರ್ 2025ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವರದಿಗಾರರು: *ಜಗದೇವ ಪೂಜಾರಿ*
14th August 2025
ಸೂರ್ಯ ಸಂಘರ್ಷ: ಬೆಳಗಾವಿ:13 ಆಗಸ್ಟ್ 2025: ಭಾರತದ ನಂ.1 ಫರ್ನಿಚರ್ ಬ್ರಾಂಡ್ ಆಗಿರುವ ರಾಯಲ್ಓಕ್ ಫರ್ನಿಚರ್ ಸಂಸ್ಥೆಯು ಬೆಳಗಾವಿಯಲ್ಲಿ ತನ್ನ ಹೊಸ ಮಳಿಗೆಯನ್ನು ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಿದೆ.
ಈ ಮಳಿಗೆ ಉದ್ಘಾಟನಾ ಸಂದರ್ಭದಲ್ಲಿ ರಾಯಲ್ಓಕ್ ಇನ್ಕಾರ್ಪೊರೇಶನ್ ಪ್ರೈ. ಲಿಮಿಟೆಡ್ನ ಅಧ್ಯಕ್ಷ ಶ್ರೀ ವಿಜಯ್ ಸುಬ್ರಮಣಿಯಂ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಥನ್ ಸುಬ್ರಮಣಿಯಂ ಉಪಸ್ಥಿತರಿದ್ದರು. ರಾಯಲ್ಓಕ್ ನ ಫ್ರಾಂಚೈಸ್ ಹೆಡ್ ಶ್ರೀ ಕಿರಣ್ ಛಾಬ್ರಿಯಾ, ವಿಷುವಲ್ ಮರ್ಚಂಡೈಸಿಂಗ್ ಮತ್ತು ಹೊಸ ಸ್ಟೋರ್ ಓಪನಿಂಗ್ ವಿಭಾಗದ ಹೆಡ್ ಶ್ರೀ ತಮ್ಮಯ್ಯ ಕೊಟೇರ, ಫ್ರಾಂಚೈಸ್ ಆಪರೇಷನ್ ಹೆಡ್ ಶ್ರೀ ಮಹೇಶ್ ಪಂಡಿತ್, ಫ್ರಾಂಚೈಸ್ ಮ್ಯಾನೇಜರ್ ಶ್ರೀ ಅರುಣ್ ಗೌಡ ಮತ್ತು ಫ್ರಾಂಚೈಸ್ ಪಾಲುದಾರರಾದ ಶ್ರೀ ಸುನೀಲ್ ಕುಮಾರ್, ಶ್ರೀಮತಿ ಅನು ಬಾಯಿ, ಶ್ರೀ ರಾಘವೇಂದ್ರ ಹಾಗೂ ಶ್ರೀಮತಿ ಶ್ವೇತಾ ಅವರು ಭಾಗವಹಿಸಿದ್ದರು.
ಈ ಹೊಸ ಮಳಿಗೆಯು 12,000 ಚದರ ಅಡಿಗಳಷ್ಟು ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಇಲ್ಲಿ ಮನೆಯ ಪ್ರತೀ ಭಾಗಕ್ಕೆ ಸಲ್ಲುವ ಪೀಠೋಪಕರಣಗಳ ವ್ಯಾಪಕ ಶ್ರೇಣಿ ಲಭ್ಯವಿದೆ. ಲಿವಿಂಗ್ ರೂಮ್, ಬೆಡ್ರೂಮ್, ಡೈನಿಂಗ್ ಏರಿಯಾ, ಅಧ್ಯಯನ ಸ್ಥಳ ಮತ್ತು ಕಚೇರಿ, ಔಟ್ಡೋರ್, ಹೋಮ್ ಡೆಕೋರ್, ಹಾಸಿಗೆಗಳು ಹೀಗೆ ವಿವಿಧ ವಿಭಾಗಗಳ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಇದೀಗ ಬೆಳಗಾವಿಯ ಮಂದಿ ತಮ್ಮ ಮನೆ ಹತ್ತಿರದಲ್ಲಿಯೇ ಅತ್ಯುತ್ತಮ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ಕೊಂಡುಕೊಳ್ಳಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ರಾಯಲ್ಓಕ್ ಫರ್ನಿಚರ್ನ ಅಧ್ಯಕ್ಷ ಶ್ರೀ ವಿಜಯ್ ಸುಬ್ರಮಣಿಯಂ ಅವರು, “ಕರ್ನಾಟಕದಲ್ಲಿ ಈಗಾಗಲೇ 60ಕ್ಕೂ ಹೆಚ್ಚು ಮಳಿಗೆಗಳನ್ನು ಮತ್ತು ದೇಶದಾದ್ಯಂತ 200 ಮಳಿಗೆಗಳ ಜಾಲವನ್ನು ಹೊಂದಿರುವ ನಾವು ಬೆಳಗಾವಿಯಲ್ಲಿ ಹೊಸ ಮಳಿಗೆ ಆರಂಭಿಸಲು ಸಂತೋಷ ಪಡುತ್ತೇವೆ. ಗ್ರಾಹಕರಿಗೆ ಅತ್ಯುತ್ತಮ ಪೀಠೋಪಕರಣ ಉತ್ಪನ್ನಗಳು ಮತ್ತು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಈ ಮಳಿಗೆ ತೆರೆಯಲಾಗಿದೆ. ಬೆಳಗಾವಿಯ ಜನರು ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರಿಗೆ ತಮ್ಮ ಕನಸಿನ ಮನೆಯನ್ನು ರೂಪಿಸಲು ಬೇಕಾದ ಉತ್ಪನ್ನಗಳನ್ನು ಒದಗಿಸಲು ನಾವು ಕಾತರದಿಂದ ಕಾಯುತ್ತಿದ್ದೇವೆ” ಎಂದರು.
ಈ ಮಳಿಗೆಯಲ್ಲಿ ವಿಶೇಷವಾದ ‘ಕಂಟ್ರಿ ಸ್ಟೋರ್’ ವಿಭಾಗವಿದ್ದು, ಇಲ್ಲಿ ಅಮೆರಿಕಾ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಫರ್ನಿಚರ್ ಗಳನ್ನು ಪ್ರದರ್ಶಿಸಲಾತ್ತದೆ. ರಾಯಲ್ಓಕ್ ಭಾರತದಾದ್ಯಂತ ಇರುವ ಎಲ್ಲಾ ಮಹಾ ನಗರಗಳು ಮತ್ತು 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಉಪಸ್ಥಿತಿ ಹೊಂದಿದ್ದು, 10 ಮಿಲಿಯನ್ ಗಳಿಗೂ ಹೆಚ್ಚು ಮಂದಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತ್ನಿಂದ ನಾಗಾಲ್ಯಾಂಡ್ವರೆಗೆ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ವಿಳಾಸ: ಬಾಕ್ಸೈಟ್ ರಸ್ತೆ, ರಿಲಯನ್ಸ್ ಮಾಲ್ ಪಕ್ಕದಲ್ಲಿ, ಕಮಲೇಶ್ವರ ನಗರ, ಬೆಳಗಾವಿ ದೂರವಾಣಿ ಸಂಖ್ಯೆ: 9740780714
ವರದಿಗಾರರು: ಜಗದೇವ ವಾಸುದೇವ ಪೂಜಾರಿ
13th August 2025
*ಸೂರ್ಯ ಸಂಘರ್ಷ* ಬೆಳಗಾವಿ : ದಿನಾಂಕ 9,10,11 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದ ಕ್ರೀಡಾ ವಸತಿ ಶಾಲೆಯಲ್ಲಿ ಜರುಗಿದ 42 ನೇ ಕರ್ನಾಟಕ ಜೂಡೋ ಚಾಂಪಿಯನ್ಶಿಪ್ 2025-26 ರಲ್ಲಿ ಬೆಳಗಾವಿ ಜಿಲ್ಲೆ ಮುತ್ಯಾನಟ್ಟಿ ಗ್ರಾಮದ ಅಭಿಮನ್ಯು ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡಿದ್ದಾರೆ ಮಿನಿ ಬಾಲಕರ ವಿಭಾಗದಲ್ಲಿ ಋತ್ವಿಕ ಬೆಳಗಾವಿ 25kg ಪ್ರಥಮ ಸ್ಥಾನ, ಮಡಿವಾಳಪ್ಪ ಬೆಳಗಾವಿ 25 kg ದ್ವಿತೀಯ ಸ್ಥಾನ, ಸಾಹಿಲ ನಾಯಕ 30kg ಪ್ರಥಮ ಸ್ಥಾನ, ಋತ್ವಿಕ ಸನದಿ 35Kg ಪ್ರಥಮ ಸ್ಥಾನ ಹಾಗೂ ಮಿನಿ ಬಾಲಕಿಯರ ವಿಭಾಗದಲ್ಲಿ ಶ್ರೀನಿಕಾ ನಾಯಕ 23Kg ಪ್ರಥಮ ಸ್ಥಾನ, ಸಾನ್ವಿ ನಾಯಕ 23 Kg ತೃತೀಯ ಸ್ಥಾನ, ಶ್ರೇಯಾ ಬೆಳಗಾವಿ 25 Kg ಪ್ರಥಮ ಸ್ಥಾನ, ಮತ್ತು ಸಬ್-ಜೂನಿಯರ ಬಾಲಕರ ವಿಭಾಗದಲ್ಲಿ ಪ್ರದೀಪ ನಾಯಕ 30 kg ದ್ವಿತೀಯ ಸ್ಥಾನ, ಮೋಹಿತ ಬಡಕನ್ನವರ್ 35 Kg ತೃತೀಯ ಸ್ಥಾನ, ಸಬ್-ಜೂನಿಯರ ಬಾಲಕಿಯರ ವಿಭಾಗದಲ್ಲಿ ಗಾಯತ್ರಿ ಬೆಳಗಾವಿ 28 Kg ಪ್ರಥಮ ಸ್ಥಾನ,ಪುಷ್ಪಾ ಬೆಳಗಾವಿ 28 Kg ತೃತೀಯ ಸ್ಥಾನ, ಬಿಂದು ಗೊರವ 32Kg ಪ್ರಥಮ ಸ್ಥಾನ , ರಂಜನಾ ನಾಯಕ 36 Kg ಪ್ರಥಮ ಸ್ಥಾನ, ಭೂಮಿಕಾ ಬೆಳಗಾವಿ 40 Kg ದ್ವಿತೀಯ ಸ್ಥಾನ ಹಾಗೂ ಕ್ಯಾಂಡೆಟ್ ಬಾಲಕರ ವಿಭಾಗದಲ್ಲಿ ಸಂದೀಪ್ ನಾಯಕ 55 Kg ಪ್ರಥಮ ಸ್ಥಾನ, ಗೌತಮ ಬೆಳಗಾವಿ 55 Kg ತೃತೀಯ ಸ್ಥಾನ ಕ್ಯಾಂಡೆಟ್ ಬಾಲಕಿಯರ ವಿಭಾಗದಲ್ಲಿ ರಕ್ಷಿತಾ ನಾಯಕ 40 Kg ಪ್ರಥಮ ಸ್ಥಾನ ಪಡೆದಿರುತ್ತಾರೆ.
ಮಿನಿ ಬಾಲಕರು ಹಾಗೂ ಬಾಲಕಿಯರು ವಿನ್ನರ ಹಾಗೂ ರನ್ನರ ಅಪ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಸಬ್ ಜೂನಿಯರ್ ಬಾಲಕಿಯರು ವಿನ್ನರ ಆಗಿರುತ್ತಾರೆ. ತರಬೇತಿದಾರರಾದ ಶ್ರೀ ಯಾಲಪ್ಪ. ಎಸ್. ಗೊರವ ಮತ್ತು ಶ್ರೀ ವಿಷ್ಣು. ಎಸ್. ಗೊರವ ಹಾಗೂ ಮುತ್ಯಾನಟ್ಟಿ ಗ್ರಾಮದ ಗುರು ಹಿರಿಯರು ಕ್ರೀಡಾಪಟುಗಳಿಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.
*ವರದಿಗಾರರು:ಜಗದೇವ ವಾಸುದೇವ ಪೂಜಾರಿ*
10th August 2025
*ಸೂರ್ಯ ಸಂಘರ್ಷ:* ರಾಮದುರ್ಗ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವ ಅಧಿಕಾರಿಗಳ ಕಾರ್ಯಾಲಯ ರಾಮದುರ್ಗ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಹಣಮಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಜರುಗಿತ್ತು .
ಈ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನಾಪುರ ಡಿ ಎಲ್ ಟಿ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಮಹಿಳೆಯರು ವಾಲಿಬಾಲ್ ಪ್ರಥಮ ಸ್ಥಾನ, ಪುರುಷರು ವಾಲಿಬಾಲ್ ಪ್ರಥಮ ಸ್ಥಾನ, ಹಾಗೂ ಪುರುಷರು ಕಬಡ್ಡಿ ದ್ವಿತೀಯ ಸ್ಥಾನ, ಹಾಗೂ ಮಹಿಳೆಯರು ಥ್ರೋ ಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಾಗೂ ವೈಯಕ್ತಿಕ ಇವಾಗ ಅಕ್ಷತಾ ಲಮಾಣಿ ಇವಳು ಎತ್ತರ ಜಿಗಿತ ಪ್ರಥಮ, ಗುಂಡು ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ, ತುಳಸವ್ವ ಲಮಾಣಿ ಇವಳು ಗುಂಡು ಎಸೆತ ಪ್ರಥಮ ಸ್ಥಾನ, ಚಕ್ರ ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ, ಗಿರೀಶ್ ಲಮಾಣಿ ಇವರು ಗುಂಡು ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ, ಅರ್ಜುನ್ ಲಮಾಣಿ ಎತ್ತರ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ, ಸಚಿನ್ ಲಮಾಣಿ ಇವರು ಚಕ್ರ ಎಸೆತ ದ್ವಿತೀಯ ಸ್ಥಾನ ಹಾಗೂ ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ ಚನ್ನಾಪುರ ಡಿಎಲ್ಟಿ ಶಾಲೆಯ ಮಕ್ಕಳು ಶಾಲೆಯ ಕೀರ್ತಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವರದಿಗಾರರು:ಜಗದೇವ ವಾಸುದೇವ ಪೂಜಾರಿ.
10th August 2025
ಬೆಳಗಾವಿ : ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ವಿಶೇಷ ಅನುದಾನದಲ್ಲಿ ರಾಮತೀರ್ಥ ಹೊಸ ಬಸ್ ತಂಗುದಾನ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಕಾರ್ಯ ನಡೆದಿದ್ದು, ಬಿಜೆಪಿಯ ಸಂಸದರು ಈರಣ್ಣ ಕಡಾಡಿ ಹಾಗೂ ನಗರ ಸೇವಕರಾದ ಹನುಮಂತ ಕೊಂಗಾಲಿ ಅವರ ಕಾರ್ಯಕ್ಕೆ ಸ್ಥಳೀಯರು ಧನ್ಯವಾದ.
ಜನರ ಬಹುದಿನದ ಬೇಡಿಕೆ ಹಾಗೂ ಕೋರಿಕೆಯ ಬೇಡಿಕೆ ರಾಮತೀರ್ಥ ನಗರದ ನಗರ ಸೇವಕರಾದ ಹಣಮಂತ ಕೊಂಗಾಲಿ ಹಾಗೂ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಬಸವೇಶ್ವರ ಬಡಾವಣೆಯ ಹಿರಿಯರು ಸೇರಿ ಇಂದು ಈ ಶಂಕುಸ್ಥಾಪನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು ವಿಶೇಷವಾಗಿತ್ತು.
ರಾಮತೀರ್ಥ, ದಿನಾಂಕ 10/8/2025 ರಂದು ಮುಂಜಾನೆ ಸಮಯ: 10 ಗಂಟೆಗೆ ಕಾರ್ಯಸಿದ್ಧಿ ಶೀ ಆಂಜನೇಯ ದೇವಸ್ಥಾನ ಸಮಯ: 11:00 ಗಂಟೆಗೆ ಶೀ ಬಸವೇಶ್ವರ ಬಡಾವಣೆ ಕ್ರಾಸ್ (ksrtc buss rood) ರಾಮತೀರ್ಥ ನಗರದಲ್ಲಿ ಈ ವಿಶೇಷ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ವೇಳೆ ರಾಮತೀರ್ಥ ನಗರದ ಬಹುಪಾಲು ರಾಹವಾಸಿಗಳು ಭಾಗವಹಿಸಿದ್ದರು.
9th August 2025
ಬೆಳಗಾವಿ : ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು.
ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಘಟನೆ.
ಅನಿತಾ ನೀಲದಕರ್(25) ಎಂಬ ಗ್ರಹಿಣಿ ಅನುಮಾನಾಸ್ಪದ ಸಾವು.
ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಅನಿತಾ ಪತ್ತೆ.
ಗಂಡ ನಿಲೇಶ್ ಕೊಲೆ ಮಾಡಿ ನೇಣು ಬಿಗಿದಿದ್ದಾನೆ ಎಂದು ಅನಿತಾ ಕುಟುಂಬಸ್ಥರ ಆರೋಪ.
ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.
ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ.
ಪಿಜ್ಜಾ ಹಟ್ ನಲ್ಲಿ ಕೆಲಸ ಮಾಡುತ್ತಿದ್ದ ಅನಿತಾ, ಈ ವೇಳೆ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದ ಜೋಡಿ.
ಸ್ಥಳಕ್ಕೆ ಎಸಿಪಿ ಸೇರಿ ಗ್ರಾಮೀಣ ಠಾಣೆ ಸಿಬ್ಬಂದಿ ಭೇಟಿ ಪರಿಶೀಲನೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ವರದಿಗಾರರು : ವಿಶಾಲ ಎಲ್
9th August 2025
ಬೆಳಗಾವಿ : ಲೋಕಾಯುಕ್ತರಲ್ಲಿ ಸಲ್ಲಿಸುವ ದೂರುಗಳ ನೋಂದಣಿಯಲ್ಲಿ ಜವಾಬ್ದಾರಿಯುತವಾಗಿ, ಸರಿಯಾದ ದಾಖಲೆಗಳೊಂದಿಗೆ, (ಅಪ್ಪಿಡೆವಿಟ್ ಮಾಡಿದ) ವ್ಯವಸ್ಥಿತವಾಗಿರಬೇಕು, ದೂರು ದಾಖಲಾದ ಕೂಡಲೇ ತಕ್ಷಣ ಕ್ರಮ ತಗೆದುಕೊಳ್ಳಲು ಆಗೋಲ್ಲ, ತನಿಖಾ ಹಂತಗಳಿರುತ್ತವೆ, ಯಾರಾದರೂ ನಮಗೆ ದಾಖಲೆಗಳನ್ನು ಸಾಕ್ಷಿಗಳನ್ನು, ಆಧಾರಗಳನ್ನು ನೀಡಿದ್ದೆ ಆದರೆ ನಾವು ಸೋಮೊಟೊ ದೂರು ದಾಖಲು ಮಾಡುತ್ತೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಅವರು ಹೇಳಿದ್ದಾರೆ..
ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನ್ಯಾಯ ಮೂರ್ತಿಗಳು, ಲೋಕಾಯುಕ್ತರಿಗೆ ನೀಡುವ ದೂರುಗಳು ಅರ್ಧಮರ್ಧ ಇರಬಾರದು, ಯಾರೇ ಆದರೂ ಸರಿಯಾದ ದಾಖಲೆಗಳೊಂದಿಗೆ, ವ್ಯವಸ್ಥಿತವಾಗಿ ದೂರು ನೋಂದಣಿ ಮಾಡಿದ್ದಲ್ಲಿ, ಸರಿಯಾದ ಮಾರ್ಗದಲ್ಲಿ ತನಿಖೆ ಆಗಿ, ಸೂಕ್ತ ಫಲಿತಾಂಶವೇ ಬರುವದು ಎಂದು ಹೇಳಿದ್ದಾರೆ, ಹಗಲು ರಾತ್ರಿ ಎನ್ನದೇ ಲೋಕಾಯುಕ್ತ ಕೆಲಸ ಮಾಡುತ್ತದೆ, ನಮ್ಮ ಕೆಲಸದಿಂದ ಸಾರ್ವಜನಿಕರು ಸಂತಸವಾದಲ್ಲಿ ಅದಕ್ಕಿಂತ ದೊಡ್ಡ ಖುಷಿ ಹೆಮ್ಮೆ ನಮಗೆ ಬೇರೊಂದಿಲ್ಲ ಎಂದಿದ್ದಾರೆ..
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಪರಿಶೀಲನೆಯ ಬಗ್ಗೆ ಮಾಹಿತಿ ನೀಡಿದ ನ್ಯಾಯಮೂರ್ತಿಗಳು, ದೂರುಗಳ ಆಧಾರದ ಮೇಲೆ ಕೆಲ ಕಚೇರಿಗಳನ್ನು ಆದುಕೊಂಡು ಪರಿಶೀಲನೆ ಮಾಡಿದ್ದೇವೆ, ಹಾಸ್ಪಿಟಲ್ಸ್, ಪಾಲಿಕೆ, ನಗರಸಭೆಯಂತ ಸ್ಥಳೀಯ ಸಂಸ್ಥೆ, ಕಂದಾಯ ಇಲಾಖೆ, ಭೂಮಾಪನ, ಸ್ಮಾರ್ಟ್ ಸಿಟಿ, ನೋಂದಣಿ ಕಚೇರಿ ನಮ್ಮ ಟಾರ್ಗೆಟ್ ಆಗಿದ್ದವು, ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿನ ಕಾರ್ಯವೈಕರಿಯ ಬಗ್ಗೆ ನಮಗೆ ಅಸಮಾಧಾನ ಇದೆ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನು ಪ್ರಕಾರ ಬೇರೆಯವರ ಆಸ್ತಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ, ಬೇರೆಯವರ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿರುವ ಮೂರು ಪ್ರಕರಣಗಳನ್ನು ಲೋಕಾಯುಕ್ತ ದಾಖಲಿಸಿಕೊಂಡು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.
ಭೂ ದಾಖಲೆ ಇಲಾಖೆಯಲ್ಲಿ ಮೂರುವರೆ ಸಾವಿರ ಕೇಸಗಳು ಬಾಕಿ ಇವೆ. ನಿಧಾನ ಯಾಕೆ ಎಂದು ಕೇಳಿದರೆ ಸಿಬ್ಬಂದಿಗಳ ಕೊರತೆಯಿದೆ ಎನ್ನುತ್ತಾರೆ. ಇದರಿಂದ ಸಾರ್ವಜನಿಕರ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದರು.
ಜಿಲ್ಲಾಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು ಮಳೆಗೆ ಗೋಡೆಗಳು ಸೋರುತ್ತಿವೆ. ಪಕ್ಕದಲ್ಲೇ ಹೆರಿಗೆ ವಾಡ್೯ಗಳಿವೆ, ಅಪಘಾತ ಸಂಭವಿಸಿದರೆ ಯಾರು ಹೊಣೆ? ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿಯೂ ಇದೇ ಸಮಸ್ಯೆ ಇದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಸುತ್ತೇವೆ, ಈಗಾಗಲೇ ಹಿಂದೆ ಇದ್ದ ಕೆಲ ಪ್ರಕರಣಗಳನ್ನು ಮುಗಿಸಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ, ಪಾಲಿಕೆಯಲ್ಲಿ ಕೆಲ ವಿಷಯ ನಿರ್ವಾಹಕರು ಈ ವಿಷಯ ನಂಗೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಅವರ ಮೇಲೆ ವೈಯಕ್ತಿಕವಾಗಿ ಕೇಸ್ ದಾಖಲಿಸಲಾಗಿದೆ ಎಂದರು.
ಇನ್ನು ಗೋಕಾಕಿನ ಎಡಿಎಲ್ಆರ್ ಕಚೇರಿಯಲ್ಲಿ ಆರು ಜನ ಅನಧಿಕೃತವಾಗಿ ಖುರ್ಚಿ ಹಾಕಿಕೊಂಡು ಕುಳಿತಿದ್ದರು, ಅಲ್ಲಿಯ ಅಧಿಕಾರಿಯೇ ಅವರಿಗೆ ಸಂಬಳ ಕೊಡುತ್ತಾನೆ, ಬೆಳಗಾವಿ ಸ್ಮಾರ್ಟ್ ಸಿಟಿ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇವೆ, ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಬಹಳ ಇಲಾಖೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ, ಅದರ ಬಗ್ಗೆ ಇಲ್ಲಿ ಬಹಳ ಪ್ರಸ್ತಾಪ ಬೇಡ, ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಲೋಕಾಯುಕ್ತದಲ್ಲಿ ಈಗ 25ಸಾವಿರ ಪ್ರಕರಣಗಳಿವೆ, ನಾನು ಬಂದಾಗ 13 ಸಾವಿರ ಇದ್ದ ಪ್ರಕರಣಗಳಲ್ಲಿ 6 ಸಾವಿರ ಕ್ಲಿಯರ್ ಮಾಡಿದ್ದು, ಲೋಕಾಯುಕ್ತ ಸಂಸ್ಥೆ ಮೇಲೆ ಎಲ್ಲರ ಭರವಸೆ ಇರುವದರಿಂದ ಎಲ್ಲರೂ ದೂರುಗಳನ್ನು ನೀಡುತ್ತಾರೆ, 25ಸಾವಿರ ದುರುಗಳಿವೆ, ಕೇವಲ 35 ನ್ಯಾಯಾದೀಶರಿದ್ದೇವೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸಿಬ್ಬಂದಿಗಳನ್ನು ನೇಮಿಸಲು ಸರ್ಕಾರಕ್ಕೆ ಬರೆದಿದ್ದೇವೆ, ನಮ್ಮ ಸಮಸ್ಯೆ, ಕೊರತೆಯನ್ನು ಹೇಳುವ ಅವಶ್ಯಕತೆ ಇಲ್ಲಾ, ನಾವು ಹಗಲು ರಾತ್ರಿ ಕೆಲಸ ಮಾಡುತ್ತೇವೆ, ಕಡತಗಳನ್ನು ಮನೆಗೆ ತಗೊಂಡು ಹೋಗಿ ಕೆಲಸ ಮಾಡುತ್ತೇವೆ, ಎಷ್ಟೋ ಸಲ ನಮ್ಮ ಸಿಬ್ಬಂದಿಗಳು ದೂರುದಾರರ ಅಥವಾ ಬೇರೆಯವರ ಕೆಲಸ ಮಾಡಿಕೊಟ್ಟಾಗ ಸಿಗುವ ಹೆಮ್ಮೆ, ಸಂತೋಷ ಯಾವುದರಿಂದಲೂ ಸಿಗೋಲ್ಲ ಎಂದದ್ದು ಉಂಟು, ಎಲ್ಲರೂ ಆ ರೀತಿಯಲ್ಲಿ ಸಾರ್ವಜನಿಕರು ಜಾಗೃತರಾಗುವ ಕಾರ್ಯ ಮಾಡಬೇಕೆಂದರು.
*ವರದಿಗಾರರು ವಿಶಾಲ್ ಎಲ್*
8th August 2025
ಬೆಂಗಳೂರು: ಧರ್ಮಸ್ಥಳದಲ್ಲಿ ಪತ್ರಕರ್ತರು ಹಾಗೂ ಯೂಟ್ಯೂಬರ್ಗಳ ಮೇಲೆ ಹಲ್ಲೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲಾಲ್ಬಾಗ್ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ದೆಹಲಿಯಲ್ಲಿ ಇಂಡಿಯಾ ರಾಜಕೀಯ ಮೈತ್ರಿಕೂಟದ ನಾಯಕರಿಗೆ ಔತಣಕೂಟ ಆಯೋಜಿಸಲಾಗಿದೆ. ಅದರಲ್ಲಿ ಭಾಗವಹಿಸಲು ನಾನು ದೆಹಲಿಗೆ ತೆರಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರ ಮತಗಳ್ಳತನದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
8th August 2025
ನೇಸರಗಿ-ವಿದ್ಯಾರ್ಥಿಗಳು ಮೊಬೈಲ್ ಬದಿಗಿಟ್ಟು ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಚಾರಿತ್ರಿಕ ಕಾದಂಬರಿಕಾರ ಯ.ರು.ಪಾಟೀಲ ಹೇಳಿದರು.
ಗ್ರಾಮದ ನೇಸರಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗುರುವಾರ ದಿ.೭ ರಂದು ಪತ್ರಕರ್ತ ಹಾಗೂ ಸಾಹಿತಿ ಸಿ.ವಾಯ್.ಮೆಣಸಿನಕಾಯಿ ಅವರು ರಚಿಸಿದ “ನಾ ಹೋದರೆ ನಿಮಗೆ ಸುಖ” ಮತ್ತು “ಸಾಹಿತ್ಯ ಸಂಪದ” ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಪದ ಕೃತಿ ಪರಿಚಯಿಸಿ ಮಾತನಾಡಿ, ಇಂದಿನ ಯುವಕರು ಕೆಟ್ಟ ಹವ್ಯಾಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆಯ ಹವ್ಯಾಸಗಳಾದ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡ ಅಂಕಿಗಳ ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದರು.
ನಾ ಹೋದರೆ ನಿನಗೆ ಸುಖ ಕೃತಿಯನ್ನು ಪರಿಚಯಿಸಿ ಕಾದರವಳ್ಳಿ ಎಸ್.ವಿ.ಕುಲಕರ್ಣಿ ಸರಕಾರಿ ಪ್ರೌಢಶಾಲೆ ಅಧ್ಯಾಪಕ ಡಾ.ಗಜಾನನ ಸೊಗಲನ್ನವರ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿರಬೇಕಾದರೆ ಪುಸ್ತಕಗಳು ಸಹಕಾರಿಯಾಗಿವೆ.ಪುಸ್ತಕ ಓದಿ ಜ್ಞಾನ ಪಡೆದುಕೊಳ್ಳಬೇಕು. ಕನ್ನಡ ಭಾಷೆ ಬೆಳವಣಿಗೆಗೆ ಕನ್ನಡ ಪುಸ್ತಕಗಳು ಹೆಚ್ಚಾಗಿ ಪ್ರಕಟವಾಗಬೇಕು. ನಾ ಹೋದರೆ ನಿನಗೆ ಸುಖ ಕೃತಿ ಬಹುಸಂಖ್ಯಾತ ಜನರಿಗೆ ಇಷ್ಟವಾಗುವ ವಿಷಯ ಹೊಂದಿದೆ ಎಂದರು.
ಸಾಹಿತಿ ಶಿ.ಗು.ಕುಸಗಲ್ಲ ಮಾತನಾಡಿ, ಸಾಹಿತ್ಯ ನಿಂತ ನೀರಲ್ಲ. ಸಾಹಿತಿಗಳಾಗಬೇಕಾದರೆ ಸತತ ಸಾಧನೆ ಮಾಡಬೇಕು. ಹೆಚ್ಚಿನ ಪುಸ್ತಕ ಓದಿ ಜ್ಞಾನ ವಿಕಾಸಗೊಳಿಸಬೇಕೆಂದರು.
ನ್ಯಾಯವಾದಿ ಎಂ.ವಾಯ್.ಸೊಮಣ್ಣವರ ಮಾತನಾಡಿ, ಸಾಹಿತ್ಯ ರಚನೆಗೆ ಬಹಳಷ್ಟು ಶ್ರಮ, ಪ್ರಯತ್ನ ಬೇಕಾಗುತ್ತದೆ. ಸಿ.ವಾಯ್.ಮೆಣಸಿನಕಾಯಿಯರು ಪುಸ್ತಕ ರಚನೆಗಿಳಿದು ಒಳ್ಳೆಯ ಕೃತಿ ಹೊರ ತಂದಿದ್ದಾರೆAದರು.
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಫ್.ಡಿ.ಗಡ್ಡಿಗೌಡರ ಮಾತನಾಡಿ, ಸಿ.ವಾಯ್.ಮೆಣಸಿನಕಾಯಿಯವರು ರಚಿಸಿದ ಕೃತಿಗಳು ಓದಿಸಿಕೊಂಡು ಹೋಗುತ್ತವೆ. ಎಲ್ಲರೂ ಪುಸ್ತಕ ಕೊಂಡು ಓದುವ ಸಂಸ್ಕೃತಿ ಬೆಳೆಸಿಕೊಂಡು ಪುಸ್ತಕ ರಚನೆಕಾರರಿಗೆ ಪ್ರೋತ್ಸಾಹ ನೀಡಬೇಕೆಂದರು.
ಕೃತಿ ರಚನೆಕಾರ ಸಿ.ವಾಯ್.ಮೆಣಸಿನಕಾಯಿ ಮಾತನಾಡಿ ಇಂದು ಬಿಡುಗಡೆಯಾದ ಎರಡು ಕೃತಿಗಳು ಇಂದಿನ ಯುವಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಲ್ಲವು. ಪುಸ್ತಕ ಓದುವದರಿಂದ ದೇಶದ ಇತಿಹಾಸ ಪರಿಚಯ, ಪ್ರಚಲಿತ ವಿದ್ಯಮಾನ ಅರಿಯಲು ಸಹಾಯಕ ಎಂದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿಗಳಾದ ರವೀಂದ್ರ ಬಾನಿ, ಗ್ರಾಮ ಪಂಚಾಯತಿ ಅಧ್ಯಕ್ಷ ವೀರಭದ್ರ ಚೋಬಾರಿ, ಗ್ರಾ.ಪಂ ಸದಸ್ಯರಾದ ತೇಜಪ್ಪಗೌಡ ಪಾಟೀಲ, ಮತ್ತಿಕೊಪ್ಪ ಪಿಕೆಪಿಎಸ್ ಉಪಾದ್ಯಕ್ಷ ಅಡಿವೆಪ್ಪ ಹೊಸಮನಿ, ಬಸವರಾಜ ಬಡಿಗೇರ, ಗಂಗಾಧರ ಬೊಂಗಾಳೆ, ವೀರಭದ್ರ ಅಂಗಡಿ, ಶಿವಲಿಂಗಪ್ಪ ಕಂಠಿ, ಪ್ರಾದ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಡಾ.ಮೀನಾಕ್ಷಿ ಮಡಿವಾಳರ ಸ್ವಾಗತಿಸಿದರು. ಶಿಕ್ಷಕ ಸಂತೋಷ ಪಾಟೀಲ ನಿರೂಪಿಸಿದರು. ಮಂಜುನಾಥ ಕಾಂಬಳೆ ವಂದಿಸಿದರು.
ವರದಿಗಾರರು : ವಿಶಾಲ್ ಎಲ್
7th August 2025
*ಸೂರ್ಯ ಸಂಘರ್ಷ* ವಿಜಯಪುರ :
ಶಾಲಾ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಓರ್ವ ಶಾಲಾ ಬಾಲಕ ಸಾವು. ರಾತ್ರಿ ಶಾಲೆಯ ಮುಂಭಾಗದಲ್ಲಿ ಶವವಿಟ್ಟು ಪೋಷಕರು ಪ್ರತಿಭಟನೆ ವಿಜಯಪುರದ ಯೋಗಾಪುರ ಕಾಲೋನಿಯಲ್ಲಿರೋ ಶ್ರೀ ಸತ್ಯಸಾಯಿ ಬಾಬಾ ಆಂಗ್ಲ ಮತ್ತು ಕನ್ನಡ ಶಾಲೆ ಮುಂಭಾಗ ಪ್ರತಿಭಟನೆ.
5 ನೇ ತರಗತಿಯಲ್ಲಿ ಓದುತ್ತಿದ್ದ ಅನ್ಸ್ ಮೃತಪಟ್ಟ ವಿದ್ಯಾರ್ಥಿ. ಅನ್ಸ್ ತಂದೆ ಬಿಹಾರ ಮೂಲದ ಸುನೀಲ್, ವಿಜಯಪುರದಲ್ಲಿ ಪಾನಿಪುರಿ ವ್ಯಾಪಾರ ಮಾಡ್ತಿದ್ರು. ಶಾಲಾ ಗೇಟ್ ಮುಂಭಾಗದಲ್ಲಿ ಶವವಿಟ್ಟು ಪ್ರತಿಭಟನೆ ಹಿನ್ನೆಲೆ. ಸ್ಥಳದಲ್ಲೇ ಜಮಾಯಿಸಿದ ಜನರು..
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ. ನ್ಯಾಯಕ್ಕಾಗಿ ಪೋಷಕರ ಪಟ್ಟು. ಶಾಲಾ ಶಿಕ್ಷಕರು ಮದ್ಯಪಾನ ಮಾಡ್ತಾರೆ ಅಂತ ಸ್ಥಳೀಯರ ಆರೋಪ. ಹಾಸ್ಟೆಲ್ ವಿದ್ಯಾರ್ಥಿಗಳು ಅನ್ಸ್ ಗೆ ಥಳಿಸಿದ್ದಾರೆ.
ಬಳಿಕ ಪೊಲೀಸರು ಪೋಷಕರ ಮನವೊಲಿಸಿ ವಿದ್ಯಾರ್ಥಿ ಶವ ಸ್ಥಳಾಂತರ ಮಾಡಿದ್ದಾರೆ
ವರದಿಗಾರರು : ವಿಶಾಲ್ ಎಲ್