ಅಂಜನಾದ್ರಿ ದೇವಸ್ಥಾನ ಹುಂಡಿ ಎಣಿಕೆ- ಹದಿನೈದು ದಿನದಲ್ಲಿ ರೂ.14.00ಲಕ್ಷ ಸಂಗ್ರಹ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಗಂಗಾವತಿ.(ಸಮರ್ಥವಾಣಿ ನ್ಯೂಜ್)
ತಾಲೂಕಿನ ಐತಿಹಾಸಿಕ ಅಂಜಾನದ್ರಿ ಪರ್ವತದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮಾಡಿದ್ದು, ಹದಿನೈದು ದಿನದ ಅವದ್ಇಯಲ್ಲಿ ರೂ.13,98,605.00 ಹಣ ಸಂಗ್ರಹವಾಗಿದೆ.
ತಹಶೀಲ್ದಾರ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ತಹಶೀಲ್ದಾರ ನಿರ್ದೇಶನದಂತೆ ಬುಧವಾರ ಅಂಜನಾದ್ರಿ ಬೆಟ್ಟದ ದೇವಸ್ಥಾನದಲ್ಲಿ 18/08/2026 ರಿಂದ 02/09/2026 ರವರೆಗೆ ಒಟ್ಟು 15 ದಿನಗಳ ಅವಧಿಯಲ್ಲಿನ ಹುಂಡಿ ತೆರೆದು ಹಣ ಎಣಿಕೆ ಮಾಡಲಾಯಿತು. ಒಟ್ಟು ರೂ.13,98,605.00 ಸಂಗ್ರಹವಾಗಿದ್ದು, ವಿದೇಶಿ ನೋಟುಗಳು ದೇಣಿಗೆಯಾಗಿ ಹುಂಡಿಯಲ್ಲಿ ಬಂದಿವೆ.
ಹಣ ಎಣಿಕೆ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸದಿರಸ್ತೇದಾ ಕ್ರಿಷ್ಣವೇಣಿ, ಆಹಾರ ಇಲಾಖೆ ನಿರೀಕ್ಷಕ ಶೇಖರಪ್ಪ, ಕಂದಾಯ ನಿರೀಕ್ಷರಾದ ಮಹೇಶ ದಲಾಲ್, ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿಗಳಾದ ಸೋಮನಾಥ್, ಮಂಜುನಾಥ್, ಅಮರೇಶ್, ಶಿವಮೂರ್ತಿ, ಪ್ರಭುಸ್ವಾಮಿ, ಶ್ರೀಕಂಠ, ವಿಜಯಕುಮಾರ್ ಚಿತ್ರಗಾರ, ಸಿಬ್ಬಂದಿ ಸೂರ್ಯಕಾಂತ್ , ಸುಧ, ಕವಿತಾ, ಕವಿತಾ, ಸುಪ್ರಿಯ, ಶಿವಕುಮಾರ, ಪರಿಚಾರಕ ನವಾಜ್, ಶರಣಪ್ಪ, ಅಮರೇಶ್, ಸಾಣಾಪುರ ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ನವೀನ್ ಕುಮಾರ, ದೇವಸ್ಥಾನ ಸಿಬ್ಬಂದಿ ವೆಂಕಟೇಶ ಮತ್ತಿತರರು ಇದ್ದರು. ಪೊಲೀಸ್ ಮತ್ತು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಮಾಡಲಾಗಿದೆ.






