



14th April 2026
ಗದಗ 14: ಗದಗ ತಾಲೂಕ ಕಳಸಾಪೂರ ಗ್ರಾಮದ ಬಸವ ಕೇಂದ್ರದ ವತಿಯಿಂದ ದಿ. 14-04-2026 ರಂದು ಬೆಳಿಗ್ಗೆ 9-30ಕ್ಕೆ ಡಾ. ಬಿ.ಆರ್. ಅಂಬೇಡ್ಕರವರ 135ನೇ ಜಯಂತ್ಯೋತ್ಸವ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರವರ ಭಾವಚಿತ್ರಕ್ಕೆ ಗೌರವಪೂರ್ವಕವಾಗಿ ಪುಷ್ಪಾರ್ಪಣೆ ಮಾಡಲಾಯಿತು.
ವೇದಿಕೆಯ ಮೇಲೆ ಬಸವ ಕೇಂದ್ರದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಖಂಡಮ್ಮನವರ, ಶ್ರೀಮತಿ ಜಯಶ್ರೀ ಖಂಡಮ್ಮನವರ, ಶ್ರೀಮತಿ ಶಿಲ್ಪಾ ಖಂಡಮ್ಮನವರ, ಕು. ಸವಿತಾ ಖಂಡಮ್ಮನವರ, ಪ್ರಶಾಂತ ಖಡಮ್ಮನವರ, ಸಂಗಮೇಶ ಖಂಡಮ್ಮನವರ, ವಿದ್ಯಾ ಪಾಟೀಲ, ಶೃತಿ ಪಾಟೀಲ, ಸೌಮ್ಯ ಹಿರೇಮಠ, ವಿಜಯಲಕ್ಷ್ಮೀ ಓಲೇಕಾರ ಹಾಗೂ ಬೇಸಿಗೆ ಶಿಬಿರದ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು. ನಂತರ ಸಾಮೂಹಿಕವಾಗಿ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನು ಸಾಮೂಹಿಕವಾಗಿ ಎಲ್ಲರು ಪ್ರತಿಜ್ಞಾ ಗೈಯುತ್ತಾ ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇದಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲ ಭೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆಂದು ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ ಪ್ರತಿಜ್ಞಾ ಗೈಯಲಾಯಿತು. ಕೊನೆಗೆ ಡಾ. ಬಿ.ಆರ್. ಅಂಬೇಡ್ಕರವರ ಜಯಘೋಷಣೆಗಳೊಂದಿಗೆ ಹಾಗೂ ಭಾರತಮಾತೆ, ಕನ್ನಡಮಾತೆ, ವಂದೇ ಮಾತರಂ ಜಯಘೋಷಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕೊನೆಗೆ ಅಲ್ಪೋಪಹಾರ ವಿತರಿಸಲಾಯಿತು.