ಯಾದಗಿರಿ.
ರಾಜ್ಯದಲ್ಲಿ ನಿಲ್ಲದ ಮೀಟರ್ ಬಡ್ಡಿ ದಂದೆ ಕಿರುಕುಳ .
ಸಾಲಭಾದೆ ತಾಳಲಾರದೆ ಯುವಕನಿಂದ ಆತ್ಮಹತ್ಯೆಗೆ ಯತ್ನ.
ಯಾದಗಿರಿ ನಗರದ ವಿವೇಕಾನಂದ ನಗರದಲ್ಲಿ ಘಟನೆ.
ಅಂಜು ಪೂಜಾರಿ ಎಂಬಾತ 10 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ
ಸಾಲ ಕೊಟ್ಟವರು ಮನ ಬಂದಂತೆ ಅವಚ್ಯಾ ಶಬ್ದಗಳಿಂದ ನಿಂದನೆಗೆ ಬೇಸತ್ತು ಆತ್ಮಹತ್ಯೆಗೆ ಯತ್ನ.
ಮನೆಯಲ್ಲಿ ಆತ್ಮಹತ್ಯೆಗೆಯತ್ನಿಸಿದ ರಕ್ಷಿಸಿದ ಸಂಬಂದಿಕರು
ಮನೆಯನ್ನು ಅಡವಿಟ್ಟು ಸಾಲಪಡೆದ್ರೂ ಕಿರುಕುಳಕ್ಕೆ ಬೇಸತು ಆತ್ಮಹತ್ಯೆಗೆ ಯತ್ನ.
ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲಿ
ಇತ್ತೀಚಿನ ದಿನಗಳಲ್ಲಿ ಕೆಲವು ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿದ್ದು ಹಳ್ಳಿಗಳಲ್ಲಿ ಮನೆಗಳ ಬಳಿ ಬಂದು ಮೈಕ್ರೊ ಫೈನಾನ್ಸ್ ದಂಧೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಹಲವು ಕುಟುಂಬಗಳು ಸಾಲದ ಸಂಕಷ್ಟಕ್ಕೆ ಸಿಲುಕಿವೆ. ಇಂಥಹ ಅಕ್ರಮ ಬಡ್ಡಿ ವ್ಯವಹಾರ ನಡೆಸುವ ದಂಧೆಕೋರರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ರೈತರು ಹಾಗೂ ಗೃಹಣಿಯರ ಆತ್ಮಹತ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.







