ಯಾದಗಿರಿ..
ನಿರುದ್ಯೋಗಸ್ಥರಿಗೆ ಉಚಿತ ತರಬೇತಿ.
ಯಾದಗಿರಿ. HDFC ಬ್ಯಾಂಕ್ ಪರಿವರ್ತನ್ ಹಾಗೂ ರಾಮ್ಕಿ ಫೌಂಡೇಶನ್ ಸಹಯೋಗದಲ್ಲಿ ಯಾದಗಿರಿಯಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಎಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನ್ ಹಾಗೂ ರಾಮ್ಕಿ ಫೌಂಡೇಶನ್ ನ
ಕೇಂದ್ರ ವ್ಯವಸ್ಥಾಪಕ ವಿಜಯ್ ಕುಮಾರ್ ಉಳಗೊಳ ತಿಳಿಸಿದರು.
ಭಾನುವಾರ ಮದ್ಯಾಹ್ನ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಎಚ್ಡಿಎಫ್ಸಿ ಬ್ಯಾಂಕ್ನ ಪರಿವರ್ತನ್ ಕಾರ್ಯಕ್ರಮ ಮತ್ತು ರಾಮ್ಕಿ ಫೌಂಡೇಶನ್ ಸಹಯೋಗದಲ್ಲಿ ಯಾದಗಿರಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದ್ದು,
ಯಾದಗಿರಿಯ ಚಿತ್ತಾಪುರ ರಸ್ತೆಯ ನಗರಸಭೆ ಕಾರ್ಯಲಯದ ಹಿಂಭಾಗದಲ್ಲಿರುವ ಎಚ್ಡಿಎಫ್ಸಿ-ರಾಮ್ಕಿ ಫೌಂಡೇಶನ್ ತರಬೇತಿ ಕೇಂದ್ರದಲ್ಲಿ ನಡೆಯುತ್ತಿರುವ ಈ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಮೊದಲ ಬ್ಯಾಚ್ ಅನ್ನು ಇದೇ ತಿಂಗಳ 28 ರಂದು ಯಾದಗಿರಿ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ್
ಅಸಿಸ್ಟೆಂಟ್ ಕಮೀಶನರ್ ಡಾ.ಹಂಪಣ್ಣ ಸಜ್ಜನ್, ನಗರಸಭೆ ಅಧ್ಯಕ್ಷೆ ಕುಮಾರಿ ಲಲಿತಾ ಮೌಲಾಲಿ ಅನಪೂರ್, ಪೊಲೀಸ್ ವರಿಷ್ಠಾಧಿಕಾರಿ ಪ್ರೃಥ್ವಿಕ್ ಶಂಕರ್,
ರಾಮಕೆ ಪೌಡೆಂಷನ್ ಅಧ್ಯಕ್ಷರಾದ ಎಮ್.ವಿ ರಾಮಿರೆಡ್ಡಿ, ಮ್ಯಾನೆಂಜಿಂಗ್ ಡ್ಯಾರೆಕ್ಟರ್ ವೈ ಆರ್ ನಾಗರಾಜ, ಪ್ರೋಜಕ್ಟ್ ಮ್ಯಾನೇಜರ್ ಸಂತೋಷ ಕುಮಾರ್, ರಾಮ್ಕಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವೈ. ಎಚ್ಡಿಎಫ್ಸಿ ಬ್ಯಾಂಕ್ ಮತ್ತು ರಾಮ್ಕಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಸ್ತುತ
ಈ ಕಾರ್ಯಕ್ರಮದಡಿಯಲ್ಲಿ ಒಟ್ಟು 1000 ಯುವಕರು ತರಬೇತಿಯನ್ನು ಪಡೆಯುತ್ತಾರೆ,
ಈ ತರಬೇತಿಯನ್ನು ಎಚ್ ಡಿ ಎಫ್ ಸಿ ಹಾಗೂ ರಾಮ್ಕಿ ಫೌಂಡೇಶನ್ನಿಂದ ಜಾರಿಗೊಳಿಸಲಾಗಿದೆ.
ಎರಡು ವರ್ಷಗಳ ಅವಧಿಯಲ್ಲಿ, ಯೋಜನೆಯು ಒಟ್ಟು 1,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಪಿಸಿಬಿ ಅಸೆಂಬ್ಲಿಂಗ್ ಆಪರೇಟರ್, ಸಿಆರ್ ಎಮ್ ಡೊಮೆಸ್ಟಿಕ್ ವಾಯ್ಸ್,
ಗ್ರೌಂಡ್ ಟೆಕ್ನಿಷಿಯನ್ ಮತ್ತು ಸೇಲ್ಸ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ವಲಯಗಳಲ್ಲಿ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಈ ಅಮೂಲ್ಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಈ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳುವಂತೆ ರಾಮ್ಕಿ ಫೌಂಡೇಶನ್ ಅಧ್ಯಕ್ಷ ಎಂ.ವಿ.ರಾಮಿ ರೆಡ್ಡಿ ಕೋರಿದ್ದಾರೆ ಎಂದು ತಿಳಿಸಿದರು ಈ ಸಂಧರ್ಭದಲ್ಲಿ ಸುನೀಲ್ ಕುಮಾರ್ ಹಬ್ಬಳ್ಳಿ ಇದ್ದರು.







