Skip to main content
VIBHINNA BARAHA
News

ಬನಹಟ್ಟಿ ಪ್ರೀಮಿಯರ್ ಲೀಗ್ ಪ್ರಾರಂಭೋತ್ಸವ*

14 Apr 2026

ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಸತತವಾಗಿ ಮೂರನೇ ಬಾರಿಗೆ 'ಬನಹಟ್ಟಿ ಪ್ರೀಮಿಯರ್ ಲೀಗ್' ಆಯೋಜಿಸಿದ್ದು ಎಲ್ಲ ಸಿದ್ಧತೆಯೊಂದಿಗೆ ಕ್ರಿಕೆಟ್ ಲೀಗ್ ಪಂದ್ಯಾವಳಿ ಪ್ರಾರಂಭಿಸಲಾಗಿರುತ್ತದೆ, ಗ್ರಾಮದಲ್ಲಿರುವ ಯುವ ಕ್ರೀಡಾ ಪಟುಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎನ್ನಬಹುದು. 

ಗ್ರಾಮದ ಹಿರಿಯ ಕ್ರೀಡಾ ಪಟು ಶ್ರೀ ಕಳಕಪ್ಪ ರುದ್ರಪ್ಪ ಕೊಪ್ಪದ ರವರು ಮಾತನಾಡಿ ಬೇಸಿಗೆ ಕಾಲದಲ್ಲಿ ಶಾಲಾ ಕಾಲೇಜುಗಳು ರಜೆ ಇರುವ ಹಿನ್ನಲೆ ಮತ್ತು ಗ್ರಾಮದ ಯುವ ರೈತರಿಗೆ ಜಮೀನುಗಳಲ್ಲಿ ಅಷ್ಟೊಂದು ಬೆಳೆಗಳಿಗೆ ಸಂಬಂಧಿಸಿದ ಕೆಲಸ ಇಲ್ಲದಿರುವುದನ್ನು ಗಮನಿಸಿ ಬನಹಟ್ಟಿ ಗ್ರಾಮದಲ್ಲಿ ಪ್ರತಿ ವರ್ಷ ಬಹನಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುವ ಮೂಲಕ ಗ್ರಾಮದ ಎಲ್ಲ ಯುವಕರಿಗೆ ಕ್ರೀಡೆಯ ಬಗ್ಗೆ ಮತ್ತಷ್ಟು ಉತ್ಸಾಹಾ ತರುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ.


ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಾರಂಭವಾದ ರೀತಿಯಲ್ಲೇ ಬನಹಟ್ಟಿ ಪ್ರೀಮಿಯರ್ ಲೀಗ್ ಸೀಸನ್ - 3 ರ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿ ಪ್ರತಿ ತಂಡಕ್ಕೂ ಕಡ್ಡಾಯವಾಗಿ ಸಮವಸ್ತ್ರ ಮತ್ತು ಪಂದ್ಯಾವಳಿಯುದ್ದಕ್ಕೂ ಕಟ್ಟು ನಿಟ್ಟಿನ ನಿಯಮಗಳನ್ನು ಇಟ್ಟುಕೊಂಡು ಗ್ರಾಮದ ಎಲ್ಲ ಯುವಕರು ಅನ್ಯೋನ್ಯತೆಯಿಂದ ಪ್ರತಿ ಪಂದ್ಯಗಳನ್ನು ಆಡಿಸಿ ಹುರಿದುಂಬಿಸುವ ಕೆಲಸ ಆಗುತ್ತಿದೆ, ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ಇಂತಹ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸುವುದು ಯುವಕರಿಗೆ ಕ್ರೀಡೆಯ ಬಗ್ಗೆ ಮತ್ತಷ್ಟು ಆಸಕ್ತಿ ತರುವಂತಹ ಕೆಲಸ ಆಗಿದೆ ಎಂಬುದನ್ನು ಬನಹಟ್ಟಿ ಗ್ರಾಮದ ಯುವಕರು ಹೇಳಿಕೊಂಡಿರುತ್ತಾರೆ, 

ಹಾಗೆ ಗ್ರಾಮದ ಎಲ್ಲ ಗುರು ಹಿರಿಯರು ಈ ಲೀಗ್ ಹಂತದ ಕ್ರಿಕೆಟ್ ಪಂದ್ಯಾವಳಿಗೆ ಬೆಂಬಲವನ್ನು ವ್ಯಕ್ತಪಡಿಸಿ ಗ್ರಾಮದ ಯುವಕರು ಕ್ರೀಡೆಯಲ್ಲಿ ತೊಡಗಿಕೊಂಡರೆ ಶಾರೀರಿಕವಾಗಿ ಸದೃಢರಾಗುತ್ತಾರೆ ಮತ್ತು ಆರೋಗ್ಯ ಕಾಳಜಿಗೆ ಕ್ರೀಡೆ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿರುತ್ತಾರೆ.

ಒಟ್ಟಾರೆಯಾಗಿ ಬನಹಟ್ಟಿ ಗ್ರಾಮದ ಈ ಒಂದು ಲೀಗ್ ಕ್ರಿಕೆಟ್ ಪಂದ್ಯಾವಳಿ ಅಕ್ಕ ಪಕ್ಕದ ಗ್ರಾಮಗಳಿಗೆ ಮಾದರಿಯಾಗಿ.