undefined
ಸಿಎಂ ಆರ್ಥಿಕ ಸಲಹೆಗಾರ ಹುದ್ದೆ: ರಾಯರೆಡ್ಡಿಗೆ ಕೊಕ್

ಕೊಪ್ಪಳ.
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಎಂ ಆರ್ಥಿಕ ಸಲಹೆಗಾರರಾಗಿದ್ದ ಯಲಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಅರ್ಥಿಕ ಸಲಹೆಗಾರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಬಾಣದರಂಗಯ್ಯ ಎನ್.ಆರ್ ಅವರು ಆದೇಶ ಮಾಡಿದ್ದಾರೆ.
ಜೂ.8 ರಂದು ಆದೇಶ ಮಾಡಿರುವ ಅವರು ರಾಯರೆಡ್ಡಿಯವರ ಸಿಎಂ ಆರ್ಥಿಕ ಸಲಹೆಗಾರ ಹುದ್ದೆ ಸೇರಿದಂತೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರನ್ನು ಮತ್ತು ಮುಖ್ಯಮಂತ್ರಿ ಗೌರವ ವದ್ಯಕೀಯ ಸಲಹೆಗಾರ ಡಾ.ಹೆಚ್.ರವಿಕುಮಾರ ಅವರನ್ನು ಸಹ ತಕ್ಷಣದಿಂದ ಬಿಡುಗಡೆ ಮಾಡಲಾಗಿದೆ.






