
26th September 2024
ತುಂಗಾಕಿರಣ ಸುದ್ದಿ
ಕುಷ್ಟಗಿ : ತಾಲೂಕಿನ ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವಿರೋಧವಾಗಿ ಬುಧುವಾರ ಆಯ್ಕೆಯಾಗಿದ್ದಾರೆ.
ಕಂದಕೂರು ಗ್ರಾ.ಪಂ. ಅಧ್ಯಕ್ಷ ಸ್ಥಾನವು ಪರಿಶೀಷ್ಟ ಜಾತಿ (ಎಸ್ ಸಿ) ಮಿಸಲಾತಿಯಿದ್ದು ದುರಗಮ್ಮ ಸತ್ಯಪ್ಪ ಹಾದಿಮನಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಸ್ಥಾನಕ್ಕೆ ಇದ್ದು ಜಯಮ್ಮ ಬಸವರಾಜ ಉಪಲದಿನ್ನಿ ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ತಹಸೀಲ್ದಾರ ಅಶೋಕ ಶಿಗ್ಗಾವಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಒಟ್ಟು 16 ಜನ ಸದಸ್ಯರಲ್ಲಿ 15 ಜನ ಸದಸ್ಯರು ಹಾಜರಿದ್ದರು ಒಬ್ಬ ಸದಸ್ಯರು ಗೈರಾಜರಾಗಿದ್ದರು.
ಸಹಾಯಕ ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆಯ ಅಜೀತ್, ಪಿಡಿಓ ರಮೇಶ ಕಾರ್ಯನಿರ್ವಹಿಸಿದರು.
ವಿಜಯೋತ್ಸವ ಆಚರಣೆ : ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಪಂ ಕಚೇರಿಯ ಹತ್ತಿರ ಬಿಜೆಪಿ ಪಕ್ಷದ ಅಭಿಮಾನಿಗಳು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.
ಇದೇ ವೇಳೆ ಮುಖಂಡರಾದ ಕಂದಕೂರಪ್ಪ ವಾಲ್ಮೀಕಿ, ಚಂದ್ರಹಾಸ ಬಾವಿಕಟ್ಟಿ, ಆಂಜನೇಯ ಹಾದಿಮನಿ, ಬಸವರಾಜ ಉಪಲದಿನ್ನಿ, ಶಿವಪುತ್ರಪ್ಪ, ಮಾರುತಿ, ಶರಣಪ್ಪ ಉಪ್ಪಾರ ಭೀಮಣ್ಣ ಬಿಜಕಲ್, ಸಲಿಂಸಾಬ ಟೆಂಗುಂಟಿ, ಬಸವರಾಜ ದಳಪತಿ, ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಮುಖಂಡರು ಇದ್ದರು.
ತುಂಗಾಕಿರಣ ಸುದ್ದಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ, ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಅವಿರೋಧವಾಗಿ ಬುಧುವಾರ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.