ನಾಳೆ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಪದಗ್ರಹಣ- ಸರ್ವ ವಕೀಲರು ಆಗಮಿಸುವಂತೆ ಬಿ.ವಿ.ಸಜ್ಜನ ವಕೀಲರು ಕರೆ

ಕೊಪ್ಪಳ. (ಸಮರ್ಥವಾಣಿ ನ್ಯೂಜ್)
ಕಳೆದ ತಿಂಗಳು ನಡೆದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಜಿಲ್ಲಾಧ್ಯಕ್ಷ ಪ್ರಕಾಶ ಆನಂದಳ್ಳಿ ಸೇರಿದಂತೆ ಸರ್ವ ಪದಾಧಿಕಾರಿಗಳ ಪದಗ್ರಹಣ ಆ.13 ರಂದು ಗುರುವಾರ ನಡೆಯಲಿದ್ದು, ಸರ್ವ ವಕೀಲರು ಆಗಮಿಸುವಂತೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ವಿ.ಸಜ್ಜನ್ ಕರೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೊಪ್ಪಳ ವಕೀಲರ ಸಂಘಕ್ಕೆ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಪ್ರಕಾಶ ಆನಂದಳ್ಳಿ, ಉಪಾಧ್ಯಕ್ಷರಾಗಿ ಆನಂದಗೌಡ ಎಸ್.ಮಾಲೀಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ.ಸಜ್ಜನ್, ಜಂಟಿ ಕಾರ್ಯದರ್ಶಿಯಾಗಿ ಬಸವರಾಜ ಮೇಲಸಕ್ಕರಿ, ಖಜಾಂಚಿ ಪುಷ್ಪಾ ಬೇವೂರು ಮತ್ತು ಗ್ರಂಥಾಲಯ ಕಾರ್ಯದರ್ಶಿಯಾಗಿ ಮಂಜುನಾಥ ಗಡಾದ ಅವರ ಪದಗ್ರಹಣ ಮತ್ತು ಪ್ರತಿಜ್ಞಾವಿಧಿ ಕಾರ್ಯಕ್ರಮ ವಕೀಲರ ಸಂಘದ ಗ್ರಂಥಾಲಯದ ಮೊದಲನೇ ಮಹಡಿಯಲ್ಲಿ ಮದ್ಯಾಹ್ನ 12.30ಕ್ಕೆ ನೇರವೇರಲಿದೆ. ಸಮಾರಂಭದಲ್ಲಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರು, ಮತ್ತು ಪದಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಸಮಾರಂಭದಲ್ಲಿ ಸರ್ವ ವಕೀಲರ ಸದಸ್ಯರು ಹಾಗೂ ಮಹಿಳಾ ನ್ಯಾಯವಾದಿಗಳು ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಬೇಕು ಎಂದು ಕೊರಿದ್ದಾರೆ.






