
7th June 2025
ಮುಖಂಡರಾದ ರಘು ಮಾತನಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಗಳು ಅಡಗಿರುತ್ತದೆ. ಶಿಕ್ಷಕರು ಅದನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಮಾಡುತ್ತಾರೆ. ವಿದ್ಯಾರ್ಥಿಗಳು ಈಗಿನಿಂದಲೇ ಶಿಸ್ತುಭದ್ಧ ಸಮಯ ಪರಿಪಾಲನೆಯನ್ನು ರೂಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬಹುದು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಕೆಂಪರಾಜು ಮಾತನಾಡಿ ಮುಖಂಡ ರಘು ನೋಟ್ ಬುಕ್ ಪುಸ್ತಕಗಳನ್ನು ಉಚಿತವಾಗಿ ಮಕ್ಕಳಿಗೆ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ತಿಳಿಸಿದರು.
ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಮುಜೀಬ್, ಮುಖಂಡರಾದ ರವಿ ,ನಾಗೇಂದ್ರ, ಶಿಕ್ಷಕರು ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು.
3rd December 2024
ತಾಲೂಕಿನ ಅಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೆಂಕಟಚಾಲ ಅವಿರೋಧವಾಗಿ ಆಯ್ಕೆಯಾದರು. ಹಿಂದೆ ಅಧ್ಯಕ್ಷರಾಗಿದ್ದ ಮುದ್ದು ನಾಯಕ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಕಾಂಗ್ರೆಸ್ ಬೆಂಬಲಿತ ಸದಸ್ಯ ವೆಂಕಟಚಲ ಅವರನ್ನು ಹೊರತುಪಡಿಸಿ ಇನ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿ ತೋಟಗಾರಿಕೆ ಇಲಾಖೆಯ ಶಿವರಂಜಿನಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷ ವೆಂಕಟಚಾಲ ಮಾತನಾಡಿ ಸರ್ವ ಸದಸ್ಯರ ಸಹಕಾರದೊಂದಿಗೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಸಹಕಾರದೊಂದಿಗೆ ಅಗರ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿ ಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ರಾಜಮ್ಮ, ಕುಮಾರ ,ಶೋಭಾ, ನಿರ್ಮಲ ,ಮುದ್ದ ನಾಯಕ, ಸುರೇಶ್, ಅನ್ನಪೂರ್ಣ, ನಳಿನ ಕುಮಾರಿ, ನಾಗರಾಜು ,ರಾಣಿ ,ಸ್ವಾಮಿ, ಪಿಡಿಒ ಉಷಾರಾಣಿ , ಮುಖಂಡರುಗಳಾlದ ಅಗರ ವೆಂಕಟೇಶ ಅಗರ ಶಿವಣ್ಣ, ಅಗರ ಲಿಂಗರಾಜು, ಕಿನಕಹಳ್ಳಿ ರಾಚಯ್ಯ
ಸಿಬ್ಬಂದಿಗಳಾದ ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರುಗಳು ಹಾಜರಿದ್ದರು