ಬೂದೇಶ್ವರ ದೇವಸ್ಥಾನಕ್ಕೆ ಸಿಎಂ ಡಿಕೆಶಿ ದರ್ಶನ- ವಿಶೇಷ ಪೂಜೆ: ಲೋಕ ಕಲ್ಯಾಣಕ್ಕೆ ಪ್ರಾರ್ಥನೆ- ಹೆಚ್.ಜಿ.ರಾಮುಲು ಭೇಟಿ: ಶ್ರೀನಾಥಗೆ ಅಭಯ
ಇವರಿಂದ: ಗಿರೀಶ ಕುಲಕರ್ಣೀ ಕುಲಕರ್ಣೀ

ಗಂಗಾವತಿ (ಸಮರ್ಥವಾಣಿ ನ್ಯೂಜ್)
ಸಮೀಪದ ಬೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸಿ ದೇವರಬ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮತ್ತು ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದತು. ಮತ್ತು ಮಾಜಿ ಸಂಸದ ಹಿರಿಯ ಮುಖಂಡ ಹೆಚ್.ಜಿ.ರಾಮುಲು ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್.ಆರ್.ಶ್ರೀನಾಥ ಸಿಎಂ ಅವರಿಗೆ ಸನ್ಮಾನಿಸಿ ಸ್ವಾಗತಿಸಿದರು.
ಶನಿವಾರ ಕೂಡ್ಲಗಿ ಪ್ರಜಾಸೇವೆ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಬೂದಗುಂಪಾ ಗ್ರಾಮದ ಹತ್ತಿರವಿರುವ ಬೂದೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಮಾಧ್ಯದವರೊಂದಿಗೆ ಮಾತನಾಡಿ ಸಿಎಂ ಡಿಕೆಶಿ ಅವರು ಹೆಚ್.ಜಿ.ರಾಮುಲು ಅವರು ನಮ್ಮ ಪಕ್ಷದ ಹಿರಿಯರು. ಮತ್ತು ಅವರು ನನಗೆ ತಂದೆ ಸಮಾನರಾಗಿದ್ದಾರೆ. ನಲವತ್ತು ವರ್ಷಗಳ ಹಿಂದೆ ನನಗೆ ಅವರು ಸಿಎಂ ಆಗುತ್ತಿ ಎಂದು ಆಶೀರ್ವದಿಸಿದ್ದರು. ಹೀಗಾಗಿ ಅವರನ್ನು ಭೇಟಿಯಾಗಿ ಮತ್ತೊಮ್ಮೆ ಅವರ ಆಶೀರ್ವಾದ ಪಡೆದಿದ್ದೇನೆ. ಎಸ್.ಎಂ.ಕೃಷ್ಣ ಅವರೊಂದಿಗೆ ರಾಮುಲು ಮನೆಗೆ ಆಗಮಿಸಿದ್ದೆ. ಶ್ರೀನಾಥ ಅವರಿಗೆ ಎಂಎಲ್ ಸಿ ಮಾಡಲಾಗಿತ್ತು ಎಂದು ನೆನಪಿಕೊಂಡ ಡಿಕೆಶಿ ಅವರು ಬಿಜೆಪಿಯವರು ರಾಜಕಾರಣ ಮಾಡಲು ಪಾದಯಾತ್ರೆ ಮಾಡುತ್ತಿದ್ದಾರೆ. ನಾನು ದೇವರ ದರ್ಶನಕ್ಕೆ ಬಂದಿದ್ದೇನೆ ರಾಜಕಾರಣ ಮಾಡಲು ಅಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಎಂಎಲ್.ಸಿ ಹೆಚ್.ಆರ್.ಶ್ರೀನಾಥ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಉದ್ಯಮಿ ಕೆ.ಕಾಳಪ್ಪ, ಮುಖಂಡ ಎಂ.ಸರ್ವೇಶ, ರಾಜಶೇಖರಪ್ಪ ಮುಸ್ಟೂರ, ಭಾಗಣ್ಣ ಕಡ್ಲಿ, ರಮೇಶ ಗೌಳಿ, ಡಾ.ಸೋಮರಾಜು, ಹೆಚ.ಆರ್.ಭರತ ಮತ್ತಿತರರು ಇದ್ದರು.






