ಯಾದಗಿರಿ.
ವಿದ್ಯುತ್ ಗ್ರಾಹಕರ ಸಂವಾದ, ಎಸ್ಒಪಿ ಸಭೆ ಆಯೋಜಿಸಲಾಗಿದೆ ಎಂದು ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು (ವಿ) ರಾಘವೇಂದ್ರ ಅವರು ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಕಾರ್ಯ ಮತ್ತು ಪಾಲನಾ ಯಾದಗಿರಿ ಹಾಗೂ ಗುರುಮಠಕಲ್ ಉಪ ವಿಭಾಗಗಳಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ, ಎಸ್ಒಪಿಯನ್ನು ಏರ್ಪಡಿಸಲಾಗಿದೆ. ಯಾದಗಿರಿ ವಿಭಾಗದಿಂದ ಯಾದಗಿರಿ, ಗುರುಮಠಕಲ್ ಉಪ ವಿಭಾಗದಲ್ಲಿ ಇದೇ 2025ರ ಫೆಬ್ರವರಿ 15 ರಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಅಭಿಯಂತರರು (ವಿ) ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಸಕ್ತರು ಈ ಸಭೆಗೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಈ ಮೂಲಕ ವಿನಂತಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







