ಬಳ್ಳಾರಿ, ಜೂ. 28: ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಸಂಘರ್ಷ ಸಮಿತಿ (ರಿ) ರಾಜ್ಯ ಸಮಿತಿಯ ಬಳ್ಳಾರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಭಾನುವಾರ ನಗರದ ಡಾ. ಬಾಬು ಜಗಜೀವನ್ ರಾಮ ಭವನದಲ್ಲಿ ನಡೆಯಿತು.
ಸಂಸ್ಥಾಪಕ ಅಧ್ಯಕ್ಷ ಮಹೇಶ್ ಕುರುವಳ್ಳಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಮಂತ್ ರಾಜ್ ಬಿ. ಅವರನ್ನು ಬಳ್ಳಾರಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಕುರುವಳ್ಳಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳನ್ನು ಸಮಾಜದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಪದಾಧಿಕಾರಿಯೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನಪರ ಹೋರಾಟಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎ.ಕೆ. ಈರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಟಿ. ಹನುಮಂತ ಹಾಗೂ ಉಮೇಶ್, ರಾಜ್ಯ ಯುವ ಘಟಕದ ಅಧ್ಯಕ್ಷ ಹೆಚ್. ಶಿವರಾಜ್, ರಾಜ್ಯ ಯುವ ಘಟಕದ ಕಾರ್ಯದರ್ಶಿ ಚಂದ್ರಶೇಖರ್, ವಕೀಲ ಮಲ್ಲಿಕಾರ್ಜುನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
*ನೂತನ ಜಿಲ್ಲಾ ಘಟಕದ ಪದಾಧಿಕಾರಿಗಳು:*
ಜಿಲ್ಲಾಧ್ಯಕ್ಷ – ಹಿಮಂತ್ ರಾಜ್ ಬಿ.
ಗೌರವಾಧ್ಯಕ್ಷ – ಎರ್ರಿಸ್ವಾಮಿ (ಸಂಗನಕಲ್)
ಉಪಾಧ್ಯಕ್ಷ – ಹೆಚ್. ಎರ್ರಿಸ್ವಾಮಿ
ಪ್ರಧಾನ ಕಾರ್ಯದರ್ಶಿ – ರಾಜ ಎ.ಕೆ.
ಸಹ ಕಾರ್ಯದರ್ಶಿ – ದುರುಗೇಶ್
ಖಜಾಂಚಿ – ಶಂಕರ್ ಸ್ವಾಮಿ ಎಸ್.ಎಚ್.ಡಿ.
ಸಂಘಟನಾ ಕಾರ್ಯದರ್ಶಿಗಳು – ಗ್ಯಾನಪ್ಪ, ರಮೇಶ್, ಎಂ. ಎರ್ರಿಸ್ವಾಮಿ, ಚಂದ್ರ ಹಾಗೂ ಹುಲುಗಪ್ಪ.
ಸಭೆಯ ಅಂತ್ಯದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘಟನೆಯ ಗುರಿ-ಉದ್ದೇಶಗಳ ಅನುಷ್ಠಾನಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.







