ಅನ್ಸಾರಿಗೆ ಬಾಯಿ ಚಪಲ: ಸಚಿವ ರಾಯರೆಡ್ಡಿ ಹೇಳಿಕೆ- ನನ್ನನ್ನು ಸೋಲಿಸೊದು ಜನರು ಹೊರತು ಅನ್ಸಾರಿ ಅಲ್ಲ

ಕೊಪ್ಪಳ. (ಸಮರ್ಥವಾಣಿ ನ್ಯೂಜ್)
ತಮ್ಮ ಸೋಲಿಗೆ ಇನ್ನೊಬ್ಬರನ್ನು ಹೊಣೆ ಮಾಡುವ ಎಂದು ಇಕ್ಬಾಲ್ ಅನ್ಸಾರಿ ಬಾಯಿ ಚಪಲಕ್ಕೆ ಮಾತನಾಡುತ್ತಾನೆ. ನನ್ನನ್ನು ಸೋಲಿಸೋದು ನನ್ನ ಕ್ಷೇತ್ರದ ಜನರೆ ಹೊರತು ಅನ್ಸಾರಿ ಅಲ್ಲ. ಚುನಾವಣೆಯಲ್ಲಿ ನನ್ನ ಕ್ಷೇತ್ರಕ್ಕೆ ಇವರು ಬಂದು ಮತ ಒತ್ತುತಾರೆ ಎನು ಎಂದು ಸಚಿವ ಬಸವರಾಜ ರಾಯರೆಡ್ಡಿ ಅನ್ಸಾರಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.
ಗುರುವಾರ ಕೊಪ್ಪಳದ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರು ಇಕ್ಬಾಲ್ ಅನ್ಸಾರಿ ಹೇಳಿಕೆಯ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸಚಿವ ರಾಯರೆಡ್ಡಿ ಪ್ರತಿಕ್ರೀಯೆ ನೀಡಿದರು. ಮಾತನಾಡಿದ್ದೆಲ್ಲ ಮಾಡೋಕೆ ಆಗಲ್ಲ. ಚುನಾವಣೆಯಲ್ಲಿ ಸೋಲು ಗೆಲುವು ಕ್ಷೇತ್ರದ ಮತದಾರರ ಕೈಯಲ್ಲಿರುತ್ತದೆ. ಇದನ್ನು ಅರಿತುಕೊಳ್ಳಬೇಕು. ಅನ್ಸಾರಿ ನನ್ನ ವಿರುದ್ಧ ಟೀಕೆ ಮಾಡಿರುವುದನ್ನು ನಾನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಟೀಕೆ ಮಾಡುವವರು ಇದ್ದರೆ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಮತ್ತು ನಮ್ಮ ಪಕ್ಷ ನಮಗೆ ಈ ಸ್ಥಾನ ನೀಡಿದೆ. ಜನರ ನಿರೀಕ್ಷೆ ಮತ್ತು ಪಕ್ಷದ ನಾಯಕರ ವಿಶ್ವಾಸದಂತೆ ನಾವು ಕೆಲಸ ಮಾಡಬೇಕಷ್ಟೆ ಎಂದು ಇಕ್ಬಾಲ್ ಅನ್ಸಾರಿಯನ್ನು ಕುಟುಕಿದರು.
ಬಿಜೆಪಿ ಶಾಸಕ ದೊಡ್ಡನಗೌಡ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಸೂಟ್ಕೇಸ್ ಕೊಟ್ಟು ಮಂತ್ರಿಯಾಗಿದ್ದಾರೆ ಎಂದು ಅವರ ಅನುಭವದಿಂದ ಹೇಳಿದ್ದಾರೆ. ಯಾಕೆಂದರೆ ಬಿಜೆಪಿ ಪಕ್ಷದಲ್ಲಿ ಮಾತ್ರ ಹಣ ಕೊಟ್ಟು ಖರೀದಿಸುವ ಸಂಸ್ಕೃತಿ ಇದೆ. ಶಾಸಕರನ್ನೆ ಹಣ ಕೊಟ್ಟು ಖರೀದಿಸಿರುವ ಪಕ್ಷ ಬಿಜೆಪಿ. ಆದರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸಂಸ್ಕೃತಿ ಇಲ್ಲ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಹೇಳಿಕೆಗೆ ಸ್ಪಷ್ಟನೆ ರಾಯರೆಡ್ಡಿ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಇದ್ದರು.






